ಕೊಪ್ಪ ರಸ್ತೆಯಲ್ಲಿ ರಾಜಾರೋಷವಾಗಿ ಲಾಂಗ್ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ ವ್ಯಕ್ತಿ

ಚಿಕ್ಕಮಗಳೂರು, ಜುಲೈ 23: ನಡು ರಸ್ತೆಯಲ್ಲೇ ರಾಜಾರೋಷವಾಗಿ ಲಾಂಗ್ ಹಿಡಿದು ಓಡಾಡಿದ ಅಪರಿಚಿತನಿಂದಾಗಿ ಕೆಲ ಹೊತ್ತು ಆತಂಕ ಸೃಷ್ಟಿಯಾದ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಇಲ್ಲಿನ ಕೊಪ್ಪ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬ ದೊಡ್ಡ ಲಾಂಗ್ ಹಿಡಿದು ಓಡಾಡಿದ್ದಾನೆ. ಈತನನ್ನು ಕಂಡು ಕ್ಷಣಕಾಲ ಜನರೂ ಭಯಭೀತರಾಗಿದ್ದರೆ. ಈತ ಓಡಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಕೊಪ್ಪ ಪಟ್ಟಣದಲ್ಲೆಲ್ಲಾ ಹುಡುಕಾಡಿದ್ದಾರೆ. ಆದರೆ ಆ ವ್ಯಕ್ತಿ ಎಲ್ಲೂ ಪತ್ತೆಯಾಗಿಲ್ಲ.

man walk in road with sword in chikkamagaluru

ಸಿಸಿ ಟಿವಿಯಿಂದ ದೊರೆತ ದೃಶ್ಯದ ಪೋಟೊ ಆಧರಿಸಿ ಪೊಲೀಸರಿಂದ ವ್ಯಕ್ತಿಯ ಶೋಧ ಕಾರ್ಯ ಮುಂದುವರಿದಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹುಡುಕಾಟ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+