ಅಜ್ಜಂಪುರದಲ್ಲಿ ಲೇಟಾಗಿ ಬಂದ ಟೀಚರ್ ಗೆ ವಿದ್ಯಾರ್ಥಿಗಳಿಂದ ಶಿಕ್ಷೆ
ಚಿಕ್ಕಮಗಳೂರು, ಫೆಬ್ರವರಿ 15: ಶಿಕ್ಷಕರ ಬೇಜಾವಾಬ್ದಾರಿತನವನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಬರದೇ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡು, ಶಾಲೆ ಬಾಗಿಲು ಹಾಕಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪ್ರತಿದಿನ ಬೆಳಿಗ್ಗೆ 12 ಗಂಟೆಗೆ ಬಂದು ಮಧ್ಯಾಹ್ನ ಮೂರು ಗಂಟೆಗೆ ಶಿಕ್ಷಕರು ಮನೆ ಸೇರುತ್ತಾರೆ ಎಂದು ಗ್ರಾಮಸ್ಥರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಕೂಡ ತಡವಾಗಿ ಆಗಮಿಸಿದ ಶಿಕ್ಷಕರನ್ನು ಶಾಲಾ ಗೇಟ್ ನ ಮುಂಭಾಗದಲ್ಲೇ ತಡೆದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಬಿಇಒಗೆ ಪತ್ರ ಬರೆದು ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.












Click it and Unblock the Notifications