• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ್ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡುವ ಮನುಷ್ಯ: ಸಚಿವ ಶ್ರೀರಾಮುಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್‌, 06: ಇತ್ತೀಚೆಗಷ್ಟೇ ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮಕ್ಕೆ ಸಚಿವ ಬಿ. ಶ್ರೀರಾಮುಲು ಗೈರಾಗಿದ್ದರು. ಆಗಿನಿಂದ ಇವರಿಬ್ಬರ ನಡುವೆ ಮನಸ್ತಾಪ ಇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಹಾಗೆಯೇ ಸಚಿವ ಶ್ರೀರಾಮುಲು, ಜನಾರ್ದನ್‌ ರೆಡ್ಡಿ ನಡುವಿನ ಸ್ನೇಹ ಮುರಿದು ಬಿತ್ತಾ? ಎನ್ನುವ ಪ್ರಶ್ನೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಇದೀಗ ಹಿರಿಯೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಬಿ. ಶ್ರೀರಾಮುಲು, ಜನಾರ್ದನ್‌ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡುವಂತಹ ಮನುಷ್ಯ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಶ್ರೀ ರಾಮುಲು ಸೋಲಿನ ಬಳಿಕ ಮೊಳಕಾಲ್ಮೂರಿನಿಂದ ಪಲಾಯನ ಮಾಡಬಹುದು- ವಿ.ಎಸ್ ಉಗ್ರಪ್ಪಶ್ರೀ ರಾಮುಲು ಸೋಲಿನ ಬಳಿಕ ಮೊಳಕಾಲ್ಮೂರಿನಿಂದ ಪಲಾಯನ ಮಾಡಬಹುದು- ವಿ.ಎಸ್ ಉಗ್ರಪ್ಪ

ಜನಾರ್ದನ ರೆಡ್ಡಿ ಸ್ನೇಹಕ್ಕೆ ಪ್ರಾಣ ಕೊಡ್ತಾರೆ

ಹಿರಿಯೂರು ನಗರದಲ್ಲಿ ಹಮ್ಮಿಕೊಂಡಿದ್ದ ನೂತನ ಕೆಎಸ್‌ಆರ್‌ಟಿಸಿ ಬಸ್ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೇರವೇರಿಸಿ ಮಾತಾಡಿದ ಅವರು, ಬಿಜೆಪಿ ಸಾಮಾನ್ಯ ಕಾರ್ಯಕರ್ತ, ಸ್ನೇಹಿತನಾಗಿ ಎರಡೂ ಕೆಲಸಗಳ‌ನ್ನು ನಿಭಾಯಿಸುವ ಶಕ್ತಿಯನ್ನು ಆ ಭಗವಂತ ನೀಡಿದ್ದಾನೆ. ಸ್ನೇಹ ಮತ್ತು ಪಾರ್ಟಿಯನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು. ಇನ್ನು ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷ ಹಾಗೂ ಯಾರಿಗೂ ಮುಜುಗರವಾಗದಂತೆ ನೋಡಿಕೊಳ್ಳುತ್ತೇನೆ. ರಾಜಕಾರಣ ಹೊರೆತುಪಡಿಸಿ ನನ್ನ ಸ್ನೇಹ ಹೆಚ್ಚಾಗಿದೆ. ಆದರೆ ಪಕ್ಷ ನನ್ನ ತಾಯಿ ಸಮಾನ, ಇವೆರಡನ್ನು ಸಮಾನವಾಗಿ ತೆಗೆದುಕೊಂಡು ಹೋಗುವಂತಹ ಶಕ್ತಿಯನ್ನು‌ ದೇವರು ನೀಡಿದ್ದಾನೆ. ಅದರಂತೆಯೇ ನಾನು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ರಾಮುಲು ವಾಗ್ದಾಳಿ

ಜನಾರ್ಧನ ರೆಡ್ಡಿ ಅವರ ಭೇಟಿ ಮಾಡಿ ಮನವೊಲಿಸಲು ಅವಕಾಶ ಸಿಕ್ಕಿಲ್ಲ. ಈಗಾಗಲೇ ನಾನು ಹಿರಿಯ ಸಮ್ಮುಖದಲ್ಲಿ ಮಾತನಾಡಿದ್ದೇನೆ. ಭೇಟಿಯಾಗುವ ಅವಕಾಶ ಸಿಕ್ಕರೆ ಅವರನ್ನು ಭೇಟಿಯಾಗಿ ನಿಮಗೆ ಉತ್ತರ ಕೊಡುತ್ತೇನೆ ಎಂದು ಭರವಸೆ ನೀಡಿದರು. "ಇನ್ನು ಕಾಂಗ್ರೆಸ್‌ನಲ್ಲಿ ಯಾರು ಎಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅರ್ಜಿಯನ್ನು ಹಾಕಬೇಕಿದೆ. ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಅರ್ಜಿಯನ್ನು ಹಾಕಿಕೊಂಡಿಲ್ಲ. ಅವರು ಸುಮ್ಮನೆ ಅಂತರ ಪಿಶಾಚಿ ತರ ಓಡಾಡುತ್ತಿದ್ದಾರೆ."‌

ಎಚ್‌.ವಿಶ್ವನಾಥ್ ಬಗ್ಗೆ ಸಚಿವರು ಹೇಳಿದ್ದೇನು?

ಹಾಗೂ ಮಾಜಿ ಸಂಸದ ವಿಎಸ್ ಉಗ್ರಪ್ಪನವರ ಬಗ್ಗೆ ನಾನೇನು ಹೇಳಲಿ ಬಂದು ಮೊಳಕಾಲ್ಮೂರಿನಲ್ಲಿಯೇ ಸ್ಪರ್ಧಿಸಲಿ, ಯಾರು ಬೇಡ ಅಂದಿದ್ದಾರೆ ಎಂದರು. ನಾವು ಕೂಡ ಗೆಲುವಿಗೆ ತಂತ್ರವನ್ನು ಮಾಡುತ್ತಿದ್ದೇವೆ. ಇನ್ನು ಚಳ್ಳಕೆರೆ ಕ್ಷೇತ್ರ ಒಂದು ನಮಗೆ ಕೈ ಕೊಟ್ಟಿತ್ತು. ಮುಂಬರುವ ಚುನಾವಣೆಯಲ್ಲಿ ಅದನ್ನು ಗೆಲ್ಲಿಸಿಕೊಳ್ಳಲು ನಾನು, ಪೂರ್ಣಿಮಾ ಮತ್ತು ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರು ತಂತ್ರಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾನೇನು ಹೇಳುವುದಿಲ್ಲ. ಅವರನ್ನು ನಾನು ಭೇಟಿಯಾಗಿಲ್ಲ, ಭೇಟಿ ಮಾಡಿದ ಮೇಲೆ ತಿಳಿಸುತ್ತೇನೆ ಎಂದರು.

ಗಂಗಾವತಿಯಲ್ಲಿ ಜನಾರ್ದನ್‌ ರೆಡ್ಡಿ ಟೆಂಪಲ್‌ ರನ್, ಗುಟ್ಟು ಬಿಟ್ಟುಕೊಡದ ಮಾಜಿ ಸಚಿವಗಂಗಾವತಿಯಲ್ಲಿ ಜನಾರ್ದನ್‌ ರೆಡ್ಡಿ ಟೆಂಪಲ್‌ ರನ್, ಗುಟ್ಟು ಬಿಟ್ಟುಕೊಡದ ಮಾಜಿ ಸಚಿವ

English summary
Minister B Sriramulu said in Hiriyur of Chitradurga district, Janardhana Reddy is my best friend, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X