• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂಡಿಗೆರೆಯಲ್ಲಿ ಜಾಲಿ ರೈಡ್ ತಂದ ಆಪತ್ತು; ವಿದ್ಯಾರ್ಥಿಗಳಿಬ್ಬರ ಸಾವು

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಡಿಸೆಂಬರ್ 20: ಜಾಲಿ ರೈಡ್ ಮಾಡುವಾಗ ಮರಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಳಿಹಳ್ಳದ ಬಳಿ ಘಟನೆ ನಡೆದಿದ್ದು, ಧ್ಯಾನ್ ಗೌಡ (17), ಆದರ್ಶ ಉತ್ತಪ್ಪ (17) ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.

ತಿಥಿಗೆಂದು ಬಂದಿದ್ದ ಯೋಧನ ದುರ್ಮರಣ; 20 ಗಂಟೆ ನಂತರ ಸಿಕ್ಕಿತು ಮೃತದೇಹ

ವಿದ್ಯಾರ್ಥಿಗಳು ಎಂಇಎಸ್ ಕಾಲೇಜಿನವರಾಗಿದ್ದು, ಎರಡು ಮಾರುತಿ 800 ಕಾರಿನಲ್ಲಿ ಜಿದ್ದಾಜಿದ್ದಿಯಿಂದ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ್ದಾರೆ. ಈ ಸಂದರ್ಭ ಅವಘಡ ಸಂಭವಿಸಿದೆ. ಮುದ್ರೆಮನೆಯ ಹರ್ಷಿತ್ ಕರಿಯಪ್ಪನಿಗೆ ಗಂಭೀರ ಗಾಯವಾಗಿದೆ.

20 ದಿನದ ಹಿಂದಷ್ಟೇ ಆದರ್ಶ ಉತ್ತಪ್ಪನ ತಂದೆ ಮೃತಪಟ್ಟಿದ್ದು, ನಿನ್ನೆಯಷ್ಟೆ ತಂದೆಯ ಕಾರ್ಯ ಮುಗಿಸಿ ಕಾಲೇಜಿಗೆ ಹಾಜರಾಗಿದ್ದ.

English summary
Two students were killed when a car crashed into a tree during a Jolly Ride on Thursday evening in mudigere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X