ಶೃಂಗೇರಿ ಶ್ರೀಗಳ ವಿರುದ್ಧ ಅವಹೇಳನಕಾರಿ ಪೋಸ್ಟ್; ಕ್ರಮಕ್ಕೆ ಆಗ್ರಹ
ಚಿಕ್ಕಮಗಳೂರು, ಮಾರ್ಚ್ 26: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಈಚೆಗಷ್ಟೆ ಶೃಂಗೇರಿ ಶ್ರೀಗಳು ಸಲಹೆಯೊಂದನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದವರ ವಿರುದ್ಧ ಕ್ರಮಕ್ಕೆ ಇದೀಗ ಯುವ ವಿಪ್ರ ವೇದಿಕೆ ದೂರು ನೀಡಿದೆ.
ಕೊರೋನ ನಿಯಂತ್ರಣಕ್ಕೆ ದುರ್ಗಾಪರಮೇಶ್ವರಿ ಸ್ತೋತ್ರ ಪಠಿಸುವಂತೆ ಶೃಂಗೇರಿ ಶ್ರೀಗಳು ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವ್ಯಕ್ತಿಯೊಬ್ಬರು, ಶೃಂಗೇರಿ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು.

ಹೀಗೆ ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಯುವ ವಿಪ್ರ ವೇದಿಕೆಯು ದೂರು ನೀಡಿದೆ. ಪೋಸ್ಟ್ ಮಾಡಿದ್ದ ಸಂಪತ್ ಸುಬ್ಬಯ್ಯ ಎಂಬುವರ ವಿರುದ್ಧ ಎಸ್ಪಿಗೆ ದೂರು ನೀಡಲಾಗಿದೆ.












Click it and Unblock the Notifications