• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ರಾಜಕಾರಣದ ಮೇಲೆ ರಾಹುಲ್ ಪ್ರಭಾವ ಎಷ್ಟಿದೆ?

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಡಿಸೆಂಬರ್ 16 : ರಾಜಕಾರಣಿಗಳಿಗೆ ವಿಶೇಷವಾದ ಶಕ್ತಿ ಆ ಭಗವಂತ ಕಲ್ಪಿಸಿದ್ದಾನೆ ಅಂತ ಕಾಣಿಸುತ್ತದೆ. ಅದು ಅಂತಿಂತ ಶಕ್ತಿ ಅಲ್ಲ, ಬೇಕಾದಾಗ ಜಾತಿ ಬದಲಾಗುತ್ತೆ, ಧರ್ಮ ಬದಲಾಗುತ್ತೆ, ಗೋತ್ರನೂ ಬದಲಾಗುತ್ತೆ.

ಯಾಕಂದ್ರೆ ಹಲವಾರು ಸಂಧರ್ಭದಲ್ಲಿ ರಾಹುಲ್ ಗಾಂಧಿ ಅವ್ರು ಟೆಂಪಲ್ ರನ್ ಮಾಡಿದನ್ನ ನೋಡಿದ್ವಿ, ನಾನು ಜನಿವಾರ ಧರಿಸಿರೋ ಬ್ರಾಹ್ಮಣ ಅಂತ ಹೇಳಿದನ್ನು ಕೇಳಿದ್ವಿ, ಆದ್ರೀಗ ನನ್ನದು ದತ್ತಾತ್ರೆಯ ಗೋತ್ರ ಅಂತ ಹೇಳುವ ಮೂಲಕ ಬಿಜೆಪಿ ಅವ್ರಿಗೂ ರಾಹುಲ್ ಗಾಂಧಿ ಹೇಳಿದ್ದು, ಇದು ಕರ್ನಾಟಕದಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಪೈಪೋಟಿ

ನನ್ನ ತಾತ ಪಾರ್ಸಿ, ತಾಯಿ ಕ್ರಿಶ್ಚಿಯನ್ ಆದ್ರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ನಾನು ಬ್ರಾಹ್ಮಣ ಅಂತ ಹಲವಾರು ಬಾರಿ ಹೇಳಿಕೊಂಡಿರೋದನ್ನ ನಾವು ಕೇಳಿದ್ದೇವೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಟೆಂಪಲ್ ಟು ಟೆಂಪಲ್ ರನ್ ಮಾಡ್ತಿರೋ ರಾಹುಲ್ ಗಾಂಧಿ ತಮ್ಮ ಸಾಫ್ಟ್ ಹಿಂದುತ್ವದ ಅಸ್ತ್ರದಿಂದ ಬಿಜೆಪಿ ಅವ್ರಿಗೆ ತಲೆ ನೋವಾಗಿದ್ದಾರೆ.

ಇದರ ಮಧ್ಯೆ ಮೊದಲಿನಿಂದಲೂ ಬಿಜೆಪಿ ಅವ್ರು ನಿಮ್ಮ ಗೋತ್ರ ಯಾವುದು ಅಂತ ಹೇಳಲಿ ಅಂತ ಸವಾಲು ಎಸೆದಿದ್ರು. ಆದ್ರೀಗ ಸ್ವತಃ ರಾಹುಲ್ ಆ ಎಲ್ಲಾ ಪ್ರಶ್ನೆಗೆ ಉತ್ತರ ನೀಡುವ ಮೂಲಕ ಬಿಜೆಪಿ ಅವರ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಬಿಜೆಪಿಗೆ ನುಂಗಲಾರದ ತುತ್ತು

