ಸಾರಿಗೆ ನೌಕರರ ಮುಷ್ಕರ; ಪೊಲೀಸ್ ಭದ್ರತೆಯಲ್ಲಿ ರಸ್ತೆಗಿಳಿದ ಬಸ್‌!

ಚಿಕ್ಕಮಗಳೂರು, ಡಿಸೆಂಬರ್ 13: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನವೂ ಮುಂದುವರೆದಿದೆ. ಮುಷ್ಕರದ ನಡುವೆಯೇ ಕೆಲವು ಬಸ್‌ಗಳು ಪೊಲೀಸರ ಎಸ್ಕಾರ್ಟ್‌ನಲ್ಲಿ ಸಂಚಾರ ನಡೆಸಿವೆ.

ಭಾನುವಾರ ಸಹ ಚಿಕ್ಕಮಗಳೂರಿನಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲಿ ಸಾಲಾಗಿ ಬಸ್‌ಗಳು ನಿಂತಿವೆ. ಬಸ್ ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಸರ್ಕಾರದ ವಿರುದ್ಧ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಳ ಆಕ್ರೋಶ ಮುಂದುವರೆದಿದೆ.

ಬಸ್‌ಗಳ ಸಂಚಾರ ಇಲ್ಲದ ಕಾರಣ ಮೈಕೊರೆಯುವ ಚಳಿಯಲ್ಲಿ ಬಸ್ಸಿನಲ್ಲಿಯೇ ಚಾಲಕ, ನಿರ್ವಾಹಕರು ಮಲಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮೈ ಕೊರೆಯುವ ಚಳಿ ಇದ್ದು, ಸಿಬ್ಬಂದಿಗಳು ಬೆಳಗ್ಗೆ ಎದ್ದು ಬಿಸಿಲು ಕಾಯಿಸುತ್ತಿದ್ದಾರೆ.

Transport employees strike Police Provide Escort To KSRTC Buses

ಚಾಲಕ ಮತ್ತು ನಿರ್ವಾಹಕರಿಗೆ ಕಳೆದ ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲಿಯೇ ಊಟ, ತಿಂಡಿ ಆಗುತ್ತಿದೆ. ಮುಷ್ಕರ ಮಾಡುತ್ತಿರುವ ನೌಕರರ ಜೊತೆ ಸರ್ಕಾರ ನಡೆಸುತ್ತಿರುವ ಮಾತುಕತೆ ವಿಫಲವಾಗುತ್ತಿದೆ. ಬಸ್ ಸಂಚಾರ ಯಾವಾಗ ಆರಂಭ? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ರಸ್ತೆಗಿಳಿದ ಬಸ್; ಭಾನುವಾರ ಚಿಕ್ಕಮಗಳೂರು ವಿಭಾಗದ ಮೂರು ಬಸ್‌ಗಳು ಸಂಚಾರ ಆರಂಭಿಸಿವೆ. ಪೊಲೀಸರು ಬಸ್ ಸಂಚಾರಕ್ಕೆ ಎಸ್ಕಾರ್ಟ್‌ ಭದ್ರತೆ ಒದಗಿಸಿದ್ದಾರೆ. ಬೇಲೂರು- ಸಕಲೇಶಪುರ , ಅರಸೀಕೆರೆ-ಬಾಣಾವಾರ, ಬಾಣವಾರ-ಚಿಕ್ಕಮಗಳೂರು ಮಾರ್ಗದ ಬಸ್‌ ಸಂಚಾರ ನಡೆಸಿವೆ.

ಸಾರಿಗೆ ಇಲಾಕೆ ಅಧಿಕಾರಿಗಳು ಸಹ ಬಸ್‌ನಲ್ಲಿದ್ದಾರೆ. ಪೊಲೀಸರು ಬಸ್ ಸಾಗುವ ಮಾರ್ಗದಲ್ಲಿ ಎಸ್ಕಾರ್ಟ್ ನೀಡುತ್ತಿದ್ದಾರೆ. ಚಿಕ್ಕಮಗಳೂರು ಕೆಎಸ್ಆರ್‌ಟಿಸಿ ಡಿಸಿ ವಿರೇಶ್ ನೇತೃತ್ವದಲ್ಲಿ ಬಸ್‌ಗಳನ್ನು ಕಾರ್ಯಚರಣೆಗೆ ಇಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+