ಭಾರೀ ಮಳೆ: ಚಳ್ಳಕೆರೆಯ ಜಾಜೂರಿನಲ್ಲಿ ಸಿಡಿಲು ಬಡಿದು 100ಕ್ಕೂ ಅಧಿಕ ಕುರಿಗಳ ಬಲಿ, ಕುರಿಗಾಹಿಗಳು ಕಂಗಾಲು
ಚಿತ್ರದುರ್ಗ, ಆಗಸ್ಟ್, 17: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಶುಕ್ರವಾರ (ಆಗಸ್ಟ್ 16) ರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರೆದಿದ್ದಾನೆ. ಇತ್ತ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿಯೂ ಕೂಡ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು 106 ಕುರಿಗಳು ಬಲಿಯಾದ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ (ಆಗಸ್ಟ್ 16) ರಾತ್ರಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. ಗ್ರಾಮದ ಆಂಜನೇಯವರ ಅವರಿಗೆ ಸೇರಿದ 90 ಹಾಗೂ ಓಬಣ್ಣ ಎಂಬುವವರಿಗೆ ಸೇರಿದ 16 ಕುರಿಗಳು ಸೇರಿದಂತೆ ಒಟ್ಟು 106 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಇನ್ನು ಘಟನಾ ಜಾಜೂರು ಗ್ರಾಮಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರಿಕ್ಷೆ ನಡೆಸಿದರು. ಅನುಗ್ರಹ ಯೋಜನೆಯಡಿ ಪರಿಹಾರಕ್ಕೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕ ಡಾ.ರೇವಣ್ಣ ಮಾಹಿತಿ ನೀಡಿದರು. ಜಾಜೂರು ಗ್ರಾಮಕ್ಕೆ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಆರ್‌ಐ ರಾಜೇಶ್ ಗ್ರಾಮಲೆಕ್ಕಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಳ್ಳಕ್ಕೆ ನುಗ್ಗಿದ ಪ್ರವಾಸಿಗರ ಕಾರು: ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಇಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್‌ನಲ್ಲಿ ನಡೆದಿದ್ದು, ದಂಪತಿ ಸೇರಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಮೂಲದ ಪೀಯುಶ್ ಸಿಂಘಲ್, ಪತ್ನಿ ರಾಧಿಕಾ ಹಾಗೂ ಮಕ್ಕಳಾದ ಅದಿಲ್ ಮತ್ತು ಮಾನ್ಯ ಎಂಬವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಊಟಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುವ ವೇಳೆ ಕಾರು ರಸ್ತೆ ಬದಿಯ 10 ಅಡಿ ಆಳದ ಹಳ್ಳಕ್ಕೆ ಇಳಿದಿ ಪರಿಣಾಮ ನಾಲ್ವರಿಗೆ ಗಂಭೀರ ಪೆಟ್ಟುಗಳಾಗಿದೆ. ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಹೈವೆ ಗಸ್ತು ಸಿಬ್ಬಂದಿ ನಾಗೇಂದ್ರ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ರಾಜೀವ್ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ಕೊಟ್ಟಿದ್ದಾರೆ. ಇನ್ನು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications