ಚಿತ್ರದುರ್ಗ: 4 ಕೋಟಿ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿ ಅಂದರ್

ಚಿತ್ರದುರ್ಗ, ಸೆಪ್ಟೆಂಬರ್ 15: ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ರಾಂಪುರ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 04 ರಂದು ದಾಳಿ ಮಾಡಿದ್ದ ರಾಂಪುರ ಪೊಲೀಸರ ದಾಳಿ ವೇಳೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಲಾಗಿದೆ. ಜೊತೆಗೆ 9871.73 ಕೆ.ಜಿ ತೂಕದ 8250 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾಗಿರು ರುದ್ರೇಶ್, ರಾಂಪುರದ ಬಳಿ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದನು. ಇದು ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

Chitradurga: 4 Crore Worth Of Marijuana Seized By Police In Rampura

ರಾಂಪುರದ ಡಿ.ಬಿ ಮಂಜುನಾಥ್, ವೈ.ಜಂಬುನಾಥ್, ಡಿ.ವೈ ಮಂಜುನಾಥ್ ಎಂಬುವರಿಗೆ ಸೇರಿದ 04 ಎಕರೆ 20 ಗುಂಟೆ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದಿದ್ದು, ಮಧ್ಯವರ್ತಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಹದೇವಪುರ ನಿವಾಸಿ ಸಮಂತಗೌಡ ಜಮೀನನ್ನು ಗುತ್ತಿಗೆ ಕೊಡಿಸಿದ್ದನು.

Chitradurga: 4 Crore Worth Of Marijuana Seized By Police In Rampura

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ, ಜಮೀನು ಮಾಲೀಕರು, ಮಧ್ಯವರ್ತಿ ಸೇರಿದಂತೆ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಿದ್ದಾರೆ. ಬಂಧಿತ ಐವರ ವಿರುದ್ಧ NDPS ಆ್ಯಕ್ಟ್ ಕಲಂ 8 ಹಾಗಾ 20(a)(b) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Recommended Video

      India-China ಸಂಘರ್ಷದ ಬಗ್ಗೆ ಮಾತನಾಡಲಿದ್ದಾರೆ Rajnath Singh | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+