20 ವರ್ಷದ ಯುವತಿ ಜೊತೆ 40ರ ವ್ಯಕ್ತಿಯ ಮದುವೆ; ಮುಂದೇನಾಯ್ತು?, ಇಲ್ಲಿದೆ ಮಾಹಿತಿ
ಚಿತ್ರದುರ್ಗ, ನವೆಂಬರ್, 28: ಪ್ರೀತಿಗೆ ಕಣ್ಣಿಲ್ಲ, ಪ್ರೀತಿಯೇ ಮಾಯೆ ಹುಷಾರು, ಪ್ರೀತಿಗೆ ವಯಸ್ಸು ಇಲ್ಲ ಎಂಬೆಲ್ಲ ಮಾತುಗಳಿವೆ. ಪ್ರೀತಿ ಎಂಬ ಎರಡಕ್ಷರದ ಪದ ಯಾರ ಮೇಲೆ ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ವಯಸ್ಸಿವ ನಡುವೆ ತುಂಬಾ ಅಂತರವಿದ್ದರೂ ನಿ ಬಿಟ್ಟರೆ, ನಾ ಬದುಕಲಾರೆ ಎಂಬಂತೆ ಇಬ್ಬರನ್ನೂ ಒಂದು ಮಾಡಿದೆ. ದುರಂತವೆಂದರೆ ಇಬ್ಬರೂ ಮದುವೆಯಾಗಿ ಒಂದೆರಡು ತಿಂಗಳಲ್ಲಿ ಮದುಮಗ ಕಥೆ ದುರಂತ ಕಂಡಿದೆ ನೋಡಿ.
ಹೌದು ಪೋಷಕರ ವಿರೋಧ ನಡುವೆಯೂ ಪ್ರೇಮಿಗಳಿಬ್ಬರು ಊರು ತೊರೆದು ದೇಗುಲವೊಂದರಲ್ಲಿ ಮದುವೆಯಾಗಿದ್‌ದರು. ಆದರೆ, ಒಂದೆರಡು ತಿಂಗಳ ಬಳಿಕ ಪ್ರೇಮಿಗಳು ಗ್ರಾಮಕ್ಕೆ ವಾಪಾಸ್ ಆಗುತ್ತಿದ್ದಂತೆಯೇ ಯುವತಿಯ ಪೋಷಕರು ಮದುಮಗನ ಮೇಲೆ ಹಲ್ಲೆ ನಡೆಸಿ, ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನವೆಂಬರ್ 27ರ ಬುಧವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಕೋಣನೂರು ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ (40) ವರ್ಷ ಹತ್ಯೆಯಾದ ಮದುಮಗನಾಗಿದ್ದಾನೆ. ಈತ 20 ವರ್ಷದ ರಕ್ಷಿತಾ ಎಂಬ ಯುವತಿ ಜೊತೆ ಪ್ರೀತಿಸಿ ಮದುವೆಯಾಗಿದ್ದಾನೆ. ಘಟನೆಯಲ್ಲಿ ಮತ್ತೊಂದು ದುರಂತವೆಂದರೆ, ಮಂಜುನಾಥ್‌ಗೆ ಇದು ಎರಡನೇ ಮದುವೆ. ಮೃತ ಮಂಜುನಾಥ್ ಈ ಹಿಂದೆ ಶಿಲ್ಪಾ ಎಂಬ ಯುವತಿ ಜೊತೆ ಅಂತರ್ ಜಾತಿ ವಿವಾಹವಾಗಿ, ದಾವಣಗೆರೆಯಲ್ಲಿ ವಾಸವಾಗಿದ್ದನು. ಆದರೆ, ಶಿಲ್ಪ ಮಂಜುನಾಥನ ಕಿರುಕುಳಕ್ಕೆ ಒಳಗಾಗಿ ನೇಣಿಗೆ ಕೊರಳೊಡಿದ್ದಳು. ಈ ಘಟನೆಯಿಂದ ಮಂಜುನಾಥ್ ಜೈಲು ಸೇರಿ ಹೊರ ಬಂದಿದ್ದನು. ಇದೀಗ ಮಂಜುನಾಥ ಬದುಕು ಅಂತ್ಯವಾಗಿದ್ದು, ಮುಯ್ಯಿಗೆ ಮುಯ್ಯಿ ಎಂಬಂತಾಗಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ನಡುವೆ ಮದುವೆ ನಡೆದಿತ್ತು. ಪ್ರೇಮ ವಿವಾಹದ ಬಳಿಕ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕೆಲ ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಯುವತಿಯ ಪೋಷಕರು ಭರವಸೆ ನೀಡಿದ್ದ ಕಾರಣದಿಂದ ಮಗಳನ್ನು ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಜುನಾಥ್ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ.
20 ದಿನಗಳ ಬಳಿಕ ನಿನ್ನೆ ಕೋಣನೂರು ಗ್ರಾಮಕ್ಕೆ ತೆರಳಿದಾಗ ದಿಢೀರ್ ಈತನ ಮೇಲೆ ಹಲ್ಲೆ ಮಾಡಲಾಗಿದೆ. ಮಂಜುನಾಥ್ ಮನೆಯ ಮುಂಭಾಗದಲ್ಲಿಯೇ ಭೀಕರವಾಗಿ ಹಲ್ಲೆ ನಡೆಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ನವೆಂಬರ್ 27ರ ಬುಧವಾರ ಮಧ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥ ಮತ್ತು ಆತನ ತಂದೆ-ತಾಯಿ ಮೇಲೆ ಕೂಡ 20ಕ್ಕೂ ಹೆಚ್ಚು ಜನ ಯುವತಿ ಕಡೆ ಪೋಷಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದಬಂದಿದೆ.
ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯಲ್ಲಿರಿಸಿದ್ದು, ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.












Click it and Unblock the Notifications