ಕೋಟೆ ನಾಡಿಗೆ ಬಂದಿಳಿದ ಡಿಬಾಸ್ ಗೆ ಅಭಿಮಾನಿಗಳ ಹೃದಯ ತುಂಬಿದ ಸ್ವಾಗತ
Recommended Video

ಚಿತ್ರದುರ್ಗ, ಡಿಸೆಂಬರ್ 2: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಇಂದು ಚಿತ್ರದುರ್ಗದಲ್ಲಿ ಮುಹೂರ್ತ ನಿಗದಿಯಾಗಿದೆ. ಚಿತ್ರದುರ್ಗದಲ್ಲಿ ಇಂದು ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಚಿತ್ರತಂಡ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದೆ. ಡಿ ಬಾಸ್ ನೋಡಲು ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದಾರೆ. ಡೋಲು ಬಾರಿಸುತ್ತಾ ಅದ್ಧೂರಿಯಾಗಿ ದರ್ಶನ್ ಬರಮಾಡಿಕೊಳ್ಳಲಾಗಿದೆ.
ಗಂಡುಗಲಿ ಮದಕರಿ ನಾಯಕ ಚಿತ್ರತಂಡ ನಗರದ ನೀಲಕಂಠೇಶ್ವರ, ಬರಗೇರಮ್ಮ, ಉಚ್ಚಂಗಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಚಿತ್ರಕ್ಕೆ ಚಾಲನೆ ನೀಡಲಿದೆ.

ಮೊದಲನೆಯದಾಗಿ ದರ್ಶನ್ ಹಾಗೂ ಚಿತ್ರತಂಡದ ಸದಸ್ಯರು ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ದರ್ಶನ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಾಹಿತಿ ಬಿ.ಎಲ್ ವೇಣು ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ.












Click it and Unblock the Notifications