ನಟ ದರ್ಶನ್ ಬಗ್ಗೆ ಬಿ.ಸಿ.ಪಾಟೀಲ್ ಹೇಳಿದ್ದೇನು ಗೊತ್ತಾ?
ಚಿತ್ರದುರ್ಗ, ಜುಲೈ, 05: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದ್ದಾರೆ. ಇನ್ನು ಈ ಸಂಬಂಧ ನಟ ದರ್ಶನ್ ಪರ-ವಿರೋಧ ಚರ್ಚೆಗಳು ಆಗುತ್ತಲೇ ಇವೆ. ಇದರ ನಡುವೆ ಇದೀಗ ಮಾಜಿ ಸಚಿವ ಹಾಗೂ ಚಿತ್ರರಂಗದಲ್ಲಿ ಕೌರವ ಅಂತಲೇ ಗುರುತಿಸಿಕೊಂಡಿದ್ದ ಬಿ.ಸಿ.ಪಾಟೀಲ್ ಅವರು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ
ಚಿತ್ರದುರ್ಗ ನಗರದ ಮೃತ ರೇಣುಕಾ ಸ್ವಾಮಿ ಕುಟುಂಬಕ್ಕೆ ಭೇಟಿ ನೀಡಿ, ಮೃತನ ಪೋಷಕರಿಗೆ ಸಾಂತ್ವನ ಹೇಳಿ ನಂತರ ಅವರು ಮಾತನಾಡಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮೃತ ಪತ್ನಿಗೆ ಉದ್ಯೋಗ ಕೊಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅಂತಹವರಿಗೆ ಶಿಕ್ಷೆಯಾಗಲಿ. ಇಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಮಾಡ್ರನ್ ಜಗತ್ತಲ್ಲಿ ಟೆಕ್ನಾಲಜಿ ಹೆಚ್ಚಾದ ಮೇಲೆ ಸೈಬರ್ ಕ್ರೈಮ್ ಜಾಸ್ತಿಯಾಗಿದೆ. ಮೃತ ರೇಣುಕಾಸ್ವಾಮಿ ಮೇಲೆ ಸಣ್ಣ ದೂರು ಕೊಟ್ಟಿದ್ರೆ ವಿಚಾರಣೆ ನಡೆಸಬಹುದಿತ್ತು. ಆದರೆ ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಸರಿಯಲ್ಲ. ನಟ ದರ್ಶನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ತಿಳಿಸಿದರು.
ಇನ್ನು ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಪೊಲೀಸರು ಇದ್ದಾರೆ. ನಾವು ಯಾವುದು ಸುಳ್ಳು, ಯಾವುದು ನಿಜ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ದರ್ಶನ್ ಒಳ್ಳೆಯ ವ್ಯಕ್ತಿ, ಒಳ್ಳೆಯ ನಟ ಆಗಿದ್ದ. ಈಗ ಅವರ ಮೇಲೆ ಕೊಲೆ ಆರೋಪ ಬಂದಿದೆ. ಕೋರ್ಟ್‌ನಲ್ಲಿ ಕೇಸ್ ಎದುರಿಸುತ್ತಿದ್ದಾರೆ. ತನಿಖೆ ಆದ್ಮೇಲೆ ಸತ್ಯ ಏನೆಂದು ಗೊತ್ತಾಗುತ್ತದೆ ಎಂದರು.
ಇನ್ನು ಚಿತ್ರರಂಗದಿಂದ ನಟ ದರ್ಶನ್ ಅವರನ್ನ ಬ್ಯಾನ್ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರ ಚೆಂಬರ್‌ಗೆ ಬಿಟ್ಟ ವಿಚಾರ. ಫಿಲ್ಮ್ ಚೇಂಬರ್ ಅದರ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಸರಿಯಲ್ಲ: "ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಾನು ನೋಡಿದ ಹಾಗೆ ದರ್ಶನ್ ಅವರ ತಂದೆ ಶೂಟಿಂಗ್ ಸೆಟ್‌ನಲ್ಲಿ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಿದ್ದರು. ಅದು ಕೆಲವೊತ್ತಷ್ಟೇ. ಆಮೇಲೆ ಎಲ್ಲರ ಜೊತೆಗೂ ಬೆರೆಯುವ ಸ್ವಭಾವ ಅವರದ್ದಾಗಿತ್ತು. ಸಿನಿಮಾದಲ್ಲಿ ಖಲನಾಯಕನಾಗಿದ್ದರೆ, ನಿಜಜೀವನದಲ್ಲಿ ಹಿರೋ ಆಗಿದ್ದರು," ಎಂದರು.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರದ್ದು ಕೂಡ ತಪ್ಪಿದೆ. ಅದಕ್ಕಂತಲೇ ಕಾನೂನು ಇದೆ. ಸಿನಿರಂಗ ಇದೆ. ಅಲ್ಲೇ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಕೂಡ ಸರಿಯಲ್ಲ. ನಟ ದರ್ಶನ್ ಮನುಷ್ಯತ್ವ ಕಳೆದುಕೊಂಡಿದ್ದಾನೆ ಅಂತಾ ಅನಿಸುತ್ತದೆ ಎಂದು ಹೇಳಿದ್ದಾರೆ.
"ನಾನು ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಜೊತೆ ನಾನು ಇದ್ದವನು, ದರ್ಶನ್‌ರಷ್ಟು ಹೆಸರನ್ನು ತಂದೆ ತೂಗುದೀಪ ಮಾಡಿರಲಿಲ್ಲ. ಆಗಿನ ಕಾಲಘಟ್ಟವೇ ಬೇರೆ, ಇಂದಿನ ಕಾಲಘಟ್ಟವೇ ಬೇರೆ. ಕೆಲ ವರ್ಷಗಳ ಹಿಂದೆ ದರ್ಶನ್ ದಿನಗೂಲಿ ನೌಕರನಾಗಿ ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ. ದರ್ಶನ್ ಹೊರತು ಪಡಿಸಿ ಹೇಳುವುದಾದರೆ, ಈ ರೀತಿಯ ಘಟನೆಗಳು ನಡೆಯಬಾರದೆನ್ನುವುದೇ ನನ್ನ ಅಭಿಪ್ರಾಯ," ಎಂದರು.
"ಇಲ್ಲಿ ಆಗಿರೋದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲ, ಇವರು ಯಾರೂ ಸಹ ಮೂಲತಃ ಕೊಲೆಗಾರರಲ್ಲ, ಸೇಡು ತೀರಿಸಿಕೊಳ್ಳೋಕೆ ಹಿಂಸೆ ಕೊಟ್ಟಿದ್ದಾರೆ. ಹಿಂಸೆ ಅತಿರೇಕ ಆಗಿದ್ದರಿಂದ ಈ ಘಟನೆ ನಡೆದಿದೆ. ಇನ್ನೂ ಹತ್ಯೆಯಾದ ರೇಣುಕಾಸ್ವಾಮಿ ಮಾಡಿದ್ದನ್ನು ನಾನು ಒಪ್ಪುವುದಿಲ್ಲ. ಯಾರೇ ಹೆಣ್ಣು ಮಗಳಿಗಾಗಲೀ ಈ ರೀತಿಯ ಅಶ್ಲೀಲ ಮೇಸೆಜ್ ಮಾಡುವುದು ತಪ್ಪು. ಹಾಗೆಯೇ ಪವಿತ್ರಾ ಗೌಡ ಮದುವೆಯಾದ ಮನುಷ್ಯನಾ ಜೊತೆ ಸಂಬಂಧ ಕೂಡ ಒಂದು ಅಪರಾಧವೇ. ಇದೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಕಾನೂನು ಕೆಲಸ ಮಾಡಬೇಕಾಗುತ್ತದೆ," ಎಂದರು.












Click it and Unblock the Notifications