ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಸಚಿವರು, ಶಾಸಕರ ಗುಪ್ತ್-ಗುಪ್ತ್ ಸಭೆ
ಚಿಕ್ಕಮಗಳೂರು, ಜುಲೈ 2: ಕಾಫಿನಾಡು ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಸಚಿವರು ಮತ್ತು ಶಾಸಕರ ಗುಪ್ತ ಸಭೆ ನಡೆದಿದೆ. ಮುಳ್ಳಯ್ಯನಗಿರಿ ಬಳಿಯ ಪ್ರೈಮ್ ರೋಸ್ ವಿಲ್ಲಾಸ್ ರೆಸಾರ್ಟ್ ನಲ್ಲಿ ಸಭೆ ಸೇರಿದ್ದರು.
ಕಂದಾಯ ಸಚಿವರಾದ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ ರವಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜೊತೆ ಸೌತ್ ಕೃಷ್ಣಪ್ಪ, ಮುನಿರಾಜು ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

2 ದಿನಗಳ ಹಿಂದೆಯೇ ಆರ್.ಅಶೋಕ್, ಕೃಷ್ಣಪ್ಪ ಹಾಗೂ ಮುನಿರಾಜು ಬಂದು ವಾಸ್ತವ್ಯ ಹೂಡಿದ್ದರು. ಸಚಿವ ಜಗದೀಶ್ ಶೆಟ್ಟರ್ ಅವರು ನಿನ್ನೆ ಬಂದು ತಂಡ ಸೇರಿದ್ದಾರೆ. ಈ ನಾಯಕರ ಸಭೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ ಎನ್ನಲಾಗಿದೆ.













Click it and Unblock the Notifications