ತಾವೇ ಚಮರ್ದ ಮೇಲೆ ಕುಳಿತಿರುವ ಫೋಟೋ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು ಗೊತ್ತಾ?
ಚಿಕ್ಕಮಗಳೂರು, ಅಕ್ಟೋಬರ್, 25: ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕೂತಿರುವ ಪೋಟೋ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಗುಗಳು ಎದ್ದಿದ್ದವು. ಇದರ ಬೆನ್ನಲ್ಲೇ ಇದೀಗ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಕೊಪ್ಪ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಡಿಎಫ್‌ಓ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಗೌರಿಗದ್ದೆಯಲ್ಲಿ ವಿನಯ್ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ತನಿಖೆಗೆ ನಾನು ಸಿದ್ಧನಿದ್ದೇನೆ. ನಮ್ಮ ಆಶ್ರಮದಲ್ಲಿ ಒಂದು ದಿನ ಮಾತ್ರ ಹುಲಿ ಚರ್ಮ ಇತ್ತು. ಆ ಸಮಯದಲ್ಲಿ ತೆಗೆದಿದ್ದ ಒಂದು ಪೋಟೋ ವೈರಲ್ ಆಗಿದೆ. ಇನ್ನು ಕಾನೂನು ರೀತಿಯಲ್ಲಿ ಹುಲಿ ಚರ್ಮ ಶಿವಮೊಗ್ಗದ ಅಮರೇಂದ್ರ ಕಿರಿಟಿ ಅವರ ಬಳಿ ಇತ್ತು. ಇದೀಗ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ದಾಖಲೆ ನೀಡಿದ್ದೇವೆ
ಅರಣ್ಯ ಅಧಿಕಾರಿಗಳು ವಿನಯ್ ಗುರೂಜಿ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ವಿನಯ್ ಗುರೂಜಿ ಮಾತನಾಡಿ, ಅವರು ಅವರ ಕೆಲಸ ಮಾಡಲು ಬಂದಿದ್ದಾರೆ ಅಷ್ಟೆ. ನಮ್ಮ ಬಳಿ ಮಾತನಾಡಿದ್ದಾರೆ, ಎಲ್ಲಾ ದಾಖಲೆ ನೀಡಿದ್ದೇವೆ. ನಮಗೆ ಬನ್ನಿ ಎಂದು ಹೇಳಿಲ್ಲ, ಮಾಹಿತಿ ಕೇಳಿದ್ದಾರೆ ಅಷ್ಟೆ ಎಂದರು.
ಡಿ.ಎಫ್.ಓ ಹೇಳಿದ್ದೇನು?
ಇನ್ನು ಡಿ.ಎಫ್.ಓ. ನಂದೀಶ್ ಮಾತನಾಡಿ, ಬೆಂಗಳೂರು ಕೇಂದ್ರ ಕಚೇರಿಯಿಂದ ಪರಿಶೀಲನೆಗೆ ಸೂಚಿಸಿದ್ದರಿಂದ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸ್ಥಳ ಮಹಜರು ಪ್ರಕ್ರಿಯೆ ಕೂಡ ನಡೆಯುತ್ತಿದೆ. ವಿನಯ್ ಗುರೂಜಿ ಅವರಿಂದಲೂ ಹುಲಿ ಚರ್ಮದ ವಿಚಾರದ ಮಾಹಿತಿ ಪಡೆದಿದ್ದೇವೆ. ಅವರು ಎರಡು ವರ್ಷದ ಹಿಂದಿನ ಹುಲಿ ಚರ್ಮದ ಫೋಟೋ ಎಂದು ಹೇಳಿದ್ದಾರೆ ಅಂತಾ ಹೇಳಿದರು.
ಹಾಗೆಯೇ ಹುಲಿ ಚರ್ಮವನ್ನು ಯಾರು ಕೊಟ್ಟಿದ್ದು, ಎಲ್ಲಿಂದ ಬಂತು ಎಲ್ಲಾ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಅಮರೇಂದ್ರ ಎಂಬುವರು ಉಡುಗೊರೆ ನೀಡಿದ್ದು ಎಂದು ತಿಳಿಸಿದ್ದಾರೆ. ನಾವು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದರು.












Click it and Unblock the Notifications