ಚಿತ್ರದುರ್ಗ:ದಲಿತ ಯುವಕನನ್ನು ಮದ್ವೆಯಾಗಿದ್ದಕ್ಕೆ ಮಗಳ ಕೊಲೆ ಯತ್ನ
ಚಿತ್ರದುರ್ಗ, ನವೆಂಬರ್ 25: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳೂ ಕೂಡ ಎನ್ನದೇ ಈಕೆಯ ಪೋಷಕರು ಕೊಲೆ ಯತ್ನ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಿನ್ನಬೆನ್ನೂರು ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕನ್ನು ಪ್ರೀತಿಸಿ ಮುದುವೆಯಾಗಿದ್ದ ಆಶಾಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಯತ್ನ ನಡೆದಿದೆ. ಆಶಾ ಮೂರು ತಿಂಗಳ ಗರ್ಭಿಣಿ ಎನ್ನುವುದನ್ನು ನೋಡದೇ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಆಶಾ ಭರಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.













Click it and Unblock the Notifications