ಹಿರಿಯೂರು: ಹ್ಯಾಟ್ರಿಕ್ ಕನಸು ಕಾಣುತ್ತಿರುವ ಡಿ. ಸುಧಾಕರ್

Posted By: ಚಿದು ಮಸ್ಕಲ್, ಹಿರಿಯೂರು
Subscribe to Oneindia Kannada

ಸತತವಾಗಿ ಎರಡು ಬಾರಿ ಹಿರಿಯೂರು ಕ್ಷೇತ್ರದಿಂದ ಆಯ್ಕೆಗೊಂಡಿರುವ ಡಿ ಸುಧಾಕರ್ ಅವರು ಮೂರನೇ ಬಾರಿಗೆ ಗೆಲುವಿಗಾಗಿ ಸಾಕಷ್ಟು ಪ್ರಯತ್ನಗಳು ನಡೆಸುತ್ತಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡುವ ತವಕದಲ್ಲಿ ಕನಸು ಕಾಣುತ್ತಿದ್ದಾರೆ.

2008ರಲ್ಲಿ ಚಳ್ಳಕೆರೆ ಮೀಸಲು ಕ್ಷೇತ್ರವಾದ್ದರಿಂದ ಹಿರಿಯೂರು ಕ್ಷೇತ್ರಕ್ಕೆ ಪಕ್ಷೇತರವಾಗಿ ಬಂದು ಭರ್ಜರಿ ಜಯಗಳಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು ಎಂಬ ಹೆಸರು ಪಡೆದರು.

ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು

ನಂತರ ನಡೆದ 2013 ರ ಚುನಾವಣೆಯಲ್ಲಿ ಪ್ರಬಲ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪನ ವಿರುದ್ಧ ಕೂದಲೆಳೆ ಅಂತರದಲ್ಲಿ ಪ್ರಯಾಸದ ಗೆಲುವು ಪಡೆದರು.

ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು

ಶಾಸಕರು ಎರಡು ಬಾರಿ ಜಯಗಳಿಸಿ ತನ್ನದೆ ಆದ ನೆಲೆಯನ್ನ ಕಂಡುಕೊಂಡಿದ್ದು ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಿಂದ ಕೆ. ಪೂರ್ಣಿಮಾ ಶ್ರೀನಿವಾಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಪ್ರಬಲ ಎದುರಾಳಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಸ್ಥಳೀಯ ಜೆಡಿಎಸ್ ಅಭ್ಯರ್ಥಿ ಡಿ. ಯಶೋಧರ ಕೂಡ ಪೈಪೋಟಿ ಒಡ್ಡುವ ನಿರೀಕ್ಷೆಯಲ್ಲಿದ್ದಾರೆ.

ಈಗಿನ ಹಿರಿಯೂರು ಕಾಂಗ್ರೆಸ್ ಚಿತ್ರಣ

ಈಗಿನ ಹಿರಿಯೂರು ಕಾಂಗ್ರೆಸ್ ಚಿತ್ರಣ

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಕೋಟೆ ಎಂದೇ ಹೆಸರಾದ ಹಿರಿಯೂರು ಕಾಂಗ್ರೆಸ್ ಹೆಚ್ಚಾಗಿ ಆಳ್ವಿಕೆ ನಡೆಸಿದೆ. ನಾಲ್ಕು ಜಿ.ಪಂ. ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ. 10 ತಾಲೂಕು ಪಂಚಾಯ್ತಿಯ ಸದಸ್ಯರಿದ್ದು, ಮೀಸಲು ಕ್ಷೇತ್ರದಿಂದ ತಾ.ಪಂ. ಕೈ ವಶದಲ್ಲಿದ್ದು ಎಪಿಎಂಸಿ ಸೇರಿದಂತೆ ಹಳ್ಳಿಗಳಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ ಇದು ಪ್ರಸ್ತುತ ಹಿರಿಯೂರು ಕಾಂಗ್ರೆಸ್ ಚಿತ್ರಣ. .

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಅಭಿವೃದ್ಧಿಯ ಹಾದಿ ಹಿಡಿದ ಡಿ. ಸುಧಾಕರ್

ಅಭಿವೃದ್ಧಿಯ ಹಾದಿ ಹಿಡಿದ ಡಿ. ಸುಧಾಕರ್

ಶಿಕ್ಷಣ ಪ್ರೇಮಿ, ಬಡವರ ಬಂಧು, ದೀನ ದಲಿತರ ಆಶಾಕಿರಣ, ಅಭಿವೃದ್ಧಿಯ ಹರಿಕಾರ, ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಶಾಸಕ ಡಿ. ಸುಧಾಕರ್ ಕಳೆದ ಹತ್ತು ವರ್ಷಗಳಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಆದ್ಯತೆಗೆ ಒತ್ತು ನೀಡಿದ್ದು ವಿಶೇಷವಾಗಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ದೇವರಕೊಟ್ಟ ಮೊರಾರ್ಜಿ ವಸತಿ ಶಾಲೆ, ಹಿರಿಯೂರಿನಲ್ಲಿ ಡಿಪ್ಲೊಮಾ ಕಾಲೇಜು, ಬಬ್ಬೂರು ಫಾರಂ ತೋಟಗಾರಿಕೆ ಕಾಲೇಜು ಸ್ಥಾಪನೆ, ಐಮಂಗಲ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ಸ್ಕೂಲ್, ಜವಗೊಂಡನಹಳ್ಳಿ ಹತ್ತಿರ ವಸತಿ ಶಾಲೆ, ನಗರದಲ್ಲಿ ಶ್ರೀ ಕೃಷ್ಣ ಭವನ, ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ಹೀಗೆ ಪಟ್ಟಿ ಬೆಳೆಯುತ್ತದೆ.

ವಿವಿಧ ಅಭಿವೃದ್ಧಿಯ ಆದ್ಯತೆಗೆ ಒತ್ತು

ವಿವಿಧ ಅಭಿವೃದ್ಧಿಯ ಆದ್ಯತೆಗೆ ಒತ್ತು

ಉಪ್ಪಾರ ಭಗೀರಥ ಭವನ ಸೇರಿದಂತೆ ವಿವಿಧ ಸಮಾಜದ ಭವನಗಳು, ಶುದ್ಧ ಕುಡಿಯುವ ನೀರು ಘಟಕ ಪೂರೈಕೆ, ಬೀದಿ ದೀಪಗಳು, ಮಾರಿ ಕಣಿವೆಯಿಂದ ಹಿರಿಯೂರು ನವರಿಗೆ ರಸ್ತೆ ಆಗಲೀಕರಣ, ಹಿರಿಯೂರಿನಿಂದ ಧರ್ಮಪುರ ದ್ವಿ ಪಥ ರಸ್ತೆ ಆಗಲೀಕರಣ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಿ.ಸಿ ರಸ್ತೆ ಢಾಂಬರೀಕರಣ, ಮಹಿಳಾ ಭವನಗಳು, ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ವೇದಾವತಿ ಕಾಲೇಜುಗಳ ಮೇಲ್ಧರ್ಜೆ, ಕರೆಗಳ ಅಭಿವೃದ್ಧಿ, ಮಹಿಳೆಯರಿಗೆ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ರೈತರಿಗೆ ಸಾಗುವಳಿ ಚೀಟಿ ವಿತರಣೆ, ಚೆಕ್ ಡ್ಯಾಂ ನಿರ್ಮಾಣ, ಬಡವರಿಗೆ ಆರ್ಥಿಕ ಸಹಾಯ ಇನ್ನಿತರ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿಯ ಆದ್ಯತೆಗೆ ಒತ್ತು ನೀಡಲಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.

ಶಾಸಕರ ಪ್ರಮುಖ ಸಾಧನೆ...

ಶಾಸಕರ ಪ್ರಮುಖ ಸಾಧನೆ...

ಎರಡು ವರ್ಷದ ಅವಧಿಯಲ್ಲಿ ಶಾಸಕರ ಪ್ರಮುಖ ಸಾಧನೆ ಎಂದರೆ ಹಿಂದಿನ ವರ್ಷ ಬರಗಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಹಿರಿಯೂರಿನ ಉಡುವಳ್ಳಿ ಮತ್ತು ಮೇಟಿಕುರ್ಕೆ ಕೆರೆಯಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ ಮೇವು ಬೆಳೆದು ಪ್ರತಿಯೊಬ್ಬ ರೈತನ ಕುಟುಂಬದ ಜಾನುವಾರುಗಳಿಗೆ ಮೇವು ವಿತರಿಸಿ ಮಾದರಿ ಶಾಸಕ ಎಂಬ ಬಿರುದು ಪಡೆದ ಡಿ. ಸುಧಾಕರ್. ದೇವರ ಕೊಟ್ಟ, ಐಮಂಗಲ, ಜವಗೊಂಡನಹಳ್ಳಿ, ಯಲ್ಲದಕೆರೆಯ ವಸತಿ ಶಾಲೆಗಳ ನಿರ್ಮಾಣ, ಹಿರಿಯೂರಿನಿಂದ ಧರ್ಮಪುರ ದ್ವಿಪಥ ರಸ್ತೆ ಆಗಲೀಕರಣ ಇವು ಡಿ. ಸುಧಾಕರ್ ನವರ ಪ್ರಮುಖ ಸಾಧನೆಯಾಗಿದೆ ..

ಹಿರಿಯೂರು ನನಗೆ ಹೃದಯ ಸ್ಥಾನ

ಹಿರಿಯೂರು ನನಗೆ ಹೃದಯ ಸ್ಥಾನ

ಹಿರಿಯೂರು ನನಗೆ ಹೃದಯ ಸ್ಥಾನ ಇದು ಶಾಸಕರ ಮನದಾಳದ ಮಾತುಗಳು. ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಹಿರಿಯೂರು ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯತ್ತಿದ್ದೇನೆ. ಅನೇಕ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ ನನಗೆ ಹೆಮ್ಮೆ ಇದೆ. ಹತ್ತು ವರ್ಷದ ನನ್ನ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದು ನನಗೆ ತೃಪ್ತಿ ತಂದಿದೆ. ರಾಜ್ಯದ ಅಂಕಿ ಅಂಶಗಳ ಸಾಲಿನಲ್ಲಿ ಹಿರಿಯೂರು ಒಂದಾಗಿದೆ. ಆಗಾಗಿ ಹಿರಿಯೂರು ಕ್ಷೇತ್ರದ ಋಣ ತೀರಿಸಿದ್ದೆನೆ ಆದಕ್ಕೆ ಹಿರಿಯೂರು ನನಗೆ ಹೃದಯ ಸ್ಥಾನ ಇದ್ದಂತೆ. ಮತ್ತೊಮ್ಮೆ ರಾಜ್ಯದಲ್ಲಿ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲೇ ಹಿರಿಯೂರು ಮಾದರಿ ಕ್ಷೇತ್ರವನ್ನಾಗಿ ಮಾಡ್ತಿನಿ. ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನನಗೆ ಯಾವುದೇ ಜಾತಿ ಇಲ್ಲ ಆದ್ದರಿಂದ ಎಲ್ಲ ಸಮುದಾಯದ ಜನರು ಮತ್ತೊಮ್ಮೆ ಆಶೀರ್ವಾದ ನೀಡುತ್ತಾರೆ ಎಂಬುದು ಶಾಸಕರ ಮನದಾಳದ ಮಾತುಗಳು

ಈ ಬಾರಿ ಮತದಾರ ಕೈ ಹಿಡಿತನಾ ?..

ಈ ಬಾರಿ ಮತದಾರ ಕೈ ಹಿಡಿತನಾ ?..

ಹಿರಿಯೂರು ಕ್ಷೇತ್ರದಿಂದ ಎರೆಡು ಬಾರಿ ಜಯಗಳಿಸಿ ಮೂರನೇ ಅವಧಿಗೆ ಜಯದ ಕನಸು ಕಾಣುತ್ತೀರುವ ಡಿ. ಸುಧಾಕರ್ ಗೆ ಮತದಾರ ಕೈ ಹಿಡಿಯುತ್ತನಾ ಅಥವಾ ಕೈ ಕೊಡ್ತನಾ ಕಾದು ನೋಡಬೇಕಿದೆ. ಇನ್ನೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ತನ್ನದೆ ಆದ ಅಬ್ಬರದ ಪ್ರಚಾರ ಆರಂಭಿಸಿದ್ದು ಇದರ ಮಧ್ಯೆ ಒಂದಿಷ್ಟು ಭಿನ್ನಾಬಿಪ್ರಾಯಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಇಂಜನೀಯರಿಂಗ್ ಕಾಲೇಜು, ಬಸ್ ಡಿಪೋ, ವಾಣಿ ವಿಲಾಸ ಜಲಾಶಯದ ನೀರು (DRDO ಯೋಜನೆ) ಚಳ್ಳಕೆರೆಗೆ ತಗೊಂಡು ಹೋಗಿದ್ದಾರೆ ಎಂಬ ಆರೋಪ ಮತದಾರರಿಂದ ಕೇಳಿ ಬರುತ್ತಿದೆ.

ಕ್ಷೇತ್ರ ಅಭಿವೃದ್ಧಿ ಆಗಿಲ್ಲ

ಕ್ಷೇತ್ರ ಅಭಿವೃದ್ಧಿ ಆಗಿಲ್ಲ

ಮಾರಿಕಣಿವೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿಲ್ಲ ಲಕ್ಷಾಂತರ ತೆಂಗು, ಅಡಿಕೆ, ಬಾಳೆ ಒಣಗಿದ್ದು ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ.

ಮರಳು ಮಾಫಿಯಾ, ಕ್ಷೇತ್ರ ಅಭಿವೃದ್ಧಿ ಆಗಿಲ್ಲ, ಧರ್ಮಪುರ ತಾಲ್ಲೂಕು ಘೋಷಣೆ ಮಾಡಿಲ್ಲ. ದಬ್ಬಾಳಿಕೆ ನೆಡೆಸುತ್ತಿದ್ದು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಮತದಾರರಿಂದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಬಾರಿ ಹ್ಯಾಟ್ರಿಕ್ ಕನಸು ನನಾಸಾಗುತ್ತಾ. ಮತದಾರ ಹೊಸ ಮುಖಕ್ಕೆ ಮಣೆ ಹಾಕ್ತನಾ. ಹಿರಿಯೂರು ಆಳ್ವಿಕೆ ಮಾಡೋರು ಯಾರು. ಹಿರಿಯೂರಿನ ಕೋಟೆ ರಾಜನಿಗೋ ಅಥವಾ ರಾಣಿಗೋ ಎಂಬ ನಿಮ್ಮೆಲ್ಲ ಪ್ರಶ್ನೆಗಳಿಗೆ ಮೇ 15 ರಂದು ಸ್ಪಷ್ಟ ಚಿತ್ರಣ ದೊರೆಯಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: D Sudhakar hopes to replicate the success for the third time in Hiriyur constituency, Chitradurga with his development activities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