ಹೊಳಲ್ಕೆರೆ: ಇನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ಸಿಕ್ಕಿದ್ದು 8 ಕೋಟಿ ರೂಪಾಯಿ ಅಲ್ಲ, ಮತ್ತೆಷ್ಟು ಗೊತ್ತಾ?- ಮಾಹಿತಿ ತಿಳಿಯಿರಿ
ಚಿತ್ರದುರ್ಗ, ನವೆಂಬರ್, 30: ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಬಳಿ ಇನೋವಾ ಕಾರ್‌ನಲ್ಲಿ ಬುಧವಾರ (ನವೆಂಬರ್ 26) ರಾತ್ರಿ ದಾಖಲೆ ಇಲ್ಲದೆ ಸಿಕ್ಕಿದ್ದ ಹಣ 8 ಕೋಟಿ ಅಲ್ಲ 7,99,96,000 ಸಾವಿರ ಎಂದು ಜಿಲ್ಲಾ ಎಸ್‌ಪಿ ಧರ್ಮೇಂದ್ರ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿತ್ರದುರ್ಗ ನಗರದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು, ನಮ್ಮ ಸಿಬ್ಬಂದಿಗಳು ಹೊಳಲ್ಕೆರೆ ತಾಲೂಕಿನ ಬಿಳಿ ಬಣ್ಣದ ಇನೋವಾ ಕಾರು ಪರಿಶೀಲನೆ ನಡೆಸಿದಾಗ ಸುಮಾರು 8 ಕೋಟಿ ರೂಪಾಯಿ ಹಣ ಇತ್ತು ಎಂದು ತಿಳಿದುಬಂದಿತ್ತು. ಆದರೆ ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ 7,99,96000 ರೂಪಾಯಿ ಅಷ್ಟೇ ಪತ್ತೆಯಾಗಿದೆ ಎಂದು ತಿಳಿಸಿದರು.

ಕಾರು ಚಾಲಕ ಸಚಿನ್ ನೀಡಿರುವ ಮಾಹಿತಿಯಂತೆ ಶಿವಮೊಗ್ಗದ ಮಲ್ನಾಡ್ ಟ್ರೇಡರ್ಸ್ ಮಾಲೀಕ ಸುರೇಶ್ ಅವರಿಗೆ ಹಣ ಸೇರಿದೆ. ಅಡಿಕೆ ಖರೀದಿಗಾಗಿ ಹಣವನ್ನು ಕೊಟ್ಟಿದ್ದರು. ಆದರೆ ಅಡಿಕೆ ಖರೀದಿ ಮಾಡಲಾಗದ ಕಾರಣ ಹಣ ವಾಪಸ್ ತಲುಪಿಸಲು ಹೋಗುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದರು. ಹಾಗೆಯೇ ಹಣದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಸುರೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಪ್ರಕರಣದ ಹಿನ್ನೆಲೆ
ಹೊಳಲ್ಕೆರೆ ಬಳಿ ಇನೋವಾ ಕಾರ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸಾಗಿಸುತ್ತಿದ್ದ 8 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ತಿಳಿದುಬಂದಿತ್ತು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಬಳಿ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಚಿತ್ರದುರ್ಗದ ಉದ್ಯಮಿಯೊಬ್ಬರಿಗೆ ಸೇರಿದ ಹಣ ಇದಾಗಿದ್ದು, ಶಿವಮೊಗ್ಗಕ್ಕೆ ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications