ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಕಿಯಾದ ಶಾಸಕಿ; ಮಕ್ಕಳಿಗೆ 'ವಂಶವೃಕ್ಷ'ದ ಬಗ್ಗೆ ಪಾಠ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 01; ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ನಗರದ ಬಸ್ ನಿಲ್ದಾಣ ಸಮೀಪವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ "ವಂಶವೃಕ್ಷ"ದ ಬಗ್ಗೆ ಪಾಠ ಹೇಳಿ ಕೊಟ್ಟರು.

ಆಗಾಗ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಶಾಸಕಿ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಾರೆ. ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಶಿಕ್ಷಕಿಯಾದರು.

ಹಿರಿಯೂರು ಕ್ಷೇತ್ರದಿಂದ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧೆ? ಹಿರಿಯೂರು ಕ್ಷೇತ್ರದಿಂದ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧೆ?

ವಂಶವೃಕ್ಷದಲ್ಲಿ ಯಾರು, ಯಾರು ಬರುತ್ತಾರೆ? ಎಂದು ಕಪ್ಪು ಹಲಗೆಯ ಮೇಲೆ ಬರೆದು ತೋರಿಸಿದರು. ವಂಶವೃಕ್ಷ ಹೇಗೆ ಬೆಳೆಯುತ್ತದೆ? ಎನ್ನುವುದನ್ನು ಅಜ್ಜಿ, ತಾತ, ಅಪ್ಪ, ಅಮ್ಮ ನಂತರ ಅಣ್ಣ ತಂಗಿ ಹೀಗೆ ಮಕ್ಕಳಿಗೆ ವಿವರಿಸಿದರು.

ಹಿರಿಯೂರು: ಕಾಂಗ್ರೆಸ್‌ಗೆ ಗೆಲುವು, ನೆಲಕಚ್ಚಿದ ಬಿಜೆಪಿ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಮುನ್ಸೂಚನೆ!ಹಿರಿಯೂರು: ಕಾಂಗ್ರೆಸ್‌ಗೆ ಗೆಲುವು, ನೆಲಕಚ್ಚಿದ ಬಿಜೆಪಿ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಮುನ್ಸೂಚನೆ!

Hiriyur MLA Turns Teacher Takes Class To Students

ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಾಸಕಿ ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಕಳೆದ ಬಾರಿ ನಾನು ಶಾಲೆಗೆ ಬಂದಾಗ ನಿಮ್ಮ ಕಟ್ಟಡ ಸೋರುತ್ತಿತ್ತು. ಈಗ ರೀಪೇರಿ ಆಗಿದೆಯಲ್ವಾ? ಎಂದು ಮಕ್ಕಳನ್ನು ಕೇಳಿದರು.

ಹಿರಿಯೂರು ತೇರುಮಲ್ಲೇಶ್ವರ ದೇವಾಲಯದ ಇತಿಹಾಸ ಹಿರಿಯೂರು ತೇರುಮಲ್ಲೇಶ್ವರ ದೇವಾಲಯದ ಇತಿಹಾಸ

ಶಾಲಾ ಶಿಕ್ಷಕರು ಇವರು ಯಾರು? ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಹಿರಿಯೂರು ಶಾಸಕರು ಎಂದು ವಿದ್ಯಾರ್ಥಿಗಳು ಉತ್ತರಿಸಿದರು. ನಂತರ ಶಾಸಕರು ನಿಮ್ಮ ಶಾಲೆ ಯಾವ ರೀತಿ ಅಭಿವೃದ್ಧಿ ಆಗಿದೆ? ಎಂದು ವಿದ್ಯಾರ್ಥಿಗಳನ್ನು ಕೇಳಿದರು.

ಗಿಡ ಬೆಳಸಿದ್ದೇವೆ, ಕಟ್ಟಡ ಸ್ವಲ್ಪ ರೀಪೇರಿ ಆಗಿದೆ, ಗೋಡೆ ಕಟ್ಟಿದ್ದೀವಿ, ಶಾಲೆಗೆ ಬಣ್ಣ ಆಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಿದ್ಯಾರ್ಥಿಗಳು ಶಾಸಕರಿಗೆ ಹೊಸ ಕಟ್ಟಡ ಹಾಗೂ ಶೌಚಾಲಯ ಬೇಕು ಎಂದು ಬೇಡಿಕೆ ಇಟ್ಟರು.

Recommended Video

ವಿಜಯಪುರ: ಸಚಿವ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ ಯತ್ನಾಳ್ | Oneindia Kannada

ಇದಕ್ಕೆ ಸ್ಪಂದಿಸಿದ ಶಾಸಕಿ ಇನ್ನೊಮ್ಮೆ ನೋಡೋಣ ಎಂದು ಹೇಳಿದರು. ಶಾಲೆಗೆ ಶೌಚಾಲಯದ ಅವಶ್ಯಕತೆ ಇದ್ದು, ಇದರ ಬಗ್ಗೆ ನೀಲ ನಕ್ಷೆ ತಯಾರಿಸಿ ಎಂದು ಶಿಕ್ಷಕರಿಗೆ ಶಾಸಕರು ಸೂಚಿಸಿದರು.

English summary
Chitradurga district Hiriyur BJP MLA Poornima Srinivas turned as a teacher. Took class to students at government high school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X