ಕೊರೊನಾ ನಿಯಂತ್ರಣ: ದೇವರೆ ನಮ್ಮನ್ನು ಕಾಪಾಡಬೇಕು ಎಂದ ಆರೋಗ್ಯ ಸಚಿವ
ಚಿತ್ರದುರ್ಗ, ಜುಲೈ 15: ಕೊರೊನಾ ವೈರಸ್ ನಿಯಂತ್ರಣ ಯಾರ ಕೈಯಲ್ಲಿ ಇದೆ ಹೇಳಿ? ಇವತ್ತು ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್ ನಿವಾರಣೆ ಜವಾಬ್ದಾರಿಯನ್ನು ದೇವರ ಹೆಗಲಿಗೆ ಹಾಕಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಸರ್ಕಾರದ ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆಗೆ ತಿರುಗೇಟು ನೀಡಿದರು.
ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಸರ್ಕಾರ ವಿಫಲವಾಗಿದೆ ಎಂಬ ಏನೇ ಆರೋಪಗಳು ಇರಬಹುದು, ಆದರೆ ಬಡ ಜನರ ಬದುಕು ಮುಖ್ಯ. ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಬೇಕು ಎಂದರು.

ಮುಂದಿನ ಎರಡು ತಿಂಗಳಲ್ಲಿ ಕೊರೊನಾ ವೈರಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೋಂಕು ಹೆಚ್ಚಳದ ಬಗ್ಗೆ ಸುಳಿವು ನೀಡಿದರು. ಕೊರೊನಾ ಸೋಂಕಿಗೆ ಶ್ರೀಮಂತರು, ಬಡವರು ಎಂಬುದು ಗೊತ್ತಿಲ್ಲ, ಎಲ್ಲರಿಗೂ ಸೋಂಕು ಹರಡುವುದು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ವಿರೋಧ ಪಕ್ಷದವರು ಏನೇ ಆರೋಪಗಳನ್ನು ಮಾಡಿದರೂ ಕೊರೊನಾ ಸೋಂಕು ಹರಡುವ ತೀವ್ರತೆ ಹೆಚ್ಚಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕು ಹೆಚ್ಚಾಗುವ ಲಕ್ಷಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.












Click it and Unblock the Notifications