ಚಿಕ್ಕಮಗಳೂರು: ಕೃಷ್ಣಮೂರ್ತಿಯವರ ಸುಂದರ ಬರಹಕ್ಕೆ ಮನಸೋತ ಜನರು, ಟೈಟಾನ್‌ನಿಂದಲೂ ಪ್ರಶಂಸೆ

ಚಿಕ್ಕಮಗಳೂರು, ಮಾರ್ಚ್ 28: ವಯಸ್ಸು 88 ಆದರು ಕಾಫಿನಾಡಿನ ಈ ಹಿರಿಯ ಜೀವದ ಕೈ ಬರಹ ಎಲ್ಲರ ಕಣ್ಮನ ಸೆಳೆಯುತ್ತಿದೆ. ಓದಿರುವುದು 5ನೇ ಕ್ಲಾಸ್ ಆದರೆ, ಬರವಣಿಗೆ ಮಾತ್ರ ಇವರದು ಫಸ್ಟ್ ಕ್ಲಾಸ್, ಕಂಪ್ಯೂಟರ್ ಅನ್ನು ಮೀರಿಸುವಂತಹ ಬರವಣಿಗೆ ಇವರ ಹಸ್ತಾಕ್ಷರದಲ್ಲಿ ಅಡಗಿದೆ, ಇವರ ಕೈ ಬರಹಕ್ಕೆ ದಿವಂಗತ ದೇವರಾಜ ಅರಸು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಂಪ್ಯೂಟರ್ ಬರಹವನ್ನೂ ಮೀರಿಸುವ ಹಸ್ತಾಕ್ಷರ ಹೊಂದಿರುವ ಇವರ ಹೆಸರು ಕೃಷ್ಣಮೂರ್ತಿ ಅಂತಾ. ಮಲೆನಾಡು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ನಿವಾಸಿ. ಇವರ ಕೈ ಬರಹ ಎಂತಹವರನ್ನು ಮನಸೋಲಿಸುತ್ತದೆ. ಇವರ ಹಸ್ತಾಕ್ಷರಕ್ಕೆ ಮನಸೋತ ಟೈಟಾನ್ ಕಂಪನಿಯುವರು ಬೆಲೆ ಬಾಳುವ ಉಡುಗೂರೆ ನೀಡಿ ಇವರ ಕೈ ಬರಹಕ್ಕೆ ಸೈ ಎಂದಿದ್ದಾರೆ. ಇವರ ಕೈ ಬರಹದಲ್ಲಿ ಮೂಡುವ ಅಕ್ಷರಕ್ಕೆ ಸರಿಸಾಟಿಯೇ ಇಲ್ಲ ಎಂಬತಾಗಿದೆ. ಇವರ ಹಸ್ತಾಕ್ಷರಕ್ಕೆ ಇಡೀ ಮಲೆನಾಡಿನ ಜನರೇ ಮೂಕವಿಸ್ಮಿತರಾಗಿದ್ದಾರೆ.

 35 ವರ್ಷಗಳಿಂದ ನಿರಂತರ ಅಕ್ಷರ ಅಭ್ಯಾಸ

35 ವರ್ಷಗಳಿಂದ ನಿರಂತರ ಅಕ್ಷರ ಅಭ್ಯಾಸ

ಮಲೆನಾಡಿನಲ್ಲಿ ಕಂಪ್ಯೂಟರ್ ಮೀರಿಸುವ ಹಸ್ತಾಕ್ಷರ ಹೊಂದಿರುವ ಕೃಷ್ಣಮೂರ್ತಿಯವರ ಕೈ ಬರಹದ ಈ ಫೋಟೋ ಕಾಪಿ ನೋಡಿದರೆ ಇದು ಯಾವುದೋ ಕಂಪ್ಯೂಟರ್ ಬರಹ ಎನ್ನುವ ಅನುಮಾನ ಜನರಲ್ಲಿ ಕಾಡತೊಡಗುತ್ತದೆ. ಆದರೆ ಇವು ಕೃಷ್ಣಮೂರ್ತಿಯವರ ಕೈಬರಹದಲ್ಲಿ ಮೂಡಿಬಂದಿರುವ ಅಕ್ಷರಗಳು.

