Priyanka Gandhi Vadra: ಕೆಲವೇ ಕ್ಷಣಗಳಲ್ಲಿ ಹಿರಿಯೂರಿಗೆ ಭೇಟಿ ನೀಡಲಿರುವ ಪ್ರಿಯಾಂಕ ಗಾಂಧಿ
ಹಿರಿಯೂರು, ಏಪ್ರಿಲ್, 26: ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಇಂದು ಮಧ್ಯಾಹ್ನ ಹಿರಿಯೂರಿಗೆ ಪ್ರಿಯಾಂಕ ಗಾಂಧಿ ಆಗಮಿಸಲಿದ್ದಾರೆ. ಇದೇ ವೇಳೆ ಅವರು ಕಾಡುಗೊಲ್ಲರ ಜೊತೆ ಸಂವಾದವನ್ನೂ ನಡೆಸಲಿದ್ದಾರೆ.
ಹಿರಿಯೂರು ಕ್ಷೇತ್ರದಲ್ಲಿ ಕಾಡುಗೊಲ್ಲ ಸಮಾಜದವರೇ ಹೆಚ್ಚಾಗಿದ್ದು, ಇಲ್ಲಿಯ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆಯನ್ನು ಎಣೆದಿದೆ. ಅಲ್ಲದೆ ಇಲ್ಲಿನ ಬುಡಕಟ್ಟು, ಕಾಡುಗೊಲ್ಲ, ಗುಡಿ ಗೌಡ್ರು, ಪೂಜಾರಿಗಳು, ಕಾಡುಗೊಲ್ಲ ಮಹಿಳೆಯರ ಸ್ಥಿತಿಗತಿ ಬಗ್ಗೆ ಪ್ರಿಯಾಂಕ ಗಾಧಿಯವರು ವಿಚಾರಣೆ ಮಾಡಲಿದ್ದಾರೆ.

ನಂತರ ಹಿರಿಯೂರು ನಗರದಿಂದ ರೋಡ್ ಶೋ ಆರಂಭ ಆಗಲಿದೆ. ಈ ವೇಳೆ ರೋಡ್ ಶೋನಲ್ಲಿ ಪಾಲ್ಗೊಳ್ಳಲಿರುವ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಪರ ಮತಯಾಚನೆ ಮಾಡಲಿದ್ದಾರೆ.
ಹನೂರಿನಲ್ಲಿ ಪ್ರಿಯಾಂಕಾ ಗಾಂಧಿ ಮತಬೇಟೆ
ಈಗಾಗಲೇ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ ಬೇಟೆ ನಡೆಸಿದ್ದು, ಕಾಂಗ್ರೆಸ್ ಮಹಿಳೆ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿದ್ದಾರೆ.
ಮಹಿಳೆಯರ ಸಂವಾದದಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕೊಕ್ಕಬೊರೆ ಗ್ರಾಮದ ಬೊಮ್ಮಮ್ಮ ಮಾತನಾಡಿ 'ನಮಗೆ ಇಷ್ಟು ವರ್ಷಗಳಾದರೂ ವಿದ್ಯುತ್ ಇಲ್ಲ, ರಸ್ತೆಯೂ ಇಲ್ಲ, ಮನೆಗಳು ಇಲ್ಲ, ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ' ಎಂದು ಅಳಲು ತೋಡಿಕೊಂಡರು. ಇದಕ್ಕೆ, ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಹನೂರು ತಾಲೂಕಿನ ಹೊಸಪೋಡು ಗ್ರಾಮದ ತಿರುಮಮ್ಮ ಮಾತನಾಡಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದವು, ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದ ಪ್ರಿಯಾಂಕ ಗಾಂಧಿ ತಿರುಮಮ್ಮ ಅಪ್ಪಿಕೊಂಡರು.
ಇನ್ನು, ಪ್ರಿಯಾಂಕಾ ಅಪ್ಪುಗೆ ಬಗ್ಗೆ ತಿರುಮಮ್ಮ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದಾರೆ, ಕಾಂಗ್ರೆಸ್ ಇದ್ದಾಗಲೇ ನಾನು ಗ್ರಾಮ ಪಂಚಾಯತಿ ಸದಸ್ಯಳಾಗಿದ್ದೆ, ನಮ್ಮ ಮತ ಯಾವಾಗಲೂ ಕಾಂಗ್ರೆಸ್‌ಗೆ ಎಂದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಮಾಡಿದರು. ಡೆಸಿ ಗಮನ ಸೆಳೆದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications