ಚಿತ್ರದುರ್ಗ:ಚಾಕೋಲೆಟೆಂದು ಮಾತ್ರೆ ಸೇವಿಸಿ 5 ವರ್ಷದ ಮಗು ಸಾವು

ಚಿತ್ರದುರ್ಗ, ಮಾರ್ಚ್‌, 07: ಚಾಕೊಲೇಟ್ ಎಂದು ಭಾವಿಸಿ ಮಗುವೊಂದು ಮಾತ್ರೆ ಸೇವಿಸಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಗುವನ್ನು 5 ವರ್ಷದ ಋತ್ವಿಕ್ ಎಂದು ಗುರುತಿಸಲಾಗಿದೆ. ಮಗುವಿನ ತಂದೆ ತಿಪ್ಪೇಸ್ವಾಮಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಮನೆಯಲ್ಲಿ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದಾರೆ. ಮಾತ್ರೆಗಳನ್ನು ಚಾಕೋಲೆಟ್ ಎಂದು ಭಾವಿಸಿದ ಮಗು ಸೇವಿಸಿ ಮೃತಪಟ್ಟಿದೆ.

A 5-year-old child death after consuming tablete In Chitradurga district

ಮಗು ಚಾಕೋಲೆಟ್ ಸೇವಿಸಿದ ತಕ್ಷಣ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ದುರಾದೃಷ್ಟವಶಾತ್ ಮಗು ಅಸುನೀಗಿದೆ. ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದು ಅದೃಷ್ಟವಶಾತ್ ಇಬ್ಬರು ಪಾರಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರು ಕೆರೆಯಲ್ಲಿ ಬುಧವಾರ (ಮಾರ್ಚ್‌ 06) ಸಂಜೆ ನಡೆದಿದೆ.

ಚಾಮರಾಜನಗರ ತಾಲೂಕಿನ ಚಾಟಿಪುರದಲ್ಲಿ ಕೃಷಿ ಮಾಡುತ್ತಿದ್ದ ಸಾಬ್ ಹಾಗೂ ಚಾಲಕ ಗಾಯಗೊಂಡಿದ್ದು ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಟಿಪುರದಿಂದ ಮೈಸೂರಿಗೆ ಪಜಾರೊ ಕಾರಿನಲ್ಲಿ ತೆರಳುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದ್ದೆ ಎನ್ನಲಾಗಿದೆ. ಸದ್ಯ, ಕಾರನ್ನು ಮೇಲಕ್ಕೆತ್ತಿ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+