ವಿಡಿಯೋ; ಭದ್ರಾ ಅಭಯಾರಣ್ಯದಲ್ಲಿ ದರ್ಶನ ಕೊಟ್ಟ ಹುಲಿರಾಯ

ಚಿಕ್ಕಮಗಳೂರು, ನವೆಂಬರ್ 20: ಶುಕ್ರವಾರ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಅಚ್ಚರಿಯೊಂದು ಕಾದಿತ್ತು. ಮರದ ಮೇಲೇರಿ ಕುಳಿತಿದ್ದ ಹುಲಿರಾಯ ಪ್ರವಾಸಿಗರಿಗೆ ಅಪರೂಪಕ್ಕೆ ದರ್ಶನ ನೀಡಿದ್ದು, ಹುಲಿಯನ್ನು ಕಣ್ತುಂಬಿಕೊಂಡು ಅವರು ಸಂತಸದಿಂದ ಮರಳಿದ್ದಾರೆ.

ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ವಿಭಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಫಾರಿಯನ್ನು ಆಯೋಜನೆ ಮಾಡಲಾಗುತ್ತದೆ. ಈ ವೇಳೆ ಶುಕ್ರವಾರವೂ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ಹತ್ತು ಜನರ ತಂಡ ಸಫಾರಿಗೆ ಹೊರಟಿದೆ. ಸಫಾರಿಯಲ್ಲಿ ಈ ಪ್ರವಾಸಿಗರಿಗೆ ಮರದ ಮೇಲೆ ಮಲಗಿಕೊಂಡ ಹುಲಿ ಕಾಣಿಸಿಕೊಂಡಿದೆ.

Chikkamagaluru: Tourists On Safari Get A Rare Glimpse Of Tiger Sitting On Tree In Bhadra Wildlife Sanctuary

ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮರದ ಮೇಲೆಯೇ ಹುಲಿ ಕುಳಿತುಕೊಂಡಿದ್ದು, ಪ್ರವಾಸಿಗರು ಹುಲಿಯನ್ನು ನೋಡಿ ಸಂತೋಷಗೊಂಡಿದ್ದಾರೆ. ಹಲವು ರೀತಿಯಲ್ಲಿ ಹುಲಿಯ ಫೋಟೊವನ್ನು ಕ್ಲಿಕ್ಕಿಸಿ ಸಫಾರಿಗೆ ಬಂದಿದ್ದೂ ಸಾರ್ಥಕ ಎನ್ನುವಂತೆ ಖುಷಿಪಟ್ಟಿದ್ದಾರೆ. ಭದ್ರಾ ಅಭಯಾರಣ್ಯದಲ್ಲಿ ಹುಲಿಗಳು ಇವೆ. ಆದರೆ ದಟ್ಟವಾದ ಅಭಯಾರಣ್ಯವಾದ್ದರಿಂದ ಅವುಗಳು ಕಾಣಿಸಿಕೊಳ್ಳುವುದೇ ಬಲು ಅಪರೂಪವಾಗಿದೆ. ಆದರೆ ಇಂದು ಸಫಾರಿಗೆ ಹೋದವರಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+