ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ಗ್ರಾಮೀಣ ಪ್ರದೇಶದಲ್ಲಿ 7 ಬ್ಲ್ಯಾಕ್‌ ಫಂಗಸ್ ಕೇಸ್ ಪತ್ತೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 30; ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಬ್ಲ್ಯಾಕ್ ಫಂಗಸ್ ಕೂಡ ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಒಂದೇ ದಿನ 7 ಬ್ಲ್ಯಾಕ್ ಫಂಗಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾದ ಒಟ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ 49.

ದಕ್ಷಿಣ ಕನ್ನಡ; ಬ್ಲ್ಯಾಕ್ ಫಂಗಸ್ ಕೇಸ್ ಏರಿಕೆ, ಒಂದೇ ದಿನ 3 ಸಾವು ದಕ್ಷಿಣ ಕನ್ನಡ; ಬ್ಲ್ಯಾಕ್ ಫಂಗಸ್ ಕೇಸ್ ಏರಿಕೆ, ಒಂದೇ ದಿನ 3 ಸಾವು

ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ, ದೇವರ ಮರಿಕುಂಟೆ, ಕುದಾಪುರ, ಟಿ. ಎನ್. ಕೋಟೆ, ಗೋನಬಾವಿ ಗ್ರಾಮಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ವಿಡಿಯೋ; ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತೆ, ಪರಿಹಾರವೇನು? ವಿಡಿಯೋ; ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತೆ, ಪರಿಹಾರವೇನು?

7 Black Fungus Case Reported In Rural Areas

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ವಿಫಲ ಕೋವಿಡ್ ನಿರ್ವಹಣೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ವಿಫಲ

ಶನಿವಾರದ ವರದಿ ಪ್ರಕಾರ ಜಿಲ್ಲೆಯಲ್ಲಿ 673 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 270 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 27,814ಕ್ಕೆ ಏರಿಕೆಯಾಗಿದೆ.

Recommended Video

IPL ಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಗೆ ಮನವಿ ಮಾಡಿಕೊಂಡ ಗಂಗೂಲಿ | Oneindia Kannada

ಚಿತ್ರದುರ್ಗ ತಾಲೂಕಿನಲ್ಲಿ 312, ಚಳ್ಳಕೆರೆ 157, ಹಿರಿಯೂರು 62, ಹೊಳಲ್ಕೆರೆ 68, ಹೊಸದುರ್ಗ 123, ಮೊಳಕಾಲ್ಮೂರಿನಲ್ಲಿ 41 ಪ್ರಕರಣಗಳು ಪತ್ತೆಯಾಗಿವೆ.

English summary
7 case of Mucormycosis commonly called black fungus reported in Chitradurga district. Till 49 case of black fungus recorded in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X