ಹಿರಿಯೂರು: ಮತದಾನ ಮಾಡಿದ 104 ವರ್ಷದ ಶತಾಯುಷಿ
ಚಿತ್ರದುರ್ಗ, ಮೇ 10: ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶತಾಯುಷಿಯೋಬ್ಬರು ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 160ರಲ್ಲಿ 104 ವರ್ಷದ ತಿಪ್ಪಿರಮ್ಮ ಎಂಬ ಅಜ್ಜಿ ಉತ್ಸಾಹದಿಂದ ಬಂದು ಮತದಾನ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಾನು ಮತದಾನ ಮಾಡಿದ್ದೇನೆ ನೀವು ಬನ್ನಿ ನಿಮ್ಮವರನ್ನು ಕರೆ ತಂದು ಮತದಾನ ಮಾಡಿ ಎಂಬ ಅಜ್ಜಿ ಯುವ ಮತದಾರರಿಗೆ ಸಂದೇಶ ಸಾರಿದ್ದಾರೆ. ಇನ್ನು ತಿಪ್ಪಿರಮ್ಮ ಅವರಿಗೆ ಮತದಾನ ಮಾಡಲು ಸಹಾಯಕ ಚುನಾವಣಾಧಿಕಾರಿ ಪ್ರಶಾಂತ್. ಕೆ ಪಾಟೀಲ್ ವಿಶೇಷವಾಗಿ ಸಹಾಯ ಮಾಡಿದ್ದಾರೆ.

ಮತದಾನ ಮಾಡಿದ ಮಠಾಧೀಶರು
ಇನ್ನು ಚಿತ್ರದುರ್ಗ ಜಿಲ್ಲೆಯ ವಿವಿಧ ಮಠದ ಮಠಾಧೀಶರು ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದ್ದಾರೆ. ಶಾಂತವೀರ ಶ್ರೀ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಯಾದವ ನಂದಶ್ರೀ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧ ಮಠದ ಮಠಾಧೀಶರುಎಂಕೆ ಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
ಹಾಸನದಲ್ಲಿ ಮೊದಲ ಮತದಾನ ಮಾಡಿದ 80 ವರ್ಷದ ವೃದ್ಧೆ
ಹಾಸನ ಜಿಲ್ಲೆಯಲ್ಲಿ 80 ವರ್ಷದ ವೃದ್ಧೆ ಕಣ್ಣಮ್ಮ ಮೊದಲ ಮತದಾನ ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ತರಕಾರಿ ಮಾರುವ ಕಣ್ಣಮ್ಮ ಬುಧವಾರ ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಮತದಾನ ಮಾಡಬೇಕು ಎನ್ನುವ 80 ವರ್ಷದ ವೃದ್ಧೆಯ ಉತ್ಸಾಹ ಕಂಡು ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ ಚಲಾಯಿಸಿದ ಪಾರ್ಶ್ವವಾಯು ಪೀಡಿತ
ಗದಗ: ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರು ಕುಟುಂಬಸ್ಥರ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿರುವ ಘಟನೆ ಗದಗದಲ್ಲಿ ನಡೆದಿದೆ. ಖಾನತೋಟ ಬಡಾವಣೆ ನಿವಾಸಿ ರೆಹಮಾನ್ ಸಾಬ್ ಹುಯಿಲಗೋಳ ಎನ್ನುವವರು ಗದಗದ ಸರ್ಕಾರಿ ಶಾಲೆ ನಂಬರ್ 2 ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು, ಮತದಾನ ಮಾಡಿದ ಶಾಯಿ ಗುರುತು ತೋರಿಸುತ್ತಾ ಮತಗಟ್ಟೆಯಿಂದ ಹೊರ ಬಂದಿದ್ದಾರೆ. ದೇಹ ಸ್ವಾದೀನ ಇಲ್ಲದಿದ್ದರೂ ವ್ಹೀಲ್ ಚೇರ್ ಮೇಲೆ ಬಂದು ರೆಹಮಾನ್ ತಮ್ಮ ಹಕ್ಕು ಚಲಾಯಿಸಿದ್ದಾರೆ.












Click it and Unblock the Notifications