• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶು ಇಲಾಖೆಯ ಉಚಿತ ಔಷಧಿ ಕಳ್ಳದಂಧೆಯಲ್ಲಿ ಮಾರಾಟ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಜುಲೈ 26: ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಅದೆಷ್ಟೋ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅವುಗಳಲ್ಲಿ ಬಹುಪಾಲು, ತಲುಪಬೇಕಾದವರಿಗೆ ತಲುಪುವುದೇ ಇಲ್ಲ. ಇಲ್ಲೂ ಅಷ್ಟೆ. ಪಶು ಇಲಾಖೆಯಿಂದ ಬಡವರಿಗೆ ಸಿಗಬೇಕಾದ ಪಶು ಆಸ್ಪತ್ರೆಯ ಉಚಿತ ಔಷಧಿಗಳು ಅವರಿಗೆ ದೊರೆಯದೇ ಕಾಳಸಂತೆಯಲ್ಲಿ ಹಣಕೊಟ್ಟು ಪಡೆದುಕೊಳ್ಳುವ ಸ್ಥಿತಿ ಇದೆ.

ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಏಳು ಮಂದಿ ಬಂಧನಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಏಳು ಮಂದಿ ಬಂಧನ

"ಕುರಿ, ದನ, ಎಮ್ಮೆ, ಮತ್ತಿತರ ಪ್ರಾಣಿಗಳಿಗೆ ಹಾಕುವ ಔಷಧಿಗಳು, ಇಂಜಕ್ಷನ್ ಟ್ಯೂಬ್ ಗಳು, ಮಾತ್ರೆಗಳನ್ನು ಸರ್ಕಾರದಿಂದ ಉಚಿತವಾಗಿ ಕೊಡುತ್ತಿದ್ದು, ಇವೆಲ್ಲವೂ ಪಶು ಇಲಾಖೆಯಲ್ಲಿ ಸಿಗಬೇಕಾದ ಔಷಧಿಗಳಾಗಿವೆ. ಆದರೆ ಈ ಔಷಧಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಮನೆಯೊಂದರಲ್ಲಿ ಮಾರಾಟವಾಗುತ್ತಿರುವ ಮಾಹಿತಿ ಲಭ್ಯವಾಗಿದೆ. ಒಂದು 250 ಎಂ.ಎಲ್ ಬಾಟಲಿಯನ್ನು 60 ರಿಂದ 80 ರೂಗೆ ಮಾರಾಟ ಮಾಡಲಾಗುತ್ತಿದೆ" ಎಂದು ಬಲ್ಲಪ್ಪನಹಟ್ಟಿ ಚಿತ್ತಯ್ಯ ಆರೋಪಿಸಿದರು.

ಇಲಾಖೆಯ ಅಧಿಕಾರಿಗಳು ದಂಧೆಕೋರರ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದ್ದು, ಪಶು ಆಸ್ಟತ್ರೆಗೆ ಬರಬೇಕಾದ ಔಷಧಿಗಳು ನೇರವಾಗಿ ದಂಧೆಕೋರರ ಮನೆಯಲ್ಲಿ ಮಾರಾಟವಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ, ಇದಕ್ಕೆ ಕಡಿವಾಣ ಹಾಕಲಿ ಎನ್ನುತ್ತಿದ್ದಾರೆ ರೈತರು.

English summary
The government is implementing schemes to benefit the poor. But most of the schemes wont reach them. Same way, governments veternary free medicines is also not reaching poor farmers. illegal Sale Of Free Veternary Medicines happening in Hiriyur of chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X