ಬಿಜೆಪಿಗೆ ನುಂಗಲಾರದ ತುತ್ತು

ಎಸ್ ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ನನ್ನದು ದತ್ತಾತ್ರೇಯ ಗೋತ್ರ ಅಂತ ರಾಜಸ್ಥಾನ ವಿಧಾನಸಭಾ ಚುನಾವಣೆ ವೇಳೆ ಹೇಳಿಕೊಂಡಿರೋದು ಇದೀಗ ಕರ್ನಾಟಕ ರಾಜಕಾರಣದ ಮೇಲೆ ಪ್ರಭಾವ ಬಿದ್ದಿದೆ. ಕರ್ನಾಟಕದ ಅಯೋಧ್ಯೆ ಅಂತಾನೆ ಕರೆಸಿಕೊಳ್ಳುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಾಕಷ್ಟು ರಾಜಕಾರಣಿಗಳು ಇಂದಿಗೂ ಧಾರ್ಮಿಕ ಭಾವನೆಗಳ ಜೊತೆ ಭಾವನಾತ್ಮಕವಾಗಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೇವಲ ಈ ವಿವಾದವನ್ನು ಚುನಾವಣೆ ಸಂದರ್ಭದಲ್ಲಿ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಆದ್ರೀಗ ರಾಹುಲ್ ಗಾಂಧಿ ನನ್ನದು ದತ್ತಾತ್ರೆಯ ಗೋತ್ರ ಅನ್ನುವ ಮೂಲಕ ಚಿಕ್ಕಮಗಳೂರು, ಉಡುಪಿ ಹಾಗೂ ಕರಾವಳಿ ಭಾಗದ ಬಿಜೆಪಿ ಅವ್ರಿಗೆ ನಡುಕ ಸೃಷ್ಟಿ ಮಾಡಿದ್ದಾರೆ.ಇದರ ನಡುವೆ ಕಳೆದ 11 ನೇ ತಾರೀಖಿನಿಂದ 22 ನೇ ತಾರೀಖಿನವರೆಗೂ ನಡೆಯುತ್ತಿರುವ ದತ್ತಮಾಲ ಜಯಂತಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ರಾಹುಲ್ ಗಾಂಧಿ ಅವರ ಆಗಮನಕ್ಕೆ ಸ್ವತಃ ಹಿಂದೂ ಪರ ಸಂಘಟನೆಗಳೇ ರೆಡ್ ಕಾರ್ಪೆಟ್ ಹಾಕಿ ಕಾಯುತ್ತಿರೋದು ಬಿಜೆಪಿ ಅವ್ರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮನವಿ ಮಾಡಿದ ಸಂಘಟನೆಗಳು

ಮನವಿ ಮಾಡಿದ ಸಂಘಟನೆಗಳು

ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳು ಒಂದರ್ಥದಲ್ಲಿ ಬಿಜೆಪಿಯ ಬೆಂಬಲಕ್ಕೆ ನಿಂತಿದೆ. ಮೊದಲಿನಿಂದಲೂ ದತ್ತಪೀಠ ಹಿಂದೂಗಳಿಗೆ ಸೇರುವಂತೆ ಮಾಡಿ ಅಂತ ಮನವಿ ಮಾಡಿದ್ರು ನಮಗೆ ಪ್ರಯೋಜನವಾಗ್ತಿಲ್ಲ ಅಂತ ಇದೀಗ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಕೇವಲ ನಮನ್ನು ಮತಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ರಾಹುಲ್ ಗಾಂಧಿ ಅವ್ರು ರಾಜಕೀಯ ಮಾಡದೆ ತಾನೊಬ್ಬ ಹಿಂದೂ ಅಂತ ಭೇಟಿ ನೀಡಿದ್ರೆ ನಾವು ಸ್ವಾಗತಿಸುತ್ತೇವೆ ಅಂತ ಹೇಳುತ್ತಿದ್ದಾರೆ. ಇಷ್ಟು ದಿನ ರಾಹುಲ್ ಗಾಂಧಿ ಹೇಳಿಕೆಗಳನ್ನ ಹಗುರವಾಗಿ ತೆಗೆದುಕೊಳ್ಳುತ್ತಿದ್ದ ಬಿಜೆಪಿ ಅವ್ರು ಮೊನ್ನೆ ನಡೆದ ಪಂಚ ರಾಜ್ಯ ಚುನಾವಣೆ ಫಲಿತಾಂಶ ನೋಡಿದ ಮೇಲೆ ರಾಹುಲ್ ನನ್ನು ನೋಡಿ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ.

ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಜೆಡಿಎಸ್ ಗೆ ಮುಳುಗು ನೀರಾಗುತ್ತಾ?

ಬಿಜೆಪಿಗೆ ಕಬ್ಬಿಣದ ಕಡಲೆ

ಬಿಜೆಪಿಗೆ ಕಬ್ಬಿಣದ ಕಡಲೆ

ಇದರ ನಡುವೆ ರಾಹಲ್ ಗಾಂಧಿ ನನ್ನದು ದತ್ತಾತ್ರೆಯ ಗೋತ್ರ ಅಂತ ಹೇಳಿಕೆ ನೀಡಿರೋದು ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀಳೋದ್ರಲ್ಲಿ ಅನುಮಾನವಿಲ್ಲ,ಯಾಕಂದ್ರೆ ಅತೀ ಹೆಚ್ಚು ಸಂಸದರನ್ನು ಕೊಟ್ಟಿರೋ ಹೆಗ್ಗಳಿಗೆ ಕರ್ನಾಟಕಕ್ಕೆ ಸಲ್ಲಬೇಕು,ಎಲ್ಲಿ ರಾಹುಲ್ ಗಾಂಧಿ ಭೇಟಿ ನೀಡ್ತಾರೋ ಹಿಂದೂ ಮತಗಳನ್ನ ಸೆಳೆಯುತ್ತಾರೋ ಅನ್ನೋ ಭಯ ಸಾಮಾನ್ಯವಾಗಿ ಬಿಜೆಪಿಯವರಲ್ಲಿದೆ. ಇದರ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರ ಇರೋದ್ರಿಂದ ನುಂಗಲಾರದ ತುತ್ತಾಗಿರೋದು ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ಅವರಿಗೂ ಕಬ್ಬಿಣದ ಕಡಲೆ ಆಗಿದೆ.

ಕೆಲವು ರಾಜಕಾರಣಿಗಳಿಗೆ ತಲೆನೋವು

ಕೆಲವು ರಾಜಕಾರಣಿಗಳಿಗೆ ತಲೆನೋವು

ಒಟ್ಟಾರೆ ಇಷ್ಟು ದಿವಸ ರಾಹುಲ್ ಗಾಂಧಿ ಅವರನ್ನ ಪಪ್ಪು ಅಂತ ಗೇಲಿ ಮಾಡುತ್ತಿದ್ದ ಬಿಜೆಪಿ ಅವ್ರು,ಇದೀಗ ರಾಹುಲ್ ಅವರ ಪ್ರತಿ ನಡೆಯನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರೋದ್ರಲ್ಲಿ ಅನುಮಾನವಿಲ್ಲ. ಆದ್ರೀಗ ಹಿಂದೂ ಮುಸ್ಲಿಂ ಅಂತಾ ದೇವರ ಹೆಸರಿನಲ್ಲಿ ವೋಟ್ ಗಾಗಿ ಗೇಮ್ ಪ್ಲಾನ್ ಮಾಡುತ್ತಿದ್ದ ಕೆಲ ರಾಜಕಾರಿಣಿಗಳಿಗೆ ತಲೆನೋವಾಗಿದೆ. ನಿಜಕ್ಕೂ ರಾಹುಲ್ ಗಾಂಧಿ ಅವ್ರು ಕರ್ನಾಟಕದ ಅಯೋಧ್ಯ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡೇನ್ ಗಿರಿ ಭೇಟಿ ನೀಡ್ತಾರಾ, ಕರ್ನಾಟಕದ ರಾಜಕೀಯದ ಮೇಲು ತಮ್ಮ ಕರಾಮತ್ತು ತೋರಿಸುತ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

ಪಂಚರಾಜ್ಯ ಚುನಾವಣಾ ಫಲಿತಾಂಶ ಯಾರಿಗೆ ಎಚ್ಚರಿಕೆಯ ಗಂಟೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
President of the Indian National Congress Rahul Gandhi has influenced the upcoming Karnataka Lok Sabha elections.Here's a detailed article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more