ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ; ಗಾಯದ ಮೇಲೆ ಬರೆ?

ಚಿಕ್ಕಮಗಳೂರು, ಆಗಸ್ಟ್ 26: ಮಳೆಯಿಂದ ತತ್ತರಿಸಿ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಜನರಲ್ಲಿ ಮಳೆ ಮತ್ತೆ ಆತಂಕ ತಂದಿದೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಿನ್ನೆಯಿಂದಲೂ ಮಳೆ ಆರಂಭವಾಗಿದೆ.

ಎರಡು ವಾರಗಳ ಹಿಂದೆ ಚಿಕ್ಕಮಗಳೂರನ್ನು ಬೆಚ್ಚಿ ಬೀಳಿಸಿದ್ದ ಮಳೆ ಕಳೆದ ವಾರವಷ್ಟೆ ಸ್ವಲ್ಪ ತಗ್ಗಿತ್ತು. ಕೆಲ ದಿನಗಳಿಂದ ಮಳೆ ನಿಂತಿದ್ದು, ಮೋಡ ಕವಿದ ವಾತಾವರಣವಿತ್ತು. ಭೂಕುಸಿತ, ರಸ್ತೆ ಕುಸಿತವಾದ ಜಾಗಗಳಲ್ಲಿ ಅದರ ದುರಸ್ತಿ ಕೆಲಸಗಳೂ ನಡೆಯುತ್ತಿದ್ದವು. ಆದರೆ ನಿನ್ನೆ ಮಧ್ಯಾಹ್ನದಿಂದಲೂ ಮಳೆ ಆರಂಭವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಮನೆಯಿಲ್ಲದೇ ಇನ್ನೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೂರಾರು ಸಂತ್ರಸ್ತರಿದ್ದು, ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರೀ ಮಳೆಯಿಂದ ರಸ್ತೆ ದುರಸ್ತಿ ಕಾರ್ಯಕ್ಕೂ ತೊಡಕಾಗಿದೆ.

Rain Started Again In Mudigere

Recommended Video

      ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada

      ನಾಳೆ ಮೂಡಿಗೆರೆ ತಾಲೂಕಿಗೆ ಸಿಎಂ ಯಡಿಯೂರಪ್ಪ ಭೇಟಿಯಾಗಲಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಹೋಗಿ, ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+