ಚಿಕ್ಕಮಗಳೂರು; ಪ್ರಪಾತದಲ್ಲಿ ಬಿದ್ದಿದ್ದ ಟೆಕ್ಕಿ ಶವ ಹೊರತೆಗೆದ ಪೊಲೀಸ್
ಚಿಕ್ಕಮಗಳೂರು, ಡಿಸೆಂಬರ್ 11; ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ನಾಪತ್ತೆಯಾಗಿದ್ದ ಟೆಕ್ಕಿ ಭರತ್ ಮೃತದೇಹವನ್ನು ಭಾನುವಾರ ಸಂಜೆ ಪ್ರಪಾತದಿಂದ ಮೇಲಕ್ಕೆ ತೆರಲಾಗಿದೆ. ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಬೆಂಗಳೂರು ಮೂಲಕ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನು ಪ್ರಪಾತದಿಂದ ಮೇಲಕ್ಕೆ ತರಲಾಗಿದೆ. ಶನಿವಾರ ಸಂಜೆ ವೇಳೆ ಮೃತದೇಹ ಪತ್ತೆಯಾಗಿದ್ದರೂ ದಟ್ಟಕಾಡು, ಕಾಡುಪ್ರಾಣಿಗಳ ಕಾಟ, ಕತ್ತಲಲ್ಲಿ 4 ಸಾವಿರ ಅಡಿ ಪ್ರಪಾತದಿಂದ ಮೃತದೇಹ ಹೊರತರುವುದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿಗಳು ಸೇರಿದಂತೆ ಸ್ಥಳಿಯರು ಕಾರ್ಯಾಚರಣೆ ನಿಲ್ಲಿಸಿದ್ದರು.

ಭಾನುವಾರ ಕಾರ್ಯಚರಣೆ; ಭಾನುವಾರ ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ ಹರಸಾಹಸಪಟ್ಟು ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತದೇಹವನ್ನ ತರುವುದು ಅಷ್ಟು ಸುಲಭವಲ್ಲ.
ಆದರೆ 25 ಜನರ ತಂಡ ಸುಮಾರು 5 ಕಿ. ಮೀ. ಮೃತದೇಹವನ್ನು ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.
ರಾಣಿಝರಿ ವ್ಯೂ ಪಾಯಿಂಟ್‍ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ. ಮೀ. ಆಗಲಿದೆ. ಸ್ಥಳೀಯರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇತದೇಹವನ್ನು ಹರಸಾಹಸಪಟ್ಟು ಮೇಲಕ್ಕೆ ತಂದರು. ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ತಂಪಾದ ವಾತಾವರಣದಿಂದ ಕೊಳೆತು ಹೋಗಿತ್ತು.
ಮೃತದೇಹವನ್ನು ಅದು ಸಿಕ್ಕ ಜಾಗದಲ್ಲಿಯೇ ಪ್ಯಾಕ್ ಮಾಡಿ ಕಡಿದಾದ ಬೆಟ್ಟವನ್ನು ಹತ್ತಿ ಮೇಲಕ್ಕೆ ತಂದಿದ್ದಾರೆ. ಟೆಕ್ಕಿ ಭರತ್ ನಾಪತ್ತೆ ಕುರಿತು ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಆತ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನು ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ.
ಯಾರ ಸಂಪರ್ಕಕ್ಕೂ ಆತ ಸಿಗುತ್ತಿಲ್ಲ ಎಂದು ಮೂರು ದಿನಗಳ ಬಳಿಕ ಅವರ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಲು ಮುಂದಾಗಿದ್ದರು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಅವರ ಸ್ನೇಹಿತರು ಭರತ್ ಶೋಧ ಕಾರ್ಯದಲ್ಲಿ ತೊಡಗಿದ್ದರು. ಡ್ರೋಣ್ ಕ್ಯಾಮರಾಗಳನ್ನು ಬಳಸಿಯೂ ಶೋಧ ನಡೆಸಲಾಗಿತ್ತು. ಶನಿವಾರ ಭರತ್ ಮೃತಪಟ್ಟಿರುವುದು ತಿಳಿದಿತ್ತು.
ಬೆಂಗಳೂರಿನಲ್ಲಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಕಾನೂನು ಪ್ರಕ್ರಿಯೆಗಳ ಬಳಿಕ ಶವವನ್ನು ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಗುತ್ತದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications