ಶೀಲ ಶಂಕಿಸಿ ಕರಪತ್ರ ಹಂಚಿದ ವ್ಯಕ್ತಿ; ನಡುರಸ್ತೆಯಲ್ಲೇ ಬಿತ್ತು ಗೂಸ
ಚಿಕ್ಕಮಗಳೂರು, ಜನವರಿ 03: ಮಹಿಳೆಯೊಬ್ಬರ ಶೀಲ ಶಂಕಿಸಿ ಆ ಮಹಿಳೆ ವಿರುದ್ಧ ವ್ಯಕ್ತಿಯೊಬ್ಬ ಕರಪತ್ರ ಹಂಚಿದ್ದು, ಆತನಿಗೆ ನಡು ರಸ್ತೆಯಲ್ಲೇ ಮಹಿಳೆ ಥಳಿಸಿದ್ದಾರೆ.
ಅಣ್ಣ ಎಂದು ಕರೆಯದ್ದಕ್ಕೆ ದಾರಿಹೋಕನ ಮೇಲೆ ಮಾರಣಾಂತಿಕ ಹಲ್ಲೆ
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಘಟನೆ ನಡೆದಿದೆ. ತನ್ನ ವಿರುದ್ಧ ಕರಪತ್ರ ಹಂಚಿದ ಸುಂದರೇಶ್ ಎಂಬಾತನ ಮೇಲೆ ಸಿಟ್ಟಿಗೆದ್ದ ಮಹಿಳೆ ಚಪ್ಪಲಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ.
ಆ ಮಹಿಳೆಯ ನಡತೆ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂಥ ಕರಪತ್ರವನ್ನು ಸುಂದರೇಶ್ ಹಂಚಿದ್ದು, ಇದರಿಂದ ಆತನನ್ನು ಅಡ್ಡಗಟ್ಟಿ ಮಹಿಳೆ ಚೆನ್ನಾಗಿ ಥಳಿಸಿದ್ದಾರೆ. ಜೊತೆಗೆ ಪೊಲೀಸರಿಗೂ ಈತನ ವಿರುದ್ಧ ದೂರು ನೀಡಲಾಗಿದೆ.
ಜಯಪುರ ಪೊಲೀಸರು ಆರೋಪಿ ಸುಂದರೇಶ್ ನನ್ನು ಬಂಧಿಸಿದ್ದಾರೆ.