ಮಾನಸ ಪುತ್ರ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆಗೆ ಹಣ ನೀಡಿದ ದೇವೇಗೌಡರು
ಚಿಕ್ಕಮಗಳೂರು, ಏಪ್ರಿಲ್ 18: ದೇವೇಗೌಡರ ಮಾನಸ ಪುತ್ರ ಎಂದೇ ಕರೆಸಿಕೊಳ್ಳುವ ವೈಎಸ್‌ವಿ ದತ್ತಾ ಇಂದು(ಏಪ್ರಿಲ್ 18) ರಂದು ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಚಿವ ಎಚ್ ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ.
ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆಗಾಗಿ ಸ್ವತಃ ದೇವೇಗೌಡರೇ ಕಡೂರಿಗೆ ಆಗಮಿಸಿದ್ದರು. ಬೃಹತ್ ಮೆರವಣಿಗೆ ನಡೆಸಿ ಚುನಾವಣಾ ಕಚೇರಿಗೆ ಬಂದ ವೈಎಸ್‌ವಿ ದತ್ತಾ ಅಧಿಕಾರಿ ಚುನಾವಣಾ ಕವಿರಾಜ್‌ಗೆ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಹಣ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕಡೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ ನಡೆದಿದ್ದು, ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಎತ್ತಿನ ಗಾಡಿಯಲ್ಲಿ ವೈಎಸ್‌ವಿ ದತ್ತಾ ಅವರ ಮೆರವಣಿಗೆ ನಡೆದಿದ್ದು, ಎಚ್.ಡಿ ದೇವೇಗೌಡರು ಹಾಗೂ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು. ಸುಡು ಬಿಸಿಲೆನ್ನದೇ ಹತ್ತು ಸಾವಿರ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ದಾರಿಯೂದಕ್ಕೂ ಪುಪ್ಪ ವರ್ಷ ಸುರಿಸಿದ್ದಾರೆ.
ಕಳೆದ ನಾಲ್ಕೈದು ದಶಕಗಳಿಂದ ದೇವೇಗೌಡರಿಗೆ ಮಾನಸ ಪುತ್ರನಂತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಶಾಸಕ ವೈ.ಎಸ್.ವಿ.ದತ್ತಾ ಜೆಡಿಎಸ್ ಸಖ್ಯ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಡೂರು ಕಾಂಗ್ರೆಸ್ ಹಾಗೂ ದತ್ತಾ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಿತ್ತು. ಆದರೆ ಕಾಂಗ್ರೆಸ್ ವರಿಷ್ಠರು ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್ ನೀಡದೇ ಕೆ.ಎಸ್.ಆನಂದ್‍ಗೆ ಮಣಿ ಹಾಕಿದ್ದರು. ಇದರಿಂದ ತೀವ್ರ ಬೇಸರಗೊಂಡ ವೈ.ಎಸ್.ವಿ.ದತ್ತಾ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಆದರೆ ಜೆಡಿಎಸ್ ಮುಖಂಡರ ಮನವೊಲಿಕೆಯ ಬಳಿಕ ಮತ್ತೆ ಮರಳಿ ಜೆಡಿಎಸ್ ಗೂಡು ಸೇರಿದ್ದರು. ಕಾಂಗ್ರೆಸ್ ತೊರೆದು ಬಂದ ವೈ.ಎಸ್.ವಿ.ದತ್ತಾ ಅವರಿಗೆ ಕಡೂರಿನ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.












Click it and Unblock the Notifications