ಬಾಳೆಗದ್ದೆಯಲ್ಲಿ ಕಾಟ ಕೊಡುತ್ತಿದ್ದ ಕಾಳಿಂಗ ಅಂತೂ ಸೆರೆಯಾದ
ಚಿಕ್ಕಮಗಳೂರು, ಡಿಸೆಂಬರ್ 27: ತೋಟದಲ್ಲಿ ಸೇರಿಕೊಂಡು ಕಾಟ ಕೊಡುತ್ತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ನಡೆದಿದೆ.
ಒಂದು ವರ್ಷದಿಂದ ಕೂಲಿ ಕಾರ್ಮಿಕರಿಗೆ ಕಾಟ ಕೊಡುತ್ತಿದ್ದ ಕಾಳಿಂಗ ಬಾಳೆಗದ್ದೆ ಗ್ರಾಮದ ಮಾಧವ್ ಎಂಬುವವರ ತೋಟದಲ್ಲಿ ಸೆರೆಯಾಗಿದೆ.
ಸುಮಾರು 13 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮಹಮ್ಮದ್ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮುಡಿ ಘಾಟ್ ಗೆ ಬಿಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ತೋಟದಲ್ಲಿ ಯಾವುದೇ ಕೂಲಿ ಕಾರ್ಮಿಕರು ಬರಲು ಭಯ ಪಡುತ್ತಿದ್ದರು ಹಾಗೂ ತೋಟದಲ್ಲಿ ಎಲ್ಲಾ ಕೆಲಸಗಳು ಅರ್ಧಕ್ಕೆ ನಿಂತಿದ್ದವು.

ಇದೀಗ ಕಾಳಿಂಗ ಸರ್ಪ ಸೆರೆಯಿಂದ ಕೂಲಿ ಕಾರ್ಮಿಕರು ಹಾಗೂ ತೋಟದ ಮಾಲಿಕ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications