Monsoon Rain: ಚಿಕ್ಕಮಗಳೂರಿನ ಬಡ ಮಕಾನ್ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
ಚಿಕ್ಕಮಗಳೂರು, ಜೂನ್, 02: ಮಳೆಗಾಗಿ ಪ್ರಾರ್ಥಿಸಿ ಜಿಲ್ಲಾ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ನಗರದ ಬಡಮಕಾನ್ ಮಸೀದಿಯಲ್ಲಿ ಶನಿವಾರ ಸಂಜೆ ಮುಖಂಡರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್ ಖಾನ್ ಮಾತನಾಡಿ, ಜನ, ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ರೈತರು ಭೂಮಿಯನ್ನು ಬಿತ್ತಿ ಬೆಳೆ ಬೆಳೆಯಲು ಅನುಕೂಲವಾಗುವಂತೆ ಕಾಲ ಕಾಲಕ್ಕೆ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ ಮರಗಿಡಗಳ ನಾಶದಿಂದ ಪ್ರಕೃತಿ ಮುನಿಸಿಕೊಂಡ ಹಿನ್ನೆಲೆಯಲ್ಲಿ ಮರಗಿಡಗಳನ್ನು ನಗರದಲ್ಲಿ ಹೆಚ್ಚಾಗಿ ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಮತ್ತು ನಗರದಲ್ಲಿ ಪ್ರತಿಯೊಬ್ಬರು ಗಿಡನೆಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಾನವ ಮತ್ತು ದೇವರ ನಡುವೆ ಸಂಬಂಧಗಳು ಇದ್ದರೂ ಅದಕ್ಕೆ ಪ್ರತಿಯಾಗಿ ಜೀವಿಗಳಿಗೆ ಅದ್ಭುತವಾದ ಕಾರ್ಯಗಳನ್ನು ದೇವರು ಕರುಣಿಸುತ್ತಾನೆ. ಎಲ್ಲರೊಂದಿಗೂ ಒಳ್ಳೆತನವನ್ನು ಪ್ರದರ್ಶಿಸಿದರೆ ಮಾತ್ರ ಜೀವ ಜಂತುಗಳು ಹಾಗೂ ಹಸಿರಿನ ಪ್ರಕೃತಿ ಸಂಪತ್ತನ್ನು ಉಳಿಸಬಹುದು ಎಂದರು.












Click it and Unblock the Notifications