ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಸಿ.ಟಿ ರವಿ
ಚಿಕ್ಕಮಗಳೂರು, ಆಗಸ್ಟ್ 04: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಸಚಿವ ಸಿ.ಟಿ ರವಿ ಮಾನವೀಯತೆ ಮೆರೆದಿದ್ದಾರೆ.
ಹಾಸನ ಹೊರ ಭಾಗವಾದ ಉದ್ದೂರು-ಹರಳಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಮಹಿಳೆಯೊಬ್ಬರು ಅಪಘಾತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಚಿವ ಸಿ.ಟಿ ರವಿ ತಮ್ಮ ವಾಹನ ನಿಲ್ಲಿಸಿ ಹತ್ತಿರ ಹೋಗಿ ನೋಡಿದ್ದಾರೆ.
ಈ ಸಂದರ್ಭದಲ್ಲಿ ಯುವತಿ ಪ್ರಜ್ಞೆ ತಪ್ಪಿದ್ದರಿಂದ ತಾವೇ ಸ್ವತ: ತಮ್ಮ ಕಾರಿನಲ್ಲಿ ಗಾಯಳು ಯುವತಿಯನ್ನು ಕರೆದುಕೊಂಡು ಬಂದು ಹಾಸನದ ಹಿಮ್ಸ್ ಆಸ್ಪತ್ರೆಯ ನಾನ್ ಕೋವಿಡ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆಯ ನಂತರ ವೈದ್ಯರ ಜೊತೆ ಮಾತನಾಡಿ ಅಪಘಾತದ ತೀವ್ರತೆ ಬಗ್ಗೆ ಮಾಹಿತಿ ಪಡೆದರು. ಯುವತಿಗೆ ಪ್ರಜ್ಞೆ ಬಂದ ನಂತರ ಆಕೆಯನ್ನು ಮಾತನಾಡಿಸಿ ಆರೋಗ್ಯ ವಿಚಾರಣೆ ಮಾಡಿ, ಧೈರ್ಯ ಹೇಳಿ ನಂತರ ಬೆಂಗಳೂರಿಗೆ ತೆರಳಿದರು.












Click it and Unblock the Notifications