ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಜುಲೈ.01: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿದು ಹಿರಿಯೂರಿನ ವಿ.ವಿ. ಸಾಗರಕ್ಕೆ ಹರಿದು ಬರಲು ಐದು ವರ್ಷ ಬೇಕು. ಒಂದು ವೇಳೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದರೆ ಎರಡುಮೂರು ವರ್ಷದಲ್ಲಿ ಬರಬಹುದು ಎಂದು ಹಿರಿಯೂರು ಶಾಸಕಿ ಕೆ . ಪೂರ್ಣಿಮಾ ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಅಜ್ಜಂಪುರ, ತರೀಕೆರೆ, ಲಕ್ಕುವಳ್ಳಿ ಹತ್ತಿರ ನಡೆಯುತ್ತಿರುವ ಕಾಮಗಾರಿ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮತ್ತು ಅನೇಕ ರೈತರೊಂದಿಗೆ ವೀಕ್ಷಿಸಿದ ಪೂರ್ಣಿಮಾ ಅವರು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಮಾತನಾಡಿದರು.

ಈ ಕಾಮಗಾರಿಗೆ 2008 ರಲ್ಲಿ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಇದರ ಕಡೆ ಗಮನಹರಿಸಿಲ್ಲ. ಹಾಗಾಗಿ ಈ ಕಾಮಗಾರಿ ಎಲ್ಲೊ ಒಂದು ಕಡೆ ವಿಳಂಬ ಆಗಿದೆ.

Hiriyur MLA Poornima Srinivas watched the ongoing work near Ajjampura

ಆದರೆ ಹಿರಿಯೂರಿನ ಶಾಸಕಿಯಾಗಿ ಒಂದು ವರ್ಷದೊಳಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯ ಪೂರ್ವದಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಅದರಂತೆಯೇ ಕಳೆದ ತಿಂಗಳು ಪಟ್ರೆಹಳ್ಳಿಯಲ್ಲಿ ಕುಡಿಯುವ ನೀರಿಗೆ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

Hiriyur MLA Poornima Srinivas watched the ongoing work near Ajjampura

ಉಳಿದಂತೆ ಕೆ.ಸಿ.ರೊಪ್ಪ , ಪಾಲವ್ವನಹಳ್ಳಿ , ಹುಚ್ಚವ್ವನಹಳ್ಳಿ, ಯಲಕೂರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+