ಹಿರಿಯೂರಿನಲ್ಲಿ ಟೈರ್ ಸಿಡಿದು ಕಂಬಕ್ಕೆ ಕಾರು ಡಿಕ್ಕಿ; ಪೇದೆ ಸಾವು
ಚಿತ್ರದುರ್ಗ, ಮೇ 18: ಕಾರಿನ ಟೈರ್ ಸ್ಫೋಟಗೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗೇಟ್ ಎನ್.ಎಚ್. 4ರ ಬಳಿ ನಡೆದಿದೆ.
Recommended Video
ಕಬ್ಬನ್ ಪಾರ್ಕ್ ಅಂದ್ರೆ ದೇವೇಗೌಡ್ರಿಗೆ ಬಹಳ ಇಷ್ಟ..! | YSV Datta about Deve Gowda
ಮೃತ ವ್ಯಕ್ತಿಯನ್ನು ಪೊಲೀಸ್ ಪೇದೆ ಹನುಮಂತರಾಯ (30) ಎಂದು ಗುರುತಿಸಲಾಗಿದೆ. ಹನುಮಂತರಾಯ ಬೆಂಗಳೂರಿಗೆ ಕರ್ತವ್ಯಕ್ಕೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕಾರಿನಲ್ಲಿ ಹೊರಟಿದ್ದ ಇಬ್ಬರೂ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗಳಾಗಿದ್ದು, ರಜೆ ಮೇಲೆ ಅಳಂದ ಗ್ರಾಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಮತ್ತೊಬ್ಬ ಗಾಯಾಳು ಪೇದೆಯನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications