ಚೀನಾಕ್ಕೆ ಧರ್ಮದ ಎಚ್ಚರಿಕೆ ನೀಡಿದ ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಜೂ. 21: ಸುಖಾಸುಮ್ಮನೆ ಗಡಿಯಲ್ಲಿ ಖ್ಯಾತೆ ತೆಗೆದು ತಾನೂ ಅಪಾರ ಪ್ರಾಣ ಹಾನಿ ಮಾಡಿಕೊಂಡು ಭಾರತದ 20 ಸೈನಿಕರು ಹುತಾತ್ಮರಾಗುವಂತೆ ಮಾಡಿರುವ ಚೀನಾಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಎಚ್ಚರಿಕೆಯ ಮಾತನ್ನಾಡಿದ್ದಾರೆ. ಯಾವಾಗಲೂ ಮೌಢ್ಯ ವಿರೋಧಿಸಿ ಜಾಗೃತಿ ಮೂಡಿಸುವ ಶರಣರು, ಮಠದಲ್ಲಿ ಇವತ್ತು ಗ್ರಹಣ ಕಾಲದಲ್ಲೇ ಆಹಾರ ಸೇವನೆ ವ್ಯವಸ್ಥೆ ಮಾಡಿದ್ದರು. ಅದಾದ ಬಳಿಕ ಚೀನಾ ಗಡಿ ತಂಟೆ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Recommended Video

      Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

      ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಮುರುಘಾ ಮಠದಲ್ಲಿ ಬಸವ ಧ್ಯಾನ ಯೋಗ ಮಾಡಲಾಯಿತು. ಮುರುಘಾ ಶರಣರ ನೇತೃತ್ವದಲ್ಲಿ ಸಾಮೂಹಿಕ ಲಿಂಗ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಸವಣ್ಣನ ವಚನಗಳ ಪಠಣದೊಂದಿಗೆ ಆತ್ಮಲಿಂಗ ಪೂಜೆ ನೆರವೇರಿಸಿದರು. ನಂತರ ಗ್ರಹಣ ಕಾಲದಲ್ಲಿಯೆ ಭಕ್ತರು, ಶರಣರು ಪ್ರಸಾದ ಸೇವನೆ ಮಾಡಿದರು.

      ಇದೇ ಸಂದರ್ಭದಲ್ಲಿ ಚೀನಾ ಖ್ಯಾತೆ ಕುರಿತು ಮಾತನಾಡಿರುವ ಮುರುಘಾ ಶರಣರು, ಮಾನವರಿಗೆ ಮಾತ್ರ ದುರಂಕಾರ ಬರುವುದಿಲ್ಲ. ಕೆಲವು ದೇಶಗಳಿಗೂ ಕೂಡಾ ದುರಹಂಕಾರ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸುಖಾ ಸುಮ್ಮನೆ ನಮ್ಮ ಸೈನಿಕರ ಮೇಲೆ ಚೀನಾ ದಾಳಿ ಮಾಡುತ್ತಿದೆ. ದುರಹಂಕಾರದಿಂದ ಅನವಶ್ಯಕವಾಗಿ ನಮ್ಮ ದೇಶದ 20 ಜನ ಸೈನಿಕರನ್ನು ಹತ್ಯೆ ಮಾಡಿದೆ.

      Chitradurga Dr. Shivamurthy Muruga Sharana warns China for killing 20 Indian soldiers

      ಒಂದಲ್ಲ ಒಂದು ದಿನ ಕಾಲ ಧರ್ಮ ಎಂಬುದು ಬುದ್ದಿ ಕಲಿಸುತ್ತದೆ. ಕಾಲ ಧರ್ಮ ನಮ್ಮೆಲ್ಲರ ಅಹಂಕಾರ ಬಗ್ಗಿಸುತ್ತದೆ ಎಂದು ಚೀನಾಕ್ಕೆ ಮುರುಘಾ ಶರಣರು ಎಚ್ಚರಿಕೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+