ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ: 33 ಸಾವಿರ ಕೆ.ಜಿ. ಚಿಕನ್ ಊಟದ ವ್ಯವಸ್ಥೆ
ಚಿತ್ರದುರ್ಗ, ಜನವರಿ, 28: ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರು ಪೀಠದ ಹಿಂಭಾಗದಲ್ಲಿ 150 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಶೋಷಿತ ಸಮುದಾಯಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ ಊಟಕ್ಕಾಗಿ 33 ಸಾವಿರ ಕೆಜಿ ಚಿಕನ್ ಬಿರಿಯಾನಿ ವ್ಯವಸ್ಥೆಯನ್ನು ಕಲ್ಪಿಸಿದ್ದರು . ಉಳಿದಂತೆ ಸಸ್ಯಹಾರಿಗಳಿಗೆ ಮೊಸರನ್ನ, ಟೊಮೊಟೊ ಬಾತ್ ವ್ಯವಸ್ಥೆಯನ್ನು ಕಲ್ಪಿಸಿದರು. ಊಟಕ್ಕಾಗಿ ನೂಕುನುಗ್ಗಲು ಉಂಟಾಗದಂತೆ 1,000 ಕೌಂಟರ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಬೃಹತ್ ಆಕಾರದ ಪೆಂಡಲ್ ನಿರ್ಮಾಣ ಮಾಡಿ ಲಕ್ಷಾಂತರ ಕುರ್ಚಿಗಳನ್ನು ಅಳವಡಿಸಲಾಗಿತ್ತು. ಕಾರ್ಯಕ್ರಮ ವೀಕ್ಷಣೆಗೆ 23 ಎಲ್‌ಇಡಿ ಪರದೆಗಳನ್ನು ವ್ಯವಸ್ಥೆ ಮಾಡಿದ್ದರು. ವೇದಿಕೆಯಲ್ಲಿ 200 ಆಸನಗಳಿದ್ದವು. ಉಳಿದಂತೆ ವೇದಿಕೆ ಅಕ್ಕಪಕ್ಕದಲ್ಲಿ ಗಣ್ಯರಿಗೆ ಅವಕಾಶ ಕಲ್ಪಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಸಚಿವ ಸಂಪುಟದ ಸಚಿವರು, ಶಾಸಕರುಗಳು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಕಾರ್ಯಕರ್ತರಲ್ಲಿ ಭಾಗವಹಿಸಿದ್ದರು.
ಸಂವಿಧಾನ ಇಲ್ಲ ಅಂದಿದ್ರೆ ಈಶ್ವರಪ್ಪ ಕುರಿ ಕಾಯಬೇಕಾಗಿತ್ತು
ಸಮಾಜದಲ್ಲಿ ಶೋಷಿತ ವರ್ಗಗಳು ಶೋಷಿತ ಸಮುದಾಯ ಇಡೀ ಸಮಾಜದ ಜನಸಂಖ್ಯೆಯಲ್ಲಿ ಸಿಂಹ ಪಾಲು ಇರುವವರು ಶತ, ಶತಮಾನಗಳಿಂದ ಶೋಷಣೆಗೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ತಾವು ತಿಳಿದುಕೊಳ್ಳಬೇಕಾಗುತ್ತದೆ. ಈ ಶೋಷಣೆ ಮತ್ತು ದೌರ್ಜನ್ಯ ಈ ಸಮುದಾಯದವರ ಮೇಲೆ ಅದಕ್ಕೆ ಕಾರಣ ಜಾತಿ ವ್ಯವಸ್ಥೆ ಎಂಬುದು ಮರಿಯುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ನಗರದ ಹೊರವಲಯದಲ್ಲಿ ನಡೆದ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತಿ ವ್ಯವಸ್ಥೆಯ ಪರಿಣಾಮವಾಗಿ ಜನ ಶೋಷಿತ ಸಮುದಾಯಗಳ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಬಹುಸಂಖ್ಯಾತ ಜನರು ಅಕ್ಷರ ಸಂಸ್ಕೃತಿಕ ವಂಚಿತರಾದ ಕಾರಣ ಸಮಾಜದಲ್ಲಿ ಅಸಮಾನತೆಯನ್ನು ನೋಡಲು ಸಾಧ್ಯವಾಗುತ್ತಿದೆ ಎಂದರು.
ಸಮಾಜದಲ್ಲಿ ರಾಜಕೀಯ, ಶೈಕ್ಷಣಿಕತೆಯ ಅಸಮಾನತೆ ಇದೆ. ಈ ಅಸಮಾನತೆಯ ಕಾರಣಕ್ಕೋಸ್ಕರ ನಿರಂತರವಾಗಿ ಶೋಷಿತ ಸಮುದಾಯಗಳ ಮೇಲೆ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಾ ಬಂದಿದ್ದು, ಈಗಲೂ ಕೂಡ ನಡೆಯುತ್ತಾ ಇದೆ. ನಾವು ಮರೆಯಲು ಸಾಧ್ಯವಿಲ್ಲ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ನಾರಾಯಣ ಗುರು, ಕನಕದಾಸರು, ಜ್ಯೋತಿಬಾಪುಲೆ ಇವರೆಲ್ಲರೂ ಕೂಡ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಪಟ್ಟಿದ್ದರು. ಜಾತಿ ವ್ಯವಸ್ಥೆ ಹೋಗಬೇಕು, ಜಾತಿ ವ್ಯವಸ್ಥೆ ಇರುವುದರಿಂದ ಶೋಷಣೆ ದೌರ್ಜನಗಳಿಗೆ ಅವಕಾಶ ಆಗುತ್ತಾ ಬಂದಿದೆ. ಎಲ್ಲರಿಗೂ ಕೂಡ ಗೌರವದಿಂದ ಬದುಕುವ ವ್ಯವಸ್ಥೆಯನ್ನು ಸಂವಿಧಾನ ತಿಳಿಸಿದೆ. ಸಂವಿಧಾನದ ಇರುವುದರಿಂದ ಸ್ವಲ್ಪ ಮಟ್ಟಿಗೆ ದೌರ್ಜನ್ಯ, ದಬ್ಬಾಳಿಕೆ ಕಡಿಮೆ ಆಗಿದೆ ಎಂದರು.
ಸಮಾನತೆ ನಿರ್ಮಾಣವಾದರೆ ಶೋಷಣೆಗೆ, ದೌರ್ಜನಕ್ಕೆ ಅವಕಾಶ ಇಲ್ಲ ಎಂಬುದು ಮೇಲ್ವರ್ಗದ ಜನತೆಯ ಅಭಿಪ್ರಾಯವಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ಜಾರಿಗೆ ತಂದರು. ಸಮಾಜದಲ್ಲಿ ಸಮಾನತೆ ಬರಬೇಕಾದರೆ ಮೇಲು, ಕೀಳು ಎಂಬ ತಾರತಮ್ಯ ಹೋಗಲಾಡಿಸಬೇಕು ಎಂದರು.
ಈ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಹಂಚಿಕೆ ಆಗದೆ ಇರುವುದರಿಂದ ನಾವು ಸಮಾಜದಲ್ಲಿ ದೌರ್ಜನ್ಯ ಮತ್ತು ದಬ್ಬಾಳಿಕೆ ಶೋಷಣೆ ಕಾಣುತ್ತಿದ್ದೇವೆ. ಇದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧವಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಬಿಜೆಪಿಯವರು ಶ್ರೀರಾಮನನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಬಿಪಿ ಮಂಡಲ್ ಕಮಿಷನ್ ವರದಿಗೆ ವಿರುದ್ಧವಾಗಿದ್ದೇವೆ ಎಂದು ಆರ್‌ಎಸ್ಎಸ್ ಅವರು ಹೇಳಿದರು. ಬಿಜೆಪಿಯವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ದರೆ, ಅದು ಮಾರಕ ಎಂಬ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಈಗ ನನ್ನನ್ನ ವಿರೋಧ ಮಾಡುತ್ತಿದ್ದಾರೆ. ಕಾರಣ ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿದ್ದಾರಲ್ಲ ಎಂದು ವಿರೋಧ ಮಾಡುತ್ತಿದ್ದಾರೆ ಎಂದರು.
ನಾನೇನ್ ತಪ್ಪು ಮಾಡಿದೀನಿ, ನನ್ನನ್ನ ವಿರೋಧಿಸಲು ಕಾರಣವೇನು? ಎಲ್ಲ ಜಾತಿಯ ಬಡವರಿಗೆ ಸಮಾನತೆ ಮಾಡಿದ್ದು ತಪ್ಪಾ? ಅನ್ನ ಭಾಗ್ಯ, ಕೃಷಿ ಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಇವೆಲ್ಲ ಕಾರ್ಯಕ್ರಮಗಳನ್ನು ಮಾಡಿದ್ದು ಸಿದ್ದರಾಮಯ್ಯ ಅಲ್ಲವೇ ಮತ್ತು 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿಗೆ ಕೊಟ್ಟವರು ಕಾಂಗ್ರೆಸ್ ಸರ್ಕಾರ ಅಲ್ವಾ. ಇದಕ್ಕೆ ನನ್ನನ್ನ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದರು.
ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇರಬಹುದು ನಾವೆಲ್ಲರೂ ಅಣ್ಣತಮ್ಮಂದಿರು. ನಾವೆಲ್ಲರೂ ಕೂಡ ಸಮಾನ ದುಃಖಿಗಳು, ಯಾರು ಸುಖವನ್ನು ಅನುಭವಿಸಿದ್ದಾರೆ ಅವರು ಸುಖಿಗಳು ಎಂದರು. ಸಮಾನತೆಯನ್ನು ಹೋಗಲಾಡಿಸಲು ಇಂತಹ ಸಮಾವೇಶಗಳು ಅತ್ಯಗತ್ಯ. ಇನ್ನು ಹೆಚ್ಚು ಹೆಚ್ಚಿನದಾಗಿ ಸಮಾವೇಶಗಳು ನಡೆಯಬೇಕು ಎಂದರು.
ಯಾವ ದೇವಸ್ಥಾನಗಳ ಒಳಗೆ ಬಿಡುವುದಿಲ್ಲ ಅಂತಹ ದೇವಸ್ಥಾನಗಳಿಗೆ ಹೋಗಬೇಡಿ. ನೀವೇ ದೇವಸ್ಥಾನವನ್ನು ಕಟ್ಟಿಕೊಳ್ಳಿ, ನೀವೇ ಪೂಜೆ ಮಾಡಿ, ನೀವೇ ದೇವರ ಮೂರ್ತಿಗಳಾಗಿ ಎಂದರು. ದೇವನೊಬ್ಬ ನಾಮ ಹಲವು ಎಂಬಂತೆ ದೇವನು ಸರ್ವಾತ್ರಯಮಿ. ಆದರೆ ಈ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಇದರಲ್ವಾ ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಚಿದ್ರಾ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ದೇವಸ್ಥಾನಕ್ಕೆ ದಲಿತರನ್ನು ಬರಬೇಡಿ ಎಂದು ಹೇಳಿದವರು ಯಾರು?
ಕನಕದಾಸರು ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನಕ್ಕೆ ಹೋದವರು ಒಳಗಡೆ ಬಿಡದವರು ಯಾರು ಎಂದು ಪ್ರಶ್ನಿಸಿದರು. ಯಾರಿಗೆ ಇತಿಹಾಸ ಗೊತ್ತಿದೆ ಅವರು ಭವಿಷ್ಯವನ್ನು ನಿರ್ಮಾಣ ಮಾಡುತ್ತಾರೆ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ, ಮೂರು ಮಂತ್ರಗಳನ್ನು ಈ ಶೋಷಿತ ಸಮುದಾಯಗಳಿಗೆ ಹೇಳಿದ್ದಾರೆ.
ನಿಮಗೆ ನ್ಯಾಯ ಸಿಗಬೇಕಾದರೆ ತಾವೆಲ್ಲರೂ ಶಿಕ್ಷಿತರಾಗಬೇಕು ಎಂದರು.
78% ಶಿಕ್ಷಿತರಾಗಿದ್ದಾರೆ. 22% ಶಿಕ್ಷಿತರಾಗುವ ಮೂಲಕ 100ಕ್ಕೆ 100% ಶಿಕ್ಷಿತರಾಗಬೇಕು ಎಂದರು. ಸಂವಿಧಾನವನ್ನು ರಚನೆ ಮಾಡಿಕೊಳ್ಳಿ. ಇನ್ನು ಈಶ್ವರಪ್ಪ, ಸಿಟಿ ರವಿ, ಅಶೋಕ ನೀವೆಲ್ಲರೂ ವಿಧಾನಸಭೆಗೆ ಬರಲು ಕಾರಣ ಈ ಸಂವಿಧಾನದಿಂದ ಮಾತ್ರ ಅನ್ನೋದನ್ನು ಮರೆಯಬೇಡಿ ಎಂದರು.
ಸಂವಿಧಾನ ಇಲ್ಲ ಅಂದಿದ್ದರೆ ಈಶ್ವರಪ್ಪ ನೀನು ಕುರಿ ಕಾಯಬೇಕಾಗಿತ್ತು. ಸಿಟಿ ರವಿ ಮತ್ತು ಅಶೋಕ ಹೊಲ ಉಳಿಮೆ ಮಾಡಬೇಕಾಗಿತ್ತು. ನಾನು ಕೂಡ ಸಂವಿಧಾನದ ಮೂಲಕ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ. ಕಾರಣ ಎಲ್ಲಾ ವರ್ಗದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಕಾಂತರಾಜ್ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಅದರಲ್ಲಿ ವ್ಯತ್ಯಾಸಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಅದನ್ನು ಜಾರಿ ಮಾಡುತ್ತೇನೆ ಎಂಬ ಮಾತನ್ನು ಹೇಳಲು ಇಷ್ಟಪಡುತ್ತೇನೆ. ರಾಹುಲ್ ಗಾಂಧಿ ಹೇಳಿದ್ದಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ರಾಜ್ಯಗಳಲ್ಲಿ ಕೂಡ ಜಾತಿ ಗಣತಿಯನ್ನು ಮಾಡುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಆದ್ದರಿಂದ ತೀರ್ಮಾನ ಆಗಿದೆ ಎಂದರು.
ನೀವು ಇಟ್ಟಿರುವ ಬೇಡಿಕೆಗಳಿಗೆ ನನ್ನ ಸಹಮತ ಇದೆ. ರಾಜಕೀಯ ಅಧಿಕಾರ ಇರಲಿ, ಇಲ್ಲದೆ ಇರಲಿ ನಾನು ಶೋಷಿತ ಸಮುದಾಯಗಳ ಪರವಾಗಿ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘಂಟಾಗೋಷವಾಗಿ ಭರವಸೆ ನೀಡಿದರು. ನಾನು ಯಾವ ವಿರೋಧಿಯಲ್ಲ. ಎಲ್ಲ ಮನುಷ್ಯತ್ವದ ಮನುಷ್ಯರ ಪರವಾಗಿ, ಎಲ್ಲ ದೇವರ ಪರವಾಗಿ ಇರುವವನು ಎಂದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications