Get Updates
Get notified of breaking news, exclusive insights, and must-see stories!

ಹಿರಿಯೂರು; ಶಾಸಕಿ ಕೆ.ಪೂರ್ಣಿಮಾಗೆ ಟಕ್ಕರ್ ಕೊಡಲು ತಯಾರಾದ್ರಾ ಎಎಪಿ ಅಭ್ಯರ್ಥಿ?

ಚಿತ್ರದುರ್ಗ, ಅಕ್ಟೋಬರ್‌, 13: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಅದರಂತೆಯೇ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್‌ಗೆ ಟಕ್ಕರ್ ಕೊಡಲು ಎಎಪಿ ತಯಾರಿ ನಡೆಸಿದೆ. ಎಎಪಿ ಅಭ್ಯರ್ಥಿಯಾಗಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿಯನ್ನು ಕಣಕ್ಕಿಳಿಸಲು ರೈತ ಸಂಘದ ಸದಸ್ಯರು ತಿರ್ಮಾನಿಸಿದ್ದಾರೆ.

ಈಗಾಗಲೇ ಒಂದು ಸುತ್ತಿನ ಮಾತುಕತೆಯ ಸಭೆ ನಡೆಸಿದ ಮುಖಂಡರು ರೈತ ಸಂಘದ ಬೆಂಬಲದೊಂದಿಗೆ ಅಂತಿಮವಾಗಿ ತಿಪ್ಪೇಸ್ವಾಮಿ ಅವರನ್ನು ಎಎಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಟಾಂಗ್ ಕೊಡಲು ನಿರ್ಧರಿಸಿದ್ದಾರೆ.

ಹಿರಿಯೂರು ತಾಲೂಕಿನ ಬೀರೆನಹಳ್ಳಿ ಗ್ರಾಮದಲ್ಲಿ ಜನಿಸಿದ ಕೆ.ಟಿ.ತಿಪ್ಪೇಸ್ವಾಮಿ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. 2000ನೇ ಸಾಲಿನಲ್ಲಿ ಪ್ರಥಮ ಬಾರಿಗೆ ತಾಲೂಕು ಯುವಶಕ್ತಿ ಸಂಘವನ್ನು ಪ್ರಾರಂಭಿಸಿ ಯುವಕರಲ್ಲಿ ಜಾಗೃತಿ ಮೂಡಿಸುತ್ತಾ ಪ್ರಬಲವಾಗಿ ಯುವಶಕ್ತಿ ಸಂಘವನ್ನು ಕಟ್ಟಿ ಬೆಳೆಸಿದರು.

 ಹಲವು ಹೋರಾಟಗಳಲ್ಲಿ ತಿಪ್ಪೇಸ್ವಾಮಿ ಭಾಗಿ

ಹಲವು ಹೋರಾಟಗಳಲ್ಲಿ ತಿಪ್ಪೇಸ್ವಾಮಿ ಭಾಗಿ

2002ರಲ್ಲಿ ಬೀರೆನಹಳ್ಳಿ ಬಳಿ ಆರ್‌.ಕೆ. ಪವರ್ ಜನ್ ಕಾರ್ಖಾನೆ ಪ್ರಾರಂಭಿಸಬಾರದು ಎಂದು ಬೃಹತ್ ಹೋರಾಟ ಮಾಡಿ ಗಮನ ಸೆಳೆದಿದ್ದರು. ಮಾಜಿ ಸಚಿವ ಡಿ. ಮಂಜುನಾಥ್ ಅವರ ಸಹಕಾರದಿಂದ ಜನತಾದಳದಿಂದ ತಿಪ್ಪೇಸ್ವಾಮಿ ತನ್ನ ಪತ್ನಿಯನ್ನು 2004ರಲ್ಲಿ ತಾಲೂಕು ಪಂಚಾಯತಿ ಸದಸ್ಯರನ್ನಾಗಿ ಮಾಡಿದರು. ನಂತರ ಯುವಶಕ್ತಿ ಸಂಘವನ್ನು ಬಲಿಷ್ಠಗೊಳಿಸುತ್ತಾ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾಲ್ಕು ವರ್ಷ ನಿರಂತರವಾಗಿ ಪ್ರತಿವರ್ಷ 150 ಜೋಡಿಗಳಿಗೆ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ನಂತರ ಇವರು 2011ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ಬಳಿಕ ಕೆ.ಟಿ.ತಿಪ್ಪೇಸ್ವಾಮಿ ಅವರು ವ್ಯವಸಾಯದ ಕಡೆಗೆ ಗಮನಹರಿಸಿ ರೈತ ಸಂಘದ ಮೂಲಕ ನಿರಂತರವಾಗಿ ಹೋರಾಟದಲ್ಲಿ ತೊಡಗಿಕೊಂಡರು. 2019ರಲ್ಲಿ ಹಿರಿಯೂರು ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಮತ್ತೆ ರೈತ ಸಂಘದ ಅಧ್ಯಕ್ಷರಾಗಿ ಮರು ಆಯ್ಕೆ ಆಗಿದ್ದಾರೆ. ಅಧ್ಯಕ್ಷರಾಗಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇವರು ಇದೀಗ ಚುನಾವಣೆಗೆ ಸಜ್ಜಾಗಿದ್ದಾರೆ. ಈಗಾಗಲೇ ಎಎಪಿ ರಾಜ್ಯ ನಾಯಕರನ್ನು ಭೇಟಿಯಾಗಿ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ರೈತ ಸಂಘದ ನೆರವಿನೊಂದಿಗೆ ಚುನಾವಣೆ ಎದುರಿಸಲಿದ್ದಾರೆ. ಈಗಾಗಲೇ ತಾಲೂಕಿನ ಎಲ್ಲಾ ಹಳ್ಳಿಗಳಲ್ಲೂ ರೈತ ಸಂಘದ ಗ್ರಾಮ ಘಟಕಗಳನ್ನು ಸ್ಥಾಪಿಸಿ ಸುಮಾರು 20 ಸಾವಿರಕ್ಕೂ ಹೆಚ್ಚು ರೈತ ಸಂಘದ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

 ಶಾಸಕಿಗೆ ತಲೆನೋವಾಯ್ತ ತಿಪ್ಪೇಸ್ವಾಮಿ ಸ್ಪರ್ಧೆ?

