ಸುವರ್ಣ ಮಂಡ್ಯದಲ್ಲಿ ಉರಿಗೌಡ-ನಂಜೇಗೌಡರ ಬಗ್ಗೆ ಉಲ್ಲೇಖ: ದೇ.ಜವರೇಗೌಡರು ಬಿಜೆಪಿಯವರಲ್ಲ ಎಂದ ಸಿ.ಟಿ ರವಿ
1994 ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಆಗ ದೇ. ಜವರೇಗೌಡ ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕದಲ್ಲಿ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ಉಲ್ಲೇಖವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ
ಚಿಕ್ಕಮಗಳೂರು, ಮಾರ್ಚ್ 20: ಉರಿಗೌಡ-ನಂಜೇಗೌಡರನ್ನು ಸೃಷ್ಟಿ ಮಾಡಿದ್ದು ಬಿಜೆಪಿ, ಸಿ.ಟಿ.ರವಿ, ಅಶ್ವಥ್ ನಾರಾಯಣ್, ಆರ್.ಎಸ್.ಎಸ್ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ದೇ.ಜವರೇಗೌಡರು ಪುಸ್ತಕ ಬರೆದದ್ದು 1994ರಲ್ಲಿ. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಆಗ ಮುಖ್ಯಮಂತ್ರಿ ಆಗಿದ್ದವರು ದೇವೇಗೌಡರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇ.ಜವರೇಗೌಡರ ಪುಸ್ತಕವನ್ನು ಬಿಡುಗಡೆ ಮಾಡಿದ್ದು ದೇವೇಗೌಡರು. ಅದೇ ಪುಸ್ತಕ 2006ರಲ್ಲಿ ಮರುಮುದ್ರಣಗೊಂಡಿದೆ. ದೇ.ಜವರೇಗೌಡರು ಬಿಜೆಪಿಯವರಲ್ಲ ಎಂದು ಸಿ.ಟಿ.ರವಿ ಆರೋಪ ಮಾಡುವವರಿಗೆ ಇತಿಹಾಸವನ್ನು ನೆನಪಿಸಿದ್ದಾರೆ.

ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಗಾದೆ ಮಾತಿದೆ. 1994 ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಆಗ ದೇ. ಜವರೇಗೌಡ ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕದಲ್ಲಿ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ಉಲ್ಲೇಖವಿದೆ ಎಂದರು.
ಉರಿಗೌಡ-ನಂಜೇಗೌಡರ ಕಥೆ ಕಾಲ್ಪನಿಕ ಕಥೆಯಲ್ಲ. ಸುವರ್ಣ ಮಂಡ್ಯ ಪುಸ್ತಕದಲ್ಲಿ ದೇ.ಜವರೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ ಉರಿಗೌಡ-ನಂಜೇಗೌಡ ಸೇರಿದಂತೆ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿ ಬಿದ್ದಿದ್ದರು. ಟಿಪ್ಪುವನ್ನು ಕೊಂದಿದ್ದು ಅಪರಿಚಿತರು ಎಂದು ಹೇಳುತ್ತಾರೆ. ಆದರೆ, ನಾವು ಹೇಳುತ್ತೇವೆ ಉರಿಗೌಡ-ನಂಜೇಗೌಡರೇ ಟಿಪ್ಪುವನ್ನು ಕೊಂದಿದ್ದು. ಬೇಕಾದರೆ ಕಾಲ್ಪನಿಕ ಕಥೆ ಎಂದು ಹೇಳುವವರು ಈ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ ಎಂದು ಹೇಳಲಿ ಅದನ್ನು ಒಪ್ಪುತ್ತೇವೆ ಎಂದಿದ್ದಾರೆ.
ಸುಳ್ಳನ್ನು ಹೇಗೆ ಬಿಂಬಿಸಿದ್ದಾರೆ ಎಂದರೆ ಆಡಳಿತ ಭಾಷೆಯ ಬದಲಿಗೆ ಪಾರ್ಸಿ ಭಾಷೆ ತಂದ ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಕರೆಯುತ್ತಾರೆ. ಅವನನ್ನು ಕನ್ನಡದ್ರೋಹಿ ಎಂದು ಕರೆಬೇಕು. ನಾನು ಚಾಲೆಂಜ್ ಮಾಡುತ್ತೇನೆ. ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮಸೀದಿಯನ್ನಾಗಿಸಿದ ಕಿರಾತಕ ಯಾರು ಎಂದು ಪ್ರಶ್ನಿಸಿದ್ದಾರೆ. ಟಿಪ್ಪು ಮತಾಂಧ ಅಲ್ಲದಿದ್ರೆ ಆಂಜನೇಯ ದೇವಾಲಯವನ್ನು ಜಾಮೀಯ ಮಸೀದಿಯಾಗಿ ಪರಿವರ್ತನೆ ಮಾಡಿದ ಆ ದೇಶದ್ರೋಹಿ-ಧರ್ಮದ್ರೋಹಿ ಯಾರು ಎಂದು ಪ್ರಶ್ನಿಸಿದ್ದಾರೆ.

ಉರಿಗೌಡ-ನಂಜೇಗೌಡ ಕಾಲ್ಪನಿಕ ಪಾತ್ರ ಎಂದವರು ನಮ್ಮನ್ನು ಕ್ಷಮೆ ಕೇಳಬೇಕು
ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಉರಿಗೌಡ-ನಂಜೇಗೌಡರ ವಿವಾದಕ್ಕೆ ಸಂಬಂಧಿಸಿದಂತೆ ನಮಗೆ ಉರಿಗೌಡ-ನಂಜೇಗೌಡರಿಗಿಂತ ಬೋರೇಗೌಡ ಮುಖ್ಯ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, ಬೋರೇಗೌಡನ ಮೇಲೆ ಪ್ರೀತಿ ಇರುವುದಕ್ಕೆ ಬಡ ಬೋರೇಗೌಡನ ಖಾತೆಗೆ ವರ್ಷಕ್ಕೆ 10 ಸಾವಿರ ಹಣ ಹಾಕುತ್ತಿರುವುದು. ಬೋರೇಗೌಡನ ಮೇಲೆ ಕಾಳಜಿ ಇರುವುದಕ್ಕೆ ಹಾಲಿಗೆ ಐದು ರೂಪಾಯಿ ಸಬ್ಸಿಡಿ ಕೊಡುತ್ತಿರುವುದು ಎಂದರು.
ಬೋರೇಗೌಡನ ಮೇಲೆ ಪ್ರೀತಿ ಇರುವುದಕ್ಕೆ ಕಿಸಾನ್ ಸಮ್ಮಾನ್ ಯೋಜನೆ, ಹಾಲಿಗೆ ಸಬ್ಸಿಡಿ ಹಾಗೂ ಬಡ್ಡಿ ಇಲ್ಲದೆ ಐದು ಲಕ್ಷ ಹಣ ಕೊಡುತ್ತಿದ್ದೇವೆ. ಬೋರೇಗೌಡನ ಬಗ್ಗೆ ಕಾಳಜಿ ಇದೆ. ಆದರೆ, ಪ್ರೇರಣೆ ಎಲ್ಲಿಂದ ಸಿಗುತ್ತದೆ. ಇತಿಹಾಸದಿಂದ ಸಿಗುತ್ತದೆ. ಇತಿಹಾಸದಿಂದ ಪ್ರೇರಣೆ ಪಡೆಯಬೇಕು, ನಾವು ಬರೀ ಮನುಷ್ಯರು ಮಾತ್ರ ಕರೆಸಿಕೊಂಡರೇ ಸಾಲೋದಿಲ್ಲ ಎಂದಿದ್ದಾರೆ.
ಮನುಷ್ಯರು ಎಂದಾಗ ನೀವು ಯಾರು ಎಂಬ ಪ್ರಶ್ನೆ ಬರುತ್ತದೆ. ನಾವು ಕನ್ನಡಿಗರು. ಹೊರಗಿನವರು ನೀನು ಯಾರು ಅಂದ್ರೆ ಭಾರತೀಯ ಎಂದು ಹೇಳುತ್ತೇವೆ. ಹಿಂದೂ ಅಂತ ಹೇಳುತ್ತೇವೆ. ಜಾತಿಯಲ್ಲಿ ಯಾರು ಅಂದ್ರೆ ಜಾತಿ ಹೆಸರೇಳುತ್ತೇವೆ. ಅದರಲ್ಲಿ ಯಾರ ಮಗ ಅಂದರೆ ತಂದೆ ಹೆಸರೇಳುತ್ತೇವೆ. ಅದು ನಮ್ಮ ಐಡೆಂಟಿಟಿ. ಅದೇ ರೀತಿ ನಮಗೊಂದು ಅಸ್ಮಿತೆ ಇದೆ. ಐಡೆಂಟಿಟಿ ಇದೆ. ಅದರ ಜೊತೆ ಸಮಾಜ ಗುರುತಿಸುತ್ತದೆ ಎಂದರು.

ಇನ್ನು ಇದೇ ವೇಳೆ, ಉರಿಗೌಡ-ನಂಜೇಗೌಡ ಕಾಲ್ಪನಿಕ ಪಾತ್ರ. ಸಿ.ಟಿ.ರವಿ, ಅಶ್ವಥ್ ನಾರಾಯಣ್, ಬಿಜೆಪಿ, ಆರ್.ಎಸ್.ಎಸ್. ಸೃಷ್ಠಿ ಎಂದವರು ನಮ್ಮನ್ನ ಕ್ಷಮೆ ಕೇಳಬೇಕು ಎಂದರು. ದೇ.ಜವರೇಗೌಡರು ಸಾಮಾನ್ಯ ಜನರಲ್ಲ. ಅವರನ್ನು ಅವರು ಬರೆದ ಪುಸ್ತಕವನ್ನು ನೀವು ಅವಮಾನಿಸುತ್ತಿರಾ? ಮಾಜಿ ಪ್ರಧಾನಿ ದೇವೇಗೌಡರು ಬಿಡುಗಡೆ ಮಾಡಿರುವ ಪುಸ್ತಕವನ್ನು ನೀವು ಅಪಮಾನ ಮಾಡುತ್ತಿರಾ? ಸುವರ್ಣ ಮಂಡ್ಯ ಎನ್ನುವುದನ್ನು ನೀವು ಅಪಮಾನ ಮಾಡುತ್ತೀರಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications