ಕಾಯಂಗೊಳಿಸಿ, ಇಲ್ಲ ದಯಾಮರಣ ನೀಡಿ: ಚಿತ್ರದುರ್ಗದಲ್ಲಿ ಅತಿಥಿ ಉಪನ್ಯಾಸಕರ ಅಳಲು
ಚಿತ್ರದುರ್ಗ, ಡಿಸೆಂಬರ್, 12: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣಕರ್ತರಾಗುವ ಉಪನ್ಯಾಸಕರೇ ಇದೀಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಸೇವೆಯನ್ನು ಕಾಯಂಗೊಳಿಸಬೇಕು ಎಂದು ಹೊತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಕಳೆದ 20 ದಿನಗಳಿಂದಲೂ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಸಿಲಿನಲ್ಲೇ ಕುಳಿತು ಪ್ರತಭಟನೆ ನಡೆಸುತ್ತಲೇ ಬಂದಿದ್ದಾರೆ. ಹಾಗೆಯೇ ಇಂದು ಕೂಡ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಮುಂದುವರೆಸಿದ ಘಟನೆ ನಡೆಯಿತು.
ತರಕಾರಿ, ಹಣ್ಣು, ಸೊಪ್ಪು ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 20 ದಿನಗಳಿಂದ ನಡೆಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರದ ಯಾವುದೇ ಅಧಿಕಾರಿಗಳು ಕೂಡ ನಮ್ಮ ಧ್ವನಿಗೆ ಕ್ಯಾರೆ ಅನ್ನುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಕೈಯಲ್ಲಿ ತಕ್ಕಡಿ ಹಿಡಿದು ಅವರೆಕಾಯಿ, ಸೀತಾಫಲ ಟೊಮೆಟೊ ಹೀಗೆ ಹಣ್ಣು ಮತ್ತು ಸೊಪ್ಪು ಸೇರಿದಂತೆ ತರಕಾರಿ ಮಾರಾಟ ಕಂಡ ದೃಶ್ಯ ಸಮಾನವಾಗಿತ್ತು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಅಥಿತಿ ಉಪನ್ಯಾಸಕರ ಸೇವೆಯನ್ನು ಅವಲಂಬಿಸಿವೆ. 20 ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನಿಷಕರ ಬದುಕು ಅತಂತ್ರವಾಗಿದೆ. ಈ ಅನಿಷ್ಟ ಪದ್ದತಿಯನ್ನು ಮುಕ್ತಿಗೊಳಿಸಿ ಸೇವೆಯನ್ನು ಕಾಯಂಗೊಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪದವಿ ಕಾಲೇಜುಗಳಲ್ಲಿ ಶೇಕಡಾ 80ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡುತ್ತಿರುವ ಸಂಬಳ ತೀರಾ ಕಡಿಮೆಯಾಗಿದೆ. ಇದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವುದು ಪ್ರತಿಭಟನೆಗಾಗಿ ಅಲ್ಲ, ಕೆಲಸವಿಲ್ಲದೆ ಕೆಲವರು ತರಕಾರಿ, ಹಣ್ಣು, ಸೊಪ್ಪು ಹೀಗೆ ತರಕಾರಿ ಮಾರಾಟಗಳನ್ನು ಮಾಡುತ್ತಿದ್ದಾರೆ. ಜೊತೆಗೆ ತರಕಾರಿ ಹಣ್ಣು, ಮಾರಾಟ, ತೋಟ ಕಾರ್ಮಿಕರು, ಗಾರೆ ಪೈಂಟ್ ಕೆಲಸ ಮಾಡುತ್ತಿರುವುದು ವಾಸ್ತವ ಸಂಗತಿ ಎಂದು ಕಣ್ಣೀರಿಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಸೇವೆ ಕಾಯಂಗೊಳಿಸಿ ಸೇವಾ ವಿಲೀನಗೊಳಿಸುವಾಗ 2009ರ ಜುಲೈ 11ರೊಳಗೆ ಎಂಫಿಲ್ ಪದವಿ ಪಡೆದವರನ್ನು ಪರಿಗಣಿಸಬೇಕು. 10ರಿಂದ 15 ವರ್ಷಗಳಿಂದ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿರುವ ವಾರ್ಷಿಕ ಪರೀಕ್ಷೆ ಪದ್ಧತಿಯಲ್ಲಿ ಪದವಿ, ಸ್ನಾತಕೋತರ ಪದವಿ ಪಡೆದಿದ್ದಾರೆ. ಇವರ ಅಂಕಗಳಿಗೂ ಈಗಿನ ಸೆಮಿಸ್ಟರ್ ಪದ್ಧತಿಯು ತುಂಬಾ ವ್ಯತ್ಯಾಸವಿದೆ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಸರಿಪಡಿಸಬೇಕು ಎಂದು ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗಗೊಳಿಸುವದಾಗಿ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಪ್ರಯತ್ನ ನಡೆಸಿಲ್ಲ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಸರ್ಕಾರವನ್ನು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.












Click it and Unblock the Notifications