ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ನಿವೇಶನಕ್ಕೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿದ ಸತ್ತಿಹಳ್ಳಿ ಗ್ರಾಮಸ್ಥರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್‌, 20: ನಿವೇಶನ ರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ತಾಲೂಕಿನ ಸತ್ತಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗಿಹಾಕಿ ಪ್ರತಿಭಟನೆ ನಡೆಸಿದರು.

ಸತ್ತಿಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೇ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ಬೀಗ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. 2009-10ನೇ ಸಾಲಿನಲ್ಲಿ ಮಾಚಿಗೊಂಡನಹಳ್ಳಿ ಸರ್ವೇ ನಂಬರ್ 167ರಲ್ಲಿ ಸತ್ತಿಹಳ್ಳಿ ಗ್ರಾಮ ಪಂಚಾಯತ್‌ಗೆ ಆಶ್ರಯ ನಿವೇಶನ ಹಂಚಿಕೆಗೆ ಜಾಗ ಮಂಜೂರಾಗಿತ್ತು. ಈ ಜಾಗದಲ್ಲಿ ಅರಣ್ಯ ಇಲಾಖೆಯವರು ಅಕೆಶೀಯಾ ಗಿಡಗಳನ್ನು ಬೆಳೆಸಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಚಿಕ್ಕಮಗಳೂರು: ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ 2ನೇ ಬಲಿಚಿಕ್ಕಮಗಳೂರು: ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ 2ನೇ ಬಲಿ

ನಿವೇಶನ ಕಲ್ಪಿಸಿಕೊಡಿ ಎಂದು ಆಕ್ರೋಶ
ಗ್ರಾಮ ವ್ಯಾಪ್ತಿಯಲ್ಲಿ ಅನೇಕರಿಗೆ ಉಳಿದುಕೊಳ್ಳಲು ಮನೆಗಳೇ ಇಲ್ಲ. ಆದ್ದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ನಿವೇಶನಗಳನ್ನು ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಆದ್ದರಿಂದ ಶೀಘ್ರವೇ ನಿವೇಶನ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‍ನ 16 ಜನ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು. ಪ್ರತಿಭಟನೆ ಬಳಿಕ ಗ್ರಾಮ ಪಂಚಾಯತ್ ಕಚೇರಿಯ ಬೀಗ ತೆಗೆದು ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಟ್ಟರು.

Chikkamagaluru taluk Satthihalli villagers wants sights from government

ಗ್ರಾ.ಪಂ. ಸದಸ್ಯ ರಮೇಶ್ ಹೇಳಿದ್ದೇನು?
ಇನ್ನು ಈ ಬಗ್ಗೆ ಗ್ರಾಮ ಪಂಚಾಯಿತ್‌ ಸದಸ್ಯ ರಮೇಶ್ ಮಾತಾನಾಡಿದ್ದು, "ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಗ್ರಾಮದಲ್ಲಿ ನಿವೇಶನ ರಹಿತ ಜನರಿದ್ದು, ನಮ್ಮ ಗ್ರಾಮಕ್ಕೆ ಮಂಜುರಾದ ನಿವೇಶನ ಜಾಗದಲ್ಲಿ ಆಕೇಶಿಯಾ ಗಿಡಿಗಳನ್ನ ಬೆಳೆಸಲಾಗಿದೆ. ಆಕೇಶಿಯಾ ಮರಗಳನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸತ್ತಿಹಳ್ಳಿಯಲ್ಲಿ ಹಲವಾರು ಜನ ನಿವೇಶನಗಳಿಲ್ಲದೇ ಪರದಾಡುತ್ತಿದ್ದಾರೆ. ಇದ್ದ ನಿವೇಶನ ಜಾಗದಲ್ಲಿಯೂ ಆಕೇಶಿಯಾ ಗಿಡಗಳನ್ನು ನೆಟ್ಟಿದ್ದಾರೆ. ಇದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಅವರು ಗ್ರಾಮ ಪಂಚಾಯತ್‌ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ನಮಗೆ ಮೊದಲು ನಿವೇಶನದ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಪ್ರತಿಭಟನೆ ನಡೆಸುವ ಮೂಲಕ ಗ್ರಾಮ ಪಂಚಾಯತ್‌ ಸದಸ್ಯರರನ್ನೇ ಕಚೇರಿ ಒಳಗಡೆ ಕೂಡಿ ಹಾಕಿ, ಬೀಗವನ್ನು ಜಡಿದಿದ್ದರು. ಆಗ ಎಚ್ಚೆತ್ತ ಗ್ರಾಮ ಪಂಚಾಯತ್‌ ಅಧಿಕಾರಿಗಳು ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಜನರ ಪರವಾಗಿ ಮಾತನಾಡುತ್ತಾ ಜಾರಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ," ಎನ್ನಲಾಗಿದೆ.

Chikkamagaluru taluk Satthihalli villagers wants sights from government

ಅರಣ್ಯ ಇಲಾಖೆ ಅಧಿಕಾರಿಗಳ ದರ್ಬಾರ್‌
ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಅರಣ್ಯ ಇಲಾಖೆಯವರ ದರ್ಬಾರ್‌ ನಡೆಯುತ್ತಿದ್ದು, ಅವರು ಬೇಕಾದಲ್ಲಿ ಗಿಡಗಳನ್ನು ನೆಟ್ಟು ಅಲ್ಲಿನ ನಿವಾಸಿಗಳಿಗೆ ತೊಂದರೆ ಕೊಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದು ಅರಣ್ಯದ ಜಾಗ ಆದ್ದರಿಂದ ಇಲಗಲ್ಲಿ ಗಿಡಗಳನ್ನಯ ನೆಡುತ್ತಿದ್ದೇವೆ ಎಂದು ದಬ್ಬಾಳಿಕೆಯನ್ನು ಹಾಕುತ್ತಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

English summary
Satthihalli villagers of Chikkamagaluru taluk protested by locking Gram Panchayat office, demanding the sights provided. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X