ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ಭದ್ರಾ ಮೇಲ್ದಂಡೆ ಯೋಜನೆ, ರೈತರಿಂದ ಪಾದಯಾತ್ರೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 02; ಭದ್ರಾ ಮೇಲ್ದಂಡೆ ಕಾಮಗಾರಿ ಪ್ರಾರಂಭವಾಗಿ 14 ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಬೇಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸುಮಾರು 1500 ರೈತರು ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ಮುತ್ತಿನಕೊಪ್ಪದಿಂದ ಭದ್ರಾ ಜಲಾಶಯದ ತನಕ ಪಾದಯಾತ್ರೆ ಕೈಗೊಂಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸುಮಾರು 25 ಬಸ್ ಹಾಗೂ ಕಾರುಗಳಲ್ಲಿ 1500ಕ್ಕೂ ಹೆಚ್ಚು ರೈತರು ಭಾನುವಾರ ರಾತ್ರಿ 10 ಗಂಟೆಗೆ ಹಿರಿಯೂರಿನಿಂದ ಹೊರಟು ಬೆಳಗ್ಗೆ 6 ಗಂಟೆಗೆ ಚಿಕ್ಕಮಗಳೂರು ತಲುಪಲಿದ್ದಾರೆ.

"ಮುತ್ತಿನಕೊಪ್ಪದಿಂದ ಪಾದಯಾತ್ರೆ ಹೊರಟು ನಂತರ ಭದ್ರಾ ಜಲಾಶಯದ ಬಳಿ ನಡೆಯುವ ಸಮಾವೇಶದಲ್ಲಿ ನೀರಾವರಿ ಸಚಿವರಿಗೆ ಹಾಗೂ ನೀರಾವರಿ ಇಲಾಖೆಯ ಎಂಡಿಗೆ ಮನವಿ ಸಲ್ಲಿಸಲಾಗುತ್ತದೆ" ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ಹೇಳಿದ್ದಾರೆ.

 ಬೇಸಿಗೆ ಬೆಳೆಗೆ ಭದ್ರಾ ಜಲಾಶಯದಿಂದ 120 ದಿನ ನೀರು; ಅಧಿಕಾರಿಗಳ ವಿರುದ್ಧ ಕಾಡಾ ಆಕ್ರೋಶ ಬೇಸಿಗೆ ಬೆಳೆಗೆ ಭದ್ರಾ ಜಲಾಶಯದಿಂದ 120 ದಿನ ನೀರು; ಅಧಿಕಾರಿಗಳ ವಿರುದ್ಧ ಕಾಡಾ ಆಕ್ರೋಶ

Complete Upper Bhadra Project Padayatra By Farmers

ತುಂಗಾದಿಂದ ಭದ್ರಾ, ಹಾಗೂ ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ತಾತ್ಕಾಲಿಕವಾಗಿ ನೀರು ಹರಿಸುತ್ತಿದ್ದು, ಅದನ್ನು ಶಾಶ್ವತ ಗೊಳಿಸಬೇಕೆಂದು ರೈತರು ಆಗ್ರಹ ಪಡಿಸಲಿದ್ದಾರೆ.

 ಭದ್ರಾ ಮೇಲ್ದಂಡೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯಾಗಲಿದೆ: ಗೋವಿಂದ ಕಾರಜೋಳ ಭದ್ರಾ ಮೇಲ್ದಂಡೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯಾಗಲಿದೆ: ಗೋವಿಂದ ಕಾರಜೋಳ

ಭದ್ರಾದಿಂದ ವಾಣಿ ವಿಲಾಸ ಸಾಗರಕ್ಕೆ 10 ಟಿಎಂಸಿ ನೀರನ್ನು ಕುಡಿಯಲು ಹಾಗೂ ಕೃಷಿಗೆ ಮೀಸಲಿಡಬೇಕು. ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹಾಗೂ ಧರ್ಮಪುರ ಹೋಬಳಿಗೆ ವಿವಿ ಸಾಗರ ಜಲಾಶಯದ ಎರಡು ನಾಲೆಗಳಲ್ಲಿ ರೈತರ ಜಮೀನುಗಳಿಗೆ ನೀರು ಹಾಯಿಸಬೇಕು ಹಾಗೂ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯವಾಗಬೇಕು. ಭದ್ರಾ ಮೇಲ್ದಂಡೆ ಯೋಜನೆಯ ರಾಷ್ಟ್ರೀಯ ಯೋಜನೆಯಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಅಧಿವೇಶನದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ.

 ಭದ್ರಾ ಜಲಾಶಯ ಕಳಪೆ ಕಾಮಗಾರಿ; ತನಿಖೆಗೆ ಸಮಿತಿ ರಚನೆ: ಸಚಿವ ಈಶ್ವರಪ್ಪ ಭದ್ರಾ ಜಲಾಶಯ ಕಳಪೆ ಕಾಮಗಾರಿ; ತನಿಖೆಗೆ ಸಮಿತಿ ರಚನೆ: ಸಚಿವ ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ವೈರಸ್ ಭೀತಿ ಬಳಿಕ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ರೈತರದ್ದು. ಕಳೆದ 14 ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇದುವರೆಗೂ ಕೇವಲ ಶೇ 40 ರಷ್ಟು ಮಾತ್ರ ನಡೆದಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷಗಳು ಕಾಯಬೇಕು ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮನ್ನಣೆ ಉಪಯೋಗವೇನು ?; ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿಸುವ ಪ್ರಸ್ತಾವ ಈಗಾಗಲೇ ಕೇಂದದ್ರ ಅಂಗಳದಲ್ಲಿದೆ. ಕೇಂದ್ರದ 10ಕ್ಕೂ ಅಧಿಕ ಇಲಾಖೆಗಳು ಕ್ಲಿಯರೆನ್ಸ್ ನೀಡಿವೆ ಎಂಬ ಮಾಹಿತಿ ಇದೆ. ಅಧಿಕೃತವಾಗಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾದರೆ, ಯೋಜನೆಯ ಶೇ 90ರಷ್ಟು ಭಾಗ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಒಟ್ಟು 21,000 ಕೋಟಿ ಅನುದಾನ ಕೇಂದ್ರ ನೀಡುತ್ತದೆ. ಯೋಜನೆ ಪೂರ್ಣಗೊಳಿಸಿ ಬಯಲು ಸೀಮೆಯ ನಾಡಿನ ಕೆರೆಗಳನ್ನು ತುಂಬಿಸುವುದಲ್ಲದೇ, ಭದ್ರಾ ಮೇಲ್ದಂಡೆ ಯೋಜನೆಯಿಂದ 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲು ಗುರಿ ಹೊಂದಬಹುದಾಗಿದೆ.

ಯೋಜನೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ. ಕೇಂದ್ರ ಸರ್ಕಾರ ಭದ್ರಾಗೆ ರಾಷ್ಟೀಯ ನೀರಾವರಿ ಯೋಜನೆ ಎಂದು ಘೋಷಣೆ ಮಾಡಿದ ಬಳಿಕ 21 ಸಾವಿರ ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಆಗ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಅಧಿಕಾರಿಗಳು ಸಮಗ್ರ ಯೋಜನೆಯ ಕಡೆ ಗಮನಹರಿಸಿ ಕೆಲಸ ಮಾಡುವಂತೆ ಒತ್ತಾಯಿಸಲಾಗಿದೆ.

ಕಾಮಗಾರಿ ಆರಂಭವಾಗಿ 14 ವಾದರೂ ಪೂರ್ಣಗೊಳ್ಳದೇ ಇರುವುದು ಚಿತ್ರದುರ್ಗ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಕೂಡ ಇದರ ಕಡೆ ಗಮನ ಹರಿಸುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.

Recommended Video

South Africa vs India: ಭಾರತದ ಐತಿಹಾಸಿಕ ಜಯ ನೋಡಿ ಪಾಕಿಸ್ತಾನ ಹೇಳಿದ್ದೇನು | Oneindia Kannada

English summary
Padayatra by farmers from Muthinakoppa to Bhadra dam to urge government to complete upper Bhadra project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X