ನಾಗಮಂಗಲ ಗಲಭೆ: ಯಾವ ಸಾಬರ ಮೇಲೂ ತಲ್ವಾರ್ ಝಳಪಿಸಿಲ್ಲ- ಸಿ.ಟಿ.ರವಿ ವಾಗ್ದಾಳಿ
ಚಿಕ್ಕಮಗಳೂರು ಸೆಪ್ಟೆಂಬರ್ 14: ಮಂಡ್ಯದ ನಾಗಮಂಗಲದಲ್ಲಿ ಇಂದು ಮಾಧ್ಯಮದವರನ್ನು ಹೊರಗಿಟ್ಟು ಶಾಂತಿ ಸಭೆಯನ್ನು ನಡೆಸುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆದಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯ ವಿಚಾರದಲ್ಲಿ ಶಾಂತಿ ಸಂದಾನ ಮಾಡಲು ಸಚಿವರು ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ವಿಪಕ್ಷಗಳು ಕಿಡಿ ಕಾರಿವೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ, 'ಯಾವ ಸಾಬರ ಮೇಲೂ ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದು ಮತಾಂಧ ತುರುಕರು. ಕಲ್ಲು ತೂರಿ, ಪೆಟ್ರೋಲ್ ಬಾಂಬ್ ಹಾಕಿದ್ದು ಮತಾಂಧ ತುರುಕರು. ಅವರ ಮೇಲೆ ಕ್ರಮ ಆಗಬೇಕಿತ್ತು, ಈ ಹೇಡಿ ಸರ್ಕಾರ ಗಣಪತಿ ಕೂರಿಸದವರನ್ನೇ A1 ಮಾಡಿದೆ. 1-18ರವರೆಗೆ ಆರೋಪಿಗಳು ಶಾಂತಿಯುತ ಮೆರವಣಿಗೆ ಮಾಡಿದವರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ. ಗಣಪತಿ ಮೆರವಣಿಗೆ ಬರಬೇಡ ಅನ್ನೋಕೆ ಅವನು ಯಾವನು. ಮೊದಲು ಅವನನ್ನ ಒದ್ದು ಒಳ ಹಾಕಬೇಕಿತ್ತು. ಸರ್ಕಾರ A1 ಮಾಡಿರೋದು ಗಣಪತಿ ಕೂರಿಸಿದವರನ್ನ, ನಾಚಿಕೆ ಆಗಬೇಕು ಇವ್ರಿಗೆ. ಗಣೇಶನ ಮೆರವಣಿಗೆ ಶಾಂತಿಯುತವಾಗಿತ್ತು, ಪೆಟ್ರೋಲ್ ಬಾಂಬ್, ಕಲ್ಲು, ತಲ್ವಾರ್ ಇಟ್ಟುಕೊಂಡಿರಲಿಲ್ಲ' ಎಂದು ಕೆಂಡ ಕಾರಿದರು.
ಇವರು ಲಾಡೆನ್ ಬಂದ್ರೆ ಹಮಾರ ಆದ್ಮಿ ಅಂತ ಬಿಟ್ಟುಕೊಳ್ತಾರೆ. ಮುತಾಲಿಕ್ ಹೋದ್ರೆ ಇವರಿಗೆ ಸಂಕಟ ಆಗುತ್ತೆ. ಬಾಂಬ್ ಹಾಕೋನು, ತಾಲಿಬಾನ್‌ಗಳು ಬಂದ್ರೆ ಬಿಟ್ಟುಕೊಳ್ತಾರೆ. ನಮ್ದುಕೆ ಜನ ನಮ್ಗೆ ಓಟ್ ಹಾಕ್ತಾರೆ ಅಂತ ಕಾಂಗ್ರೆಸ್ಸಿಗರು ತಲೆ ಮೇಲೆ ಟೋಪಿ ಹಾಕ್ಕೊಂಡ್ ಕರ್ಕೋಳ್ತಾರೆ. ತಾಲಿಬಾನ್ ಇವ್ರೋ... ಅವ್ರೋ... ಯಾರು ವ್ಯಾತ್ಯಾಸನೇ ಗೊತ್ತಾಗ್ದಂಗೆ ನಾಟಕ ಆಡ್ತಾರೆ ಅಂತ ಸಿಟಿ ರವಿ ಕಿಡಿ ಕಾರಿದ್ದಾರೆ.

ಮಾಧ್ಯಮ ಮುಚ್ಚಿಟ್ಟು ಶಾಂತಿ ಸಭೆ ನಿಮ್ಮ ಹುಳುಕು ಮುಚ್ಚಿಕೊಳ್ಳೋಕಾ? ಇಂಟಾಲರೆನ್ಸ್ ಮೈಂಡ್ ಸೆಟ್ ಸರಿಪಡಿಸಲಿ ಶಾಂತಿ ನೆಲೆಸುತ್ತೆ. ಪೆಟ್ರೋಲ್ ಬಾಂಬ್ ತಯಾರಿಸಿದವನ ಮನೆಗೆ ಬುಲ್ಡೋಜರ್ ನುಗ್ಗಿಸಲಿ ಶಾಂತಿ ನೆಲೆಸುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ಏನಿದು ಪ್ರಕರಣ?
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬುಧವಾರ ರಾತ್ರಿ ಗಣೇಶ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿದೆ. ಸೆಪ್ಟೆಂಬರ್ 11 ಸಂಜೆ 6.30ರ ವೇಳೆಗೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಸೆಪ್ಟೆಂಬರ್ 7ರಂದು ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ಹೊರಟಿದ್ದರು.
ಯಾ ಅಲ್ಲಾ ಮಸೀದಿ ಮತ್ತು ದುರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆ ತಡೆಯೊಡ್ಡಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದುರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಇನ್ನೇನು ಮಸೀದಿ ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಕೆಲ ಕಿಡಿಗೇಡಿಗಳು ಗಣೇಶನ ಮೂರ್ತಿ ಇರುವ ಕಡೆಗೆ ಕಲ್ಲು ತೂರಿದ್ದಾರೆ. ಮಸೀದಿ ಮೇಲೆ ಕಟ್ಟಡಗಳ ಮೇಲೆ ನಿಂತು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕಲ್ಲು ತೂರಿದವರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.
ಆದರೆ ರಾತ್ರಿ 10 ಗಂಟೆ ಸುಮಾರಿಗೆ ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ಬೈಕ್‌ಗಳನ್ನು ಸುಟ್ಟುಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಕೆಲವರು ಲಾಂಗು, ರಾಡ್, ತಲ್ವಾರ್‌ಗಳನ್ನು ಹಿಡಿದು ಅಟ್ಟಹಾಸ ಪ್ರದರ್ಶಿಸಿದ್ದಾರೆ.
ಆದರೆ ಈ ಘಟನೆಗೆ ಕಾರಣ ಮುಸ್ಲಿಂರು, ಹೀಗಿದ್ದರೂ ಹಿಂದೂಗಳನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವನ್ನು ಗುರಿ ಮಾಡಿರುವ ವಿಪಕ್ಷಗಳು ಹಿಂದೂ ಯುವಕರನ್ನು ಬಿಡುಗಡೆಗೆ ಒತ್ತಾಯಿಸಿವೆ.












Click it and Unblock the Notifications