ಚಿಕ್ಕಮಗಳೂರು: 6 ತಿಂಗಳಿನಲ್ಲಿ 5,777 ವಾಹನಗಳ ಖರೀದಿ!

ಚಿಕ್ಕಮಗಳೂರು, ಏಪ್ರಿಲ್ 29: ಕಾಳು ಮೆಣಸು, ಕಾಫಿ, ಅಡಿಕೆ ದರ ಏರಿಕೆಯಾಗಿದೆ. ಮಲೆನಾಡು, ಕರಾವಳಿ ಭಾಗದ ರೈತರು ಸಂತಸಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರೈತರು ಫಸಲು ಮಾರಾಟ ಮಾಡಿ ವಾಹನಗಳ ಖರೀದಿಗೆ ಮುಂದಾಗಿದ್ದಾರೆ. ಕಳೆದ ಆರು ತಿಂಗಳಿನಲ್ಲಿ ಜಿಲ್ಲೆಯಲ್ಲಿ 5,777 ಹೊಸ ವಾಹನಗಳು ನೋಂದಣಿಯಾಗಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಈ ವಾಹನಗಳಲ್ಲಿ ಐಷಾರಾಮಿ ಕಾರುಗಳು ಸಹ ಸೇರಿವೆ.

ಕಾಳು ಮೆಣಸು, ಕಾಫಿ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಈ ವರ್ಷ ಎರಡೂ ಬೆಳೆಗಳ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಆದ್ದರಿಂದ ಹೆಚ್ಚಿನ ಲಾಭ ದೊರೆತಿದ್ದು, ಜನರು ಖರೀದಿಯನ್ನು ಹೆಚ್ಚಳ ಮಾಡಿದ್ದಾರೆ.

Luxury Car Purchase In Boom At Chikkamagaluru

ಎಷ್ಟು ಕಾರುಗಳು ನೋಂದಣಿ?; ಚಿಕ್ಕಮಗಳೂರು ಆರ್‌ಟಿಓ ಕಚೇರಿ ಮಾಹಿತಿಯಂತೆ ಜಿಲ್ಲೆಯಲ್ಲಿ ವಾಹನಗಳ ಖರೀದಿ ಸಂಖ್ಯೆ ಹೆಚ್ಚಳವಾಗಿದೆ. 32.43 ಲಕ್ಷದ ಒಂದು ಬಿಎಂಡ್ಲ್ಯೂ, 73.29 ಲಕ್ಷದ ಮೂರು ಮರ್ಸಿಡೆಸ್-ಬೆಂಝ್ ಕಾರು, 14-25 ಲಕ್ಷ ರೂ.ಗಳ ಮಹೀಂದ್ರಾ ವಿವಿಧ ಕಾರುಗಳು, 35 ಲಕ್ಷದ ಮೌಲ್ಯದ ಸ್ಕೋಡಾ, 43 ಟೊಯೊಟಾ ಕಾರುಗಳು ಸೇರಿ ಒಟ್ಟು 1,364 ಕಾರುಗಳು ನೋಂದಣಿಯಾಗಿವೆ.

ಉಳಿದಂತೆ 3,300 ಬೈಕ್‌ಗಳು, 50 ಮೊಪೆಡ್‌ಗಳು, 224 ಟ್ರಾಕ್ಟರ್, 422 ಗೂಡ್ಸ್ ವಾಹನಗಳು, 6 ಬಸ್, 153 ಮೂರು ಚಕ್ರದ ವಾಹನಗಳು ಕಳೆದ ಆರು ತಿಂಗಳಿನಲ್ಲಿ ನೋಂದಣಿಯಾಗಿವೆ. ಈ ವರ್ಷ ಜಿಲ್ಲೆಯಲ್ಲಿ 13,000 ವಾಹನಗಳು ನೋಂದಣಿಯಾಗಬಹುದು. ಅದರಲ್ಲಿ ಕಾರುಗಳ ಸಂಖ್ಯೆಯೇ 3,000 ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.

ಕಾಳು ಮೆಣಸು ಮತ್ತು ಕಾಫಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕಾಳು ಮೆಣಸಿನ ದರ ಕ್ವಿಂಟಾಲ್‌ಗೆ 60 ರಿಂದ 75,000 ರೂ. ತನಕ ಇದೆ. ಕಳೆದ ವರ್ಷ 50 ಕೆಜಿ ಕಾಫಿ ಬ್ಯಾಗ್ ದರ 15,000 ರೂ. ಇತ್ತು. ಈ ವರ್ಷ 17,000 ರಿಂದ 29,000 ರೂ. ತನಕ ಆಗಿದೆ.

ರೈತರು ಫಸಲನ್ನು ಮಾರಾಟ ಮಾಡಿ ಅದರ ಲಾಭವನ್ನು ವಾಹನಗಳ ಮೇಲೆ ಹಾಕುತ್ತಿದ್ದಾರೆ. ಕೃಷಿಗೆ ಅಗತ್ಯವಿರುವ, ಮನೆಗೆ ಅಗತ್ಯವಿರುವ ವಾಹನಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಕಾಳು ಮೆಣಸು, ಕಾಫಿಗೆ ಉತ್ತಮ ದರ ಸಿಕ್ಕಿದ್ದು, ರೈತರ ಸಂತೋಷ ಇಮ್ಮಡಿಗೊಂಡಿದೆ.

ಕಾಫಿ ಮತ್ತು ಅಡಿಕೆ ಬೆಲೆ ಹಲವು ವರ್ಷಗಳ ಬಳಿಕ ಏರಿಕೆಯಾಗಿದೆ. ಆದ್ದರಿಂದ ಜನರು ಅಗತ್ಯ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಹೇಳಿದ್ದಾರೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಕಾಫಿ ಬೆಳೆಯ ಕೊರತೆ ಉಂಟಾಗಿದೆ. ಆದರೆ ಇರುವ ಬೆಳೆಗೆ ಉತ್ತಮ ದರ ಸಿಗುತ್ತಿದೆ ಎಂದು ಜನರು ಸಂತಸಗೊಂಡಿದ್ದಾರೆ.

ಚಿಕ್ಕಮಗಳೂರು ಆರ್‌ಟಿಓ ಕಛೇರಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೊಸ ವಾಹನಗಳ ನೋಂದಣಿಯನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಿದೆ. ಆನ್‌ಲೈನ್ ನೋಂದಣಿಯಲ್ಲಿ ಯಾವುದೇ ಗೊಂದಲ ಇದ್ದರೆ ಜನರು ನೇರವಾಗಿ ಆರ್‌ಟಿಓ ಕಚೇರಿಯನ್ನು ಸಂಪರ್ಕಿಸಿ ಎಂದು ಮನವಿ ಮಾಡಲಾಗಿದೆ.

ಅಡಿಕೆ ದರ ಏರಿಕೆ: ಶಿವಮೊಗ್ಗದಲ್ಲಿ ಏಪ್ರಿಲ್ 28ರ ಸೋಮವಾರ ಸರಕು (ಹಸ) ಅಡಿಕೆಯ ದರ ಕ್ವಿಂಟಾಲ್‌ಗೆ 92,740 ರೂ. ಇತ್ತು. ಬೆಟ್ಟೆ 59,299 ಮತ್ತು ರಾಶಿ ಅಡಿಕೆ ದರ 59,199 ರೂ. ಇತ್ತು. ಮಾಹಿತಿಗಳ ಪ್ರಕಾರ ಒಂದೇ ದಿನ ಶಿವಮೊಗ್ಗ ಎಪಿಎಂಸಿಗೆ 50 ಕ್ವಿಂಟಾಲ್ ಸರಕು, 2,722 ಕ್ವಿಂಟಾಲ್ ರಾಶಿ, 678 ಕಿಂಟಾಲ್ ಗೊರಬಲು ಮತ್ತು 151 ಕಿಂಟಾಲ್ ಬೆಟ್ಟೆ ಅಡಿಕೆ ಆವಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+