ಶಾಸಕಿಗೆ ತಲೆನೋವಾಯ್ತ ತಿಪ್ಪೇಸ್ವಾಮಿ ಸ್ಪರ್ಧೆ?

ಇದೀಗ ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಟಕ್ಕರ್ ನೀಡಲು ಕೆ.ಟಿ.ತಿಪ್ಪೇಸ್ವಾಮಿ ಸಂಘಟನೆಗೆ ಮುಂದಾಗಿದ್ದಾರೆ. ಇನ್ನು ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಕಾಡುಗೊಲ್ಲ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಇಲ್ಲಿ ಸುಮಾರು 50 ಸಾವಿರ ಮತಗಳಿವೆ. ಇನ್ನು ಕಾಡುಗೊಲ್ಲ ಸಮುದಾಯಕ್ಕೆ ಸೇರಿರುವ ಕೆ.ಟಿ. ತಿಪ್ಪೇಸ್ವಾಮಿ ಹಾಲಿ ಶಾಸಕಿ ಕೆ.ಪೂರ್ಣಿಮಾ ಅವರ ಗೆಲುವಿಗೆ ಅಡ್ಡಗಾಲು ಆಗುತ್ತಾರಾ ಎನ್ನುವುದೇ ಯಕ್ಷ ಪ್ರಶ್ನೆ ಆಗಿದೆ. ಹೀಗೆ ತಿಪ್ಪೇಸ್ವಾಮಿ ಸ್ಪರ್ಧೆಯಿಂದ ಪೂರ್ಣಿಮಾಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಮತ್ತೊಂದು ಕಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಯಾರೆಲ್ಲ ಸ್ಪರ್ಧಿಸುತ್ತಾರೆ ಎನ್ನುವುದು ಇನ್ನು ಖಚಿತವಾಗಿಲ್ಲ.

 ತಿಪ್ಪೇಸ್ವಾಮಿ ಪರ ನಿಂತ ರೈತ ಸಂಘದ ಸದಸ್ಯರು

ತಿಪ್ಪೇಸ್ವಾಮಿ ಪರ ನಿಂತ ರೈತ ಸಂಘದ ಸದಸ್ಯರು

ತಾಲೂಕಿನಲ್ಲಿ ರೈತ ಸಂಘ ಬಲಿಷ್ಠವಾಗಿದ್ದು, ಅನೇಕ ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದೇವೆ. ನಮ್ಮ ಹೋರಾಟದ ಪ್ರಯತ್ನದಿಂದ ವಾಣಿವಿಲಾಸ ಜಲಾಶಯ ಭರ್ತಿಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿರುವುದರಿಂದ ರಾಜಕಾರಣದ ಅವಶ್ಯಕತೆ ಇದೆ. ಈಗಾಗಲೇ ನಮ್ಮ ರೈತ ಸಂಘ 180 ಹಳ್ಳಿಗಳಲ್ಲಿ ಗ್ರಾಮ ಘಟಕ ಪ್ರಾರಂಭಿಸಿ, ಸುಮಾರು 23 ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಲಾಗಿದೆ. ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತ. ರೈತ ಸಂಘದ ಸಿದ್ಧಾಂತ ಮತ್ತು ಆಮ್ ಆದ್ಮಿ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಈ ಮೂರು ಪಕ್ಷಗಳನ್ನು ಹೊರತುಪಡಿಸಿ ದೇಶದಲ್ಲೇ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭ್ರಷ್ಟಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿದೆ. ಸಂಘದ ಪದಾಧಿಕಾರಿಗಳು ಮತ್ತು ನಮ್ಮ ತಾಲೂಕಿನ ಸಮಾನ ಮನಸ್ಕರು ಜೊತೆಗೂಡಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಹಳ್ಳಿಹಳ್ಳಿಗೂ ಪ್ರಚಾರಕ್ಕೆ ಹೋಗೋಣ. ಜೊತೆಗೆ ಎಲ್ಲರ ಸಹಕಾರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಸಂಘದ ಸದಸ್ಯರು ಹೇಳಿದರು.

 ಈಗಿನಿಂದಲೇ ರಾಜಕೀಯ ಅಖಾಡಕ್ಕೆ ಸಿದ್ಧತೆ

ಈಗಿನಿಂದಲೇ ರಾಜಕೀಯ ಅಖಾಡಕ್ಕೆ ಸಿದ್ಧತೆ

ಒಟ್ಟಾರೆಯಾಗಿ ಈ ಬಾರಿ ಹಿರಿಯೂರು ವಿಧಾನಸಭಾ ಚುನಾವಣೆ ರಂಗೇರಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಎಪಿ ಪಕ್ಷದ ಅಭ್ಯರ್ಥಿಗಳು ಪ್ರಮುಖ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ. ಉಳಿದಂತೆ ಇನ್ನು ಸಣ್ಣ ಪುಟ್ಟ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸಹ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಹೀಗೆ ಹಿರಿಯೂರು ಕ್ಷೇತ್ರ ಈ ಬಾರಿ ರಾಜಕೀಯ ರಣರಂಗವಾಗಲಿದ್ದು, ಗೆಲುವು ಯಾರ ಪಾಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+