ವಿಶ್ವಾಸದ ಮೈತ್ರಿ ಅಲ್ಲ, ಸಂಚಿನ ಕೂಟ; ಸಿ.ಟಿ.ರವಿ ವ್ಯಂಗ್ಯ

Recommended Video

      ವಿಶ್ವಾಸದ ಮೈತ್ರಿ ಅಲ್ಲ, ಸಂಚಿನ ಕೂಟ; ಸಿ.ಟಿ.ರವಿ ವ್ಯಂಗ್ಯ | Oneindia Kannada

      ಚಿಕ್ಕಮಗಳೂರು, ಆಗಸ್ಟ್ 26: "ಇವರದ್ದು ವಿಶ್ವಾಸದ ಮೈತ್ರಿ ಅಲ್ಲ, ಬಿಜೆಪಿಯನ್ನು ಕೆಳಗಿಳಿಸಲು ರಚಿಸಿದ ರಾಜಕೀಯ ಸಂಚಿನ ಕೂಟ ಅಷ್ಟೆ. ಈಗ ಸತ್ಯವೆಲ್ಲಾ ಸಾಬೀತಾಗುತ್ತಿದೆ" ಎಂದು ಮೈತ್ರಿ ಸರ್ಕಾರದ ಕುರಿತು ವ್ಯಂಗ್ಯ ಮಾಡಿದರು ಸಚಿವ ಸಿ.ಟಿ.ರವಿ.

      ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರ ವಾಗ್ವಾದ ವಿಚಾರದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಎಚ್ ಡಿ ಕೆ, ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

      "ಮೊದಲಿನಿಂದಲೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಮುಖ್ಯ ಉದ್ದೇಶದಿಂದಲೇ ಮೈತ್ರಿ ಮಾಡಿಕೊಂಡಿದ್ದು ಎಂಬ ಮಾತು ಇತ್ತು. ಅದು ಸತ್ಯ ಎಂಬುದು ಸಾಬೀತಾಗಿದೆ. ಈ ಮೈತ್ರಿ ಎಂಬುದು ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ. ಅತೃಪ್ತರ ಇಂದಿನ ಪರಿಸ್ಥಿತಿಗೆ ಹಿಂದಿನ ಸಭಾಧ್ಯಕ್ಷರೇ ಕಾರಣ" ಎಂದು ಪ್ರತಿಕ್ರಿಯಿಸಿದರು.

      Not A Coalition Government But Conspiracy Said CT Ravi In Chikkamagaluru

      "ಚುನಾವಣೆ ಬಗ್ಗೆ ನಮಗೆ ಹೆದರಿಕೆ ಇಲ್ಲ. ಸರ್ಕಾರ ಎಷ್ಟು ದಿನ ಇರುತ್ತದೋ ಅಷ್ಟು ದಿನ‌ ಒಳ್ಳೆ ಕೆಲಸ ಮಾಡ್ತೇವೆ. ನಮಗೆ ಚುನಾವಣೆ ಅಥವಾ ಸರ್ಕಾರದ ಅಳಿವು ಉಳಿವಿನ ಬಗ್ಗೆ ಆತಂಕವೇ ಇಲ್ಲ" ಎಂದರು.

      ಖಾತೆ ಹಂಚಿಕೆ‌ ವಿಚಾರವಾಗಿಯೂ ಮಾತನಾಡಿದ ಅವರು, "ನಾನು ಮಂತ್ರಿ ಸ್ಥಾನವನ್ನೇ ಬಯಸಿರಲಿಲ್ಲ. ಹಾಗಾಗಿ ಇದೇ ಖಾತೆ ಬೇಕು ಅನ್ನೋ ಬಯಕೆ ಇಲ್ಲ. ಯಾವ ಖಾತೆಯನ್ನು ನೀಡಿದ್ರೂ ಕೆಲಸ ಮಾಡ್ತೇನೆ" ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+