ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾವೈರಸ್ ಸೋಂಕಿನಿಂದ MLC ಪ್ರಾಣೇಶ್ ಗುಣಮುಖರಾಗಿ ಡಿಸ್ಚಾರ್ಜ್

|
Google Oneindia Kannada News

ಚಿಕ್ಕಮಗಳೂರು, ಜುಲೈ.16: ನೊವೆಲ್ ಕೊರೊನಾವೈರಸ್ ಸೋಂಕಿನ ಸುಳಿಗೆ ಸಿಲುಕಿದ್ದ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಎಂ.ಕೆ ಹಾಗೂ ಅವರ ಪತ್ನಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಎಂಎಲ್ ಸಿ ಪ್ರಾಣೇಶ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಆತ್ಮೀಯರೇ, ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದದಿಂದ ಇಂದು ನಾನು ಮತ್ತು ನನ್ನ ಶ್ರೀಮತಿ #COVID19 ವೈರಸ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದೇವೆ. ವೈದ್ಯರ ಸಲಹೆ ಮೆರೆಗೆ ಮುಂದಿನ 14 ದಿನ ವಿಶ್ರಾಂತಿ ಪಡೆಯಬೇಕಿದ್ದು, ತದನಂತರ ನಿಮ್ಮೆಲ್ಲನ್ನು ಭೇಟಿ ಮಾಡುತ್ತೇನೆ." ಎಂದು ಬರೆದಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿಟಿ ರವಿಗೆ ಕೊರೊನಾ ಪಾಸಿಟಿವ್!ಪ್ರವಾಸೋದ್ಯಮ ಸಚಿವ ಸಿಟಿ ರವಿಗೆ ಕೊರೊನಾ ಪಾಸಿಟಿವ್!

ಕೊರೊನಾವೈರಸ್ ಸೋಂಕಿನಿಂದ ನಾವು ಗುಣಮುಖರಾಗಲು "ನೀವು ತೋರಿದ ಪ್ರೀತಿ ವಿಶ್ವಾಸಕ್ಕೆ ನನ್ನಿಂದ ಉತ್ತರವಿಲ್ಲ. ನಿಮ್ಮೆಲ್ಲರಿಗೂ ನಾನು ನನ್ನ ಕುಟುಂಬ ಸದಾ ಚಿರಋಣಿ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಎಲ್ಲಾ #COVID19 Warriors ಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ನಿರಂತರ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ ಎನಿಸುತ್ತದೆ. ದೇವರ ಆಶೀರ್ವಾದ ನಿಮಗೆ ನಿಮ್ಮ ಕುಟುಂಬಸ್ಥರಿಗೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

MLC Pranesh MK Cured From Covid-19 And Returned To Home

ಕೊರೊನಾವೈರಸ್ ಬಗ್ಗೆ ಭಯ ಬೇಡ:

ರಾಜ್ಯದಲ್ಲಿ ಹರಡುತ್ತಿರುವ ಕೊರೊನಾವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರು ಯಾವುದೇ ರೀತಿ ಭಯ ಪಡುವುದು ಬೇಡ. #COVID19 ವೈರಸ್ ಕುರಿತು ಭಯವನ್ನು ಬಿಟ್ಟು ಎಚ್ಚರಿಕೆ ವಹಿಸಿ. ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.

English summary
MLC Pranesh MK Cured From Covid-19 And Returned To Home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X