ಹಿರಿಯೂರಿನಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗೋವು
ಚಿತ್ರದುರ್ಗ, ಫೆಬ್ರವರಿ 17: ಹುತಾತ್ಮ ಯೋಧರಿಗೆ ಗೋವು ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಎಬಿವಿಪಿ ವಿದ್ಯಾರ್ಥಿಗಳಿಂದ ನಡೆಯುತ್ತಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗೋವು ಕೂಡ ಮೌನದಿಂದ ಭಾಗವಹಿಸಿದೆ.
ಶ್ರದ್ಧಾಂಜಲಿ ಸಭೆಗೆ ಇದ್ದಕ್ಕಿದ್ದಂತೆ ಆಗಮಿಸಿದ ಗೋವು, ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ಸಾಥ್ ನೀಡಿದೆ. ಭಾರತೀಯ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗೋವಿನ ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಹುಟ್ಟುಹಬ್ಬದ ಹಣ ಸಿಆರ್ಪಿಎಫ್ ಯೋಧರ ಕಲ್ಯಾಣ ನಿಧಿಗೆ
ಬಳ್ಳಾರಿಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಬಾಲಕಿ ತನ್ನ ಹುಟ್ಟುಹಬ್ಬ ಆಚರಿಸಲು ಕೂಡಿಹಾಕಿದ್ದ ಹಣವನ್ನು ಸಿಆರ್ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಲು ಮುಂದಾಗಿದ್ದಾಳೆ.
ನಗರದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ತನುಶ್ರೀ, ತನ್ನ ಹುಟ್ಟುಹಬ್ಬ ಆಚರಣೆಗಾಗಿ ಹಣ ಸಂಗ್ರಹಿಸಿದ್ದಳು. ನಿನ್ನೆ ಶನಿವಾರ (ಫೆ.16) ಹುಟ್ಟುಹಬ್ಬವಿತ್ತು. ಆದರೆ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ತಿಳಿದ ಬಾಲಕಿ, ತನ್ನ ಹುಟ್ಟುಹಬ್ಬ ಆಚರಣೆ ಬದಲಾಗಿ ಆ ಹಣವನ್ನು ಸಿಆರ್ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಲು ಮುಂದಾಗಿದ್ದಾಳೆ.
ಪೋಷಕರೊಂದಿಗೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ತನುಶ್ರೀ ತನ್ನ ಆಪೇಕ್ಷೆಯನ್ನು ತಿಳಿಸಿದ್ದಾಳೆ. ಡಿಡಿ ಮೂಲಕ ಸಿಆರ್ಪಿಎಫ್ ಯೋಧರ ಕಲ್ಯಾಣ ನಿಧಿಗೆ ಇಂದು ಬೆಳಗ್ಗೆ ಬಾಲಕಿ ತನುಶ್ರೀ ಹಣ ಪಾವತಿ ಮಾಡಿದ್ದಾಳೆ.












Click it and Unblock the Notifications