ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳಿಗೆ ಕೊರೊನಾ ಸೋಂಕು
ಚಿತ್ರದುರ್ಗ, ಮೇ 8: ಗುಜರಾತ್ ನಿಂದ 15 ತಬ್ಲಿಘಿಗಳು ಕೋಟೆನಾಡು ಚಿತ್ರದುರ್ಗಕ್ಕೆ ಬಂದಿದ್ದರು. ಈಗ ಅವರಲ್ಲಿ 3 ತಬ್ಲಿಘಿಗಳಿಗೆ ಕೊರೊನಾ ಸೋಂಕು ಪತ್ತೆ ಆಗಿದ್ದು, ಚಿತ್ರದುರ್ಗಕ್ಕೂ ಕೊರೊನಾ ಮಹಾಮಾರಿ ವಕ್ಕರಿಸಿದೆ. ಈ ಮಾಹಿತಿಯನ್ನು ಅಧೀಕೃತವಾಗಿ ಚಿತ್ರದುರ್ಗ ಆರೋಗ್ಯ ಅಧಿಕಾರಿ ಡಾ. ಪಾಲಾಕ್ಷ ಹೇಳಿದ್ದಾರೆ.
Recommended Video
ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿ ಅನುಮತಿಯಿಲ್ಲದೇ ಚಿತ್ರದುರ್ಗಕ್ಕೆ ತಬ್ಲಿಘಿಗಳು ಬಂದಿದ್ದರು. ಅವರನ್ನು ತಪಾಸಣೆ ಮಾಡಿ ಕ್ವಾರಂಟೈನ್ ಇರಿಸಲಾಗಿತ್ತು. ಇದೀಗ 15 ಜನ ತಬ್ಲಿಘಿಗಳಲ್ಲಿ 3 ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇಲ್ಲಿಯವರೆಗೂ ಚಿತ್ರದುರ್ಗ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಹಾಗಾಗಿ ಇಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿತ್ತು. ನೆಮ್ಮದಿಯಿಂದ ಇದ್ದ ಚಿತ್ರದುರ್ಗಕ್ಕೆ ತಬ್ಲಿಘಿಗಳು ಬಂದಿದ್ದೇ ತಡ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದಲ್ಲದೇ ಪಕ್ಕದ ಜಿಲ್ಲೆಯ ತುಮಕೂರಿನ ಪಾವಗಡಕ್ಕೂ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರು ತಬ್ಲಿಘಿಗಳನ್ನು ಸ್ಥಳಾಂತರಿಸಿ ಕ್ವಾರಂಟೈನ್ ಮಾಡಲು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಹಿಂದೆ ಚಿತ್ರದುರ್ಗದಲ್ಲಿ ಒಂದು ಕೊರೊನಾ ವೈರಸ್ ಸೋಕು ಪತ್ತೆಯಾಗಿತ್ತು. ಅದನ್ನು ದಾವಣಗೆರೆ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಅಲ್ಲದೇ ಕೊರೊನಾ ವೈರಸ್ ನಿಂದ ಅವರು ಗುಣಮುಖವಾಗಿದ್ದರು.












Click it and Unblock the Notifications