ಜಯಪುರ ಪಟ್ಟಣದ ವಾಸಿಯಾಗಿರುವ ಕೃಷ್ಣಮೂರ್ತಿಯವರು ಓದಿರುವುದು 5ನೇ ತರಗತಿ ಮಾತ್ರ. ಚಿಕ್ಕವಯ್ಸಸಿನಿಂದಲೂ ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿರುವ ಫಲವೇ ಇಂದು ಅಕ್ಷರಗಳು ಅಚ್ಚುಕಟ್ಟಾಗಿ ಮೂಡಿಬರಲು ಸಾಧ್ಯವಾಗಿದೆ. ವೃತ್ತಿಯಲ್ಲಿ ವ್ಯಾಪಾರಿ ಆಗಿರುವ ಕೃಷ್ಣಮೂರ್ತಿ ಇಡೀ ಪಟ್ಟಣದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಲಗ್ನಪತ್ರಿಕೆ, ಯಾವುದಾದರೂ ಅರ್ಜಿಗಳನ್ನು ಬರೆಯಬೇಕಾದರೆ ಮೊದಲು ಸಂಪರ್ಕಿಸುವುದು ಇವರನ್ನೆ. ಏಕೆಂದರೆ ಅಚ್ಚುಕಟ್ಟಾಗಿ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯನ್ನು ಕರಗತ ಮಾಡಿಕೊಂಡಿರುವ ಕಲೆ ಕೃಷ್ಣಮೂರ್ತಿ ಹೊಂದಿದ್ದಾರೆ.

 ಅರ್ಜಿ ಬರೆಯಬೇಕಾದರೆ ಮೊದಲು ನೆನಪಾಗುವುದೇ ಕೃಷ್ಣಮೂರ್ತಿ

ಅರ್ಜಿ ಬರೆಯಬೇಕಾದರೆ ಮೊದಲು ನೆನಪಾಗುವುದೇ ಕೃಷ್ಣಮೂರ್ತಿ

ಕಂಪ್ಯೂಟರ್ ಪ್ರಿಂಟ್ ಮತ್ತು ಇವರ ಕೈ ಬರಹ ಎರಡನ್ನು ಕೂಡ ತಾಳೆ ಹಾಕಿದರೆ ಕೆಲಕಾಲ ಗೊಂದಲಕ್ಕೆ ಒಳಗಾಗುವುದು ಗ್ಯಾರಂಟಿ. ಏಕೆಂದರೆ ಅಷ್ಟು ಅಚ್ಚುಕಟ್ಟಾಗಿ ಕನ್ನಡ, ಇಂಗ್ಲಿಷ್ ಅಕ್ಷರಗಳನ್ನು ಕೃಷ್ಣಮೂರ್ತಿ ಬರೆಯುತ್ತಾರೆ. ಪಟ್ಟಣದ ಸುತ್ತಮುತ್ತ ಕರೆಂಟ್ ಕೈಕೊಟ್ಟ ವೇಳೆಯಲ್ಲಿ ಯಾವುದಾದರೂ ಕಂಪ್ಯೂಟರ್ ಅರ್ಜಿ ಬರೆಯಬೇಕಾದರೆ ಮೊದಲು ನೆನಪಾಗುವುದೇ ಕೃಷ್ಣಮೂರ್ತಿ. ಕರೆಂಟ್ ಕೈ ಕೊಟ್ಟ ವೇಳೆಯಲ್ಲಿ ಇವರ ಅಂಗಡಿಗೆ ಜನರು ಮುಗಿಬಿದ್ದು ಅರ್ಜಿಯನ್ನು ಬಳಸಿಕೊಳ್ಳುತ್ತಾರೆ. ಯಾವುದೇ ಹಣವನ್ನು ಪಡೆಯದೇ ಉಚಿತವಾಗಿ ಅರ್ಜಿಗಳನ್ನು ಬರೆದುಕೊಡುವ ಕೃಷ್ಣಮೂರ್ತಿ ಕಂಪ್ಯೂಟರನ್ನು ಮೀರಿಸುವ ಬರಹದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

 ಹಣ ಪಡೆಯದೆ ಅರ್ಜಿ ಬರೆದುಕೊಡುವ ಹಿರಿ ಜೀವ

ಹಣ ಪಡೆಯದೆ ಅರ್ಜಿ ಬರೆದುಕೊಡುವ ಹಿರಿ ಜೀವ

ಮಲೆನಾಡು ಮಾತ್ರವಲ್ಲ ಇಡೀ ರಾಜ್ಯದಲ್ಲೇ ಇವರ ಹಸ್ತಾಕ್ಷಾರ ಪ್ರಸಿದ್ಧಿ ಪಡೆದಿದೆ. ಇವರ ಕೈ ಬರಹವನ್ನು ಗುರುತಿಸಿದ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಗ್ರಾಮ ಪಂಚಾಯಿತಿ ಅರ್ಜಿ, ತಾಲೂಕು ಪಂಚಾಯಿತಿ ಅರ್ಜಿ ಸೇರಿದಂತೆ ಯಾವ ಅರ್ಜಿಯಿಂದರೂ ಉಚಿತವಾಗಿ ಬರೆದುಕೊಡುತ್ತಾರೆ. ಇಳಿ ವಯಸ್ಸಿನಲ್ಲಿ ಸಮಾಜಸೇವೆ ಮಾಡಬೆಕೆಂಬ ಹಂಬಲ ಹೊಂದಿದ್ದಾರೆ.

ಮಲೆನಾಡು ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕೃಷ್ಣಮೂರ್ತಿ ಹಸ್ತಾಕ್ಷರ ಪ್ರಸಿದ್ಧಿ ಪಡೆದಿದ್ದು, ಮಾಜಿ ಸಿಎಂ ದಿ. ದೇವರಾಜ ಅರಸು ಕೂಡ ಇವರ ಹಸ್ತಾಕ್ಷರಕ್ಕೆ ಮನಸೋತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದೇವರಾಜು ಅರಸು ಈ ಹಿಂದೆ ಒಮ್ಮೆ ಜಯಪುರಕ್ಕೆ ಬಂದಾಗ ಇವರ ಅಕ್ಷರ ನೋಡಿ ಭಾಷಣ ಮಾಡುವಾಗ ಕೃಷ್ಣಮೂರ್ತಿ ಹೆಸರು ಪ್ರಸ್ತಾಪಿಸಿ ಇವರ ಅಕ್ಷರ ನಾನು ಮನಸೋತಿದ್ದೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರಂತೆ ಎಂದು ಕೃಷ್ಣಮೂರ್ತಿ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.

 ಕಂಪ್ಯೂಟರ್ ಮುದ್ರಣಕ್ಕಿಂತ ಒಂದು ಕೈ ಮೇಲೆ

ಕಂಪ್ಯೂಟರ್ ಮುದ್ರಣಕ್ಕಿಂತ ಒಂದು ಕೈ ಮೇಲೆ

ಅಲ್ಲದೆ ಟೈಟಾನ್(Titan) ಕಂಪನಿ, ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಇವರ ಸಾಧನೆಯನ್ನು ಗಮನಿಸಿ ಸನ್ಮಾನವನ್ನು ಕೂಡ ಮಾಡಿವೆ. ಅಂದು ರೂಢಿಸಿಕೊಂಡ ಬಂದ ಹವ್ಯಾಸ ಇವರಿಗೆ ಇಂದು ವರದಾನವಾಗಿ ಪರಿಣಾಮಿಸಿದೆ. ಇವರ ಕಲೆಗೆ ಇಡೀ ಮಲೆನಾಡಿನ ಜನರೇ ಪ್ರಶಂಸಿಸುವ ಮಟ್ಟಿಗೆ ಕೈ ಬರಹ ಹೊಂದಿದೆ. ಇವರ ಹಸ್ತಾಕ್ಷರ ಕಂಪ್ಯೂಟರ್ ಮುದ್ರಣಕ್ಕಿಂತ ಒಂದು ಕೈ ಮೇಲೆ ಎನ್ನುವಷ್ಟರ ಮಟ್ಟಿಗೆ ಇದೆ. ಸರಳ ಜೀವಿಯಾಗಿರುವ ಕೃಷ್ಣಮೂರ್ತಿ, ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಜ್ಯೋತಿಷ್ಯ ಹೇಳುವುದರಲ್ಲೂ ಪ್ರಖ್ಯಾತಿ ಪಡೆದಿದ್ದಾರೆ.

 ತಂದೆಯ ಈ ಸಾಧನೆ ಮಕ್ಕಳಿಂದಲೂ ಮೆಚ್ಚುಗೆ

ತಂದೆಯ ಈ ಸಾಧನೆ ಮಕ್ಕಳಿಂದಲೂ ಮೆಚ್ಚುಗೆ

ನಮ್ಮ ತಂದೆ ಈ ಬರವಣಿಗೆ ನಮಗೆ ತುಂಬಾ ಖುಷಿ ಆಗಿದೆ. ಜೊತೆಗೆ ನಮ್ಮ ತಂದೆಯನ್ನು ಗುರುತಿಸಿ ಮೆಚ್ಚುಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆ ತಂದಿದೆ. ಅವರ ಸರಳತೆ ಈ ಸಾಧನೆಗೆ ಕೈಗನ್ನಡಿ. ಅವರು ಯಾವಾಗಲೂ ಖುಷಿಯಾಗಿರುವಂತೆ ಬಯಸುತ್ತೇವೆ ಅನ್ನುತ್ತಾರೆ ಕೃಷ್ಣಮೂರ್ತಿ ಮಗಳು.

ಒಟ್ಟಾರೆ ಕೃಷ್ಣಮೂರ್ತಿ ಕೈ ಬರಹ ಇಡೀ ರಾಜ್ಯವೇ ಮೆಚ್ಚುವಂತದ್ದು. ಈ ಕಂಪ್ಯೂಟರ್ ಕಾಲದಲ್ಲಿ ಕೈಬರಹ ದೂರವಾಗುವ ಈ ಕಾಲದಲ್ಲಿ ಕೈಬರಹದಿಂದಲೂ ಫೇಮಸ್ಸು ಆಗಿದ್ದಾರೆ. ಅವರ ಈ ಇಳಿವಯಸ್ಸಿನಲ್ಲಿ ಈ ರೀತಿಯ ಸಾಧನೆಗೆ ನಮ್ಮದೊಂದು ಸಲಾಂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+