ಕುವೈತ್ ಕನ್ನಡ ಕೂಟ ದತ್ತು ಪಡೆದ ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ರೂಮ್‍

ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘ, ಕುವೈತ್ ಕನ್ನಡ ಕೂಟ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ ಸ್ಮಾರ್ಟ್ ಕ್ಲಾಸ್ ರೂಮ್‍ ನ ಅಂತರ್ಜಾಲ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ.

ದಿನಾಂಕ 19 ಮಾರ್ಚ್ 2021 ರ ಶುಕ್ರವಾರ ಸಮಯ 11 ಗಂಟೆಗೆ (ಕುವೈತ್ ಸಮಯ) ಹಮ್ಮಿಕೊಂಡಿದ್ದೇವೆ. 140 ವರ್ಷ ಹಳೆಯದಾದ ಮಾದರಿ ಶಾಲೆಯನ್ನು ಕೆ. ಕೆ. ಡಬ್ಲ್ಯೂ. ಎ. ದತ್ತು ಪಡೆದಿದ್ದು ಅದರ ಅಂಗವಾಗಿ ಸ್ಮಾರ್ಟ್ ಕ್ಲಾಸ್ ರೂಮ್‌ನ ಉದ್ಘಾಟನೆಯನ್ನು ಕೂಟದ ಅಧ್ಯಕ್ಷರಾದ ರೇವಣಸಿದ್ದಪ್ಪ ಹೊಂಬಾಳಿಯವರು ನೆರವೇರಿಸಲಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಆಡಳಿತ ವರ್ಗದವರು ಶಾಲಾ ಆವರಣದಲ್ಲಿ ಹಾಜರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಸಮಾರಂಭದಲ್ಲಿ ಭಾಗಿಯಾಗಲು ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ. ಹಾಗೂ ಕಾರ್ಯಕ್ರಮದ ನೇರ ಪ್ರಸಾರ ಕೂಟದ ಯು-ಟ್ಯೂಬ್ ಛಾನೆಲ್‌ನಲ್ಲಿ ಲಭ್ಯವಿರಲಿದೆ.

KKKWA & KKK adopted Government School at Hirehalli gets Smart Classroom

ಕುವೈತ್ ಕನ್ನಡ ಕೂಟ: ಕುವೈತಿನಲ್ಲಿ ನೆಲಸಿರುವ ಅನಿವಾಸಿ ಭಾರತೀಯರ ಸಂಘಗಳಲ್ಲಿ ಹಳೆಯ ಮತ್ತು ಪ್ರಬುದ್ಧ ಸಂಘಗಳಲ್ಲಿ ಗಣನೆಗೆ ಬರುತ್ತದೆ. ಕೆಲವೇ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದ ಪುಟ್ಟ ಸಮಾವೇಶವಾಗಿ ಉದಯಿಸಿದ ಕುವೈತ್ ಕನ್ನಡ ಕೂಟ ಇಂದು 200 ಕ್ಕೂ ಹೆಚ್ಚು ಸದಸ್ಯಕುಟುಂಬಗಳ ಬಲವುಳ್ಳ 35 ವರ್ಷ ಹಳೆಯ ಮಹತ್ತರ ಸಂಘಟನೆಯಾಗಿ ಬೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+