ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ಕೋಟಾ ನೋಟು ದಂಧೆ ಮಾಡುತ್ತಿದ್ದ ನಗರಸಭೆ ಜೆಡಿಎಸ್ ಸದಸ್ಯನ ಬಂಧನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 22: ಚಿತ್ರದುರ್ಗ ನಗರಸಭೆ ಜೆಡಿಎಸ್ ಸದಸ್ಯ ಹಾಗೂ ಕೋಟಾ ನೋಟು ಆರೋಪಿಯಾಗಿರುವ ಚಂದ್ರಶೇಖರ್ ಅಲಿಯಾಸ್ ಕೋಟಾ ನೋಟು ಚಂದ್ರನನ್ನು ಚಿತ್ರದುರ್ಗ ಬಡಾವಣೆ ಪೋಲಿಸರು ಬಂಧಿಸಿದ್ದಾರೆ.

ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್‌ನ ಸದಸ್ಯನಾಗಿರುವ ಚಂದ್ರಶೇಖರ್ ಅಲಿಯಾಸ್ ಕೋಟಾ ನೋಟು ಚಂದ್ರ @ಬೆಂಡೋಲೆ ಚಂದ್ರ ಎಂದೆಲ್ಲಾ ಕರೆಯುವ ಈತ ಮೊದಲಿನಿಂಲೂ ಹಣ ಡಬ್ಲಿಂಗ್, ಕೋಟಾ ನೋಟು ದಂಧೆ ಮಾಡಿಕೊಂಡು ಬರುತ್ತಿದ್ದನು ಎಂದು ಹೇಳಲಾಗುತ್ತಿದೆ.

ಚಂದ್ರಶೇಖರ್ ಕಳೆದ 10 ವರ್ಷಗಳ ಹಿಂದೆ ಪೊಲೀಸರು ದೊಡ್ಡ ಪೇಟೆಯಲ್ಲಿರುವ ಹಾಗೂ ಮಹಾವೀರ ಕಾಲೊನಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆ ಕೋಟಾ ನೋಟು ಹಾಗೂ ನೋಟು ಮುದ್ರಣದ ಯಂತ್ರವನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಆದರೂ ಈತ ಕೋಟಾ ನೋಟು ದಂಧೆಯನ್ನು ನಿಲ್ಲಿಸದೆ ಹಳೇ ಚಾಳಿಯನ್ನು ಮುಂದುವರೆಸಿಕೊಂಡು ಬಂದಿದ್ದನು.

Chitradurga Municipal JDS Member Chandrashekhar Arrested in Connection With Fake Currency Case

ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಚಂದ್ರಶೇಖರ್ ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾನೆ.

ಇದೀಗ ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರಿಂದ ಆರು ಲಕ್ಷ ಪಡೆದು, ಆತನಿಗೆ ವಾಪಸ್ ಹದಿನೆಂಟು ಲಕ್ಷ ನಕಲಿ ನೋಟು ನೀಡಿ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಚಂದ್ರಶೇಖರ್‌ಗಾಗಿ ಹುಡುಕಾಟ ನಡೆಸಿದ್ದರು.

ಚಂದ್ರಶೇಖರ್‌ ನೆರೆಯ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಕೊನೆಗೂ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರಪ್ಪ ಚಂದ್ರಶೇಖರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Recommended Video

ಹೊಸ ವರ್ಷ ಮಾರ್ಗಸೂಚಿ ಪ್ರಕಾರ ಏನಿದು ಏನಿಲ್ಲ ? | oneindia kannada

English summary
Chitradurga Police Arrested Municipal JDS member Chandrashekhar in connection with Fake Currency Